ಬಳ್ಳಾರಿ | ಹರಪನಹಳ್ಳಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ₹4.8 ಲಕ್ಷ ದಾಭ

Date:

ಹರಪನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್‌) ಪ್ರಸಕ್ತ ಸಾಲಿಗೆ 4,87,364.45 ಲಕ್ಷ ರೂ. ಲಾಭವಾಗಿದೆ ಎಂದು ಸಂಘದ ಅಧ್ಯಕ್ಷೆ ಎಚ್. ನೇತ್ರಾವತಿ ಹೇಳಿದರು.

ಹರಪನಹಳ್ಳಿಯಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. “ಮುಂದಿನ ದಿನಗಳಲ್ಲಿ ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರವನ್ನು ಆರಂಭಿಸಲು ಪ್ರಯತ್ನಿಸಲಾಗುವುದು” ಎಂದರು.

“ರೈತರಿಗೆ ರಸಗೊಬ್ಬರ ಪೂರೈಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಬೇಕಾಗಿದೆ. ಸಂಘದ ಎಲ್ಲ ಸದಸ್ಯರು ಮತ್ತು ತಾಲೂಕಿನ ಎಲ್ಲ ರೈತರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರ ಅನುಕೂಲಕ್ಕಾಗಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡಲು ಪ್ರಾರಂಬಿಸಲಾಗವುದು. ಸರ್ಕಾರದ ಷೇರು ಬಂಡವಾಳ ಸರಿದೂಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಷೇರು ಹಣವನ್ನು ಸಂಘದಲ್ಲಿ ತೊಡಗಿಸಬೇಕು” ಎಂದರು.

ಸಭೆಯಲ್ಲಿ ಸಂಘದ ಪ್ರಭಾರಿ ಕಾರ್ಯದರ್ಶಿ ಎಚ್.ತಿರುಪತಿ ಬಳಿಕ ಹಿರಿಯ ಸದಸ್ಯ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕುಲಮಿ ಅಬ್ದುಲ್ಲಾ, ನಿರ್ದೇಶಕರಾದ ಬಿ.ಕೆ ಪ್ರಕಾಶ, ಎಚ್.ತಿಮ್ಮನಾಯ್ಕ, ಎಲ್.ಬಿ.ಹಾಲೇಶನಾಯ್ಕ, ಪಿ.ಪ್ರೇಮಕುಮಾರ, ಗಿಡ್ಡಳ್ಳಿ ನಾಗರಾಜ, ತಳವಾರ ಮಂಜಪ್ಪ, ಬಿ.ರೇವಣಸಿದ್ದಪ್ಪ, ಎಂ.ವಿ.ಕೃಷ್ಣಕಾAತ, ಕೆ.ವಿರುಪಾಕ್ಷಪ್ಪ, ವಿ.ಜಿ. ಪ್ರಕಾಶಗೌಡ, ಯು.ಹನುಮಂತಪ್ಪ, ಮಂಜುಳಾ ಮೂರ್ತಿ ಹಾಗೂ ಚಿಕ್ಕೇರಿ ಬಸಪ್ಪ, ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಡಿ.ಅಬ್ದುಲ್ ರಹಿಮಾನ್ ಸಾಹೇಬ್, ಆಲಮರಸಿಕೇರಿ ಪರುಶುರಾಮಪ್ಪ, ಕಂಚಿಕೇರಿ ಜಯಲಕ್ಷೀ. ಗುಂಡಗತ್ತಿ ನೇತ್ರಾವತಿ, ಸೋಗಿ ಇಬ್ರಾಹಿಂ, ಶ್ರಿಕಾಂತ, ಶಿವಮೂರ್ತಿಯ್ಯ ತಿರುಕಪ್ಪ, ಪಿ.ಪರುಶುರಾಮ, ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಮುಫ್ತಿ ಸಲ್ಮಾನ್ ಅಝ್ಹರಿ ಬಿಡುಗಡೆಗೆ ಆಗ್ರಹ

ಗುಜರಾತ್‌ನ ಜುನಘಡ್‌ನಲ್ಲಿ ದ್ವೇಷ ಭಾಷಣ ಆರೋಪದಡಿ ಮೌಲಾನ ಮುಫ್ತಿ ಸಲ್ಮಾನ್ ಅಝ್ಹರಿ...

ವಿಜಯನಗರ | ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ರೈತ ಸಂಘ ಪ್ರತಿಭಟನೆ

ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ...

ವಿಜಯನಗರ | ಹಂಪಿ‌ ವಿರೂಪಾಕ್ಷ ದೇವಸ್ಥಾನದಲ್ಲಿ ತುಂಡುಡುಗೆ ನಿಷೇಧ; ಭಕ್ತಿ ಭಾವ ಮೂಡಿಸಲು ಈ ಕ್ರಮ ಎಂದ ಜಿಲ್ಲಾಧಿಕಾರಿ!

ವಿಜಯನಗರ ಜಿಲ್ಲೆಯ ಹಂಪಿ‌ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದ್ದು, ವಿರೂಪಾಕ್ಷನ...

ಬಳ್ಳಾರಿ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...