ಉಸ್ತುವಾರಿಗೆ ಮಾತ್ರ ಯಾಕೆ, ಎಲ್ಲರಿಗೂ ದೂರು ನೀಡಲಿ: ಬಿ ಕೆ ಹರಿಪ್ರಸಾದ್‌ ಕಿಡಿ

Date:

  • ‘ತಮ್ಮ ಮೇಲಿರುವ ಹಗರಣಗಳಿಂದ ಮೊದಲು ಪಾರಾಗಲಿ’
  • ‘ಎಚ್‌ ವಿಶ್ವನಾಥ್ ಕಾಂಗ್ರೆಸ್‌ನಲ್ಲಿಯೇ ಇದ್ದಾರಾ?: ವ್ಯಂಗ್ಯ’

ಹಗರಣಗಳಿಂದ ಪಾರಾಗುವ ಸಲುವಾಗಿಯೇ ‌ನನ್ನ ವಿರುದ್ಧ ಕೆಲವರು ಹೇಳಿಕೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವವರು ಅದಕ್ಕೂ ‌ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಬಾಳ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

“ಪಕ್ಷದ ರಾಜ್ಯ ಉಸ್ತುವಾರಿಗೆ ನನ್ನ ವಿರುದ್ಧ ದೂರು ನೀಡುವುದಾಗಿ ಕೆಲವರು ಹೇಳುತ್ತಿದ್ದಾರೆ. ದೂರು ನೀಡಿದರೆ ಬಹಳ ಸಂತೋಷ. ಉಸ್ತುವಾರಿಗೆ ಮಾತ್ರ ಯಾಕೆ, ಎಲ್ಲರಿಗೂ ದೂರು ನೀಡಲಿ” ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಹರಿಹಾಯ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನನ್ನ ವಿರುದ್ಧ ದೂರು ನೀಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಬೇಕು. ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲು ದೂರು ನೀಡುತ್ತಿದ್ದಾರೆ. ಅವರಿಗೆ ಹಗರಣಗಳಿಂದ ಪಾರಾಗುವ ಧೈರ್ಯವಿದ್ದರೆ ದೂರು ನೀಡುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಲೇ ಇರಲಿ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸಮಾಧಾನದ ಕಿಡಿ ಜ್ವಾಲೆಯಾಗಿ ಸರ್ಕಾರವನ್ನು ಸುಡದಿರಲಿ

“ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ತಿಂಗಳಲ್ಲಿ ಪತನವಾಗಲಿದೆ” ಎಂದು ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಕಿತ್ತಾಟ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇದೆ. ಅದರಂತೆ ಮುಕ್ತವಾಗಿ ಮಾತನಾಡುತ್ತೇನೆ. ಬಿಜೆಪಿ ನಾಯಕರ ಹಾಗೆ ನಾಗಪುರದಿಂದ ನಿರ್ದೇಶನ ತೆಗೆದುಕೊಂಡು ಮಾತನಾಡುವುದಿಲ್ಲ” ಎಂದು ತಿರುಗೇಟು ನೀಡಿದರು.

ಹರಿಪ್ರಸಾದ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, “ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರಾ?” ಎಂದು ವ್ಯಂಗ್ಯವಾಗಿ ಮರುಪ್ರಶ್ನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಕ್ರೀಡೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿಯು ವಿಶಿಷ್ಟವಾಗಿ ಮನರೇಗಾ ಯೋಜನೆಗೆ ಸಾಂಸ್ಕೃತಿಕ,...

ವಿಜಯಪುರ | ಬಿಜೆಪಿ ಅಧರ್ಮ ಸಾರುತ್ತದೆ, ಕಾಂಗ್ರೆಸ್ ಧರ್ಮ ಬಿತ್ತುತ್ತಿದೆ: ಶಾಸಕ ಅಶೋಕ್ ಮನಗೂಳಿ

ಇದು ಧರ್ಮ, ಅಧರ್ಮದ ಮದ್ಯ ನಡೆಯುತ್ತಿರುವ ಚುನಾವಣೆ, ಬಿಜೆಪಿ ಅಧರ್ಮವನ್ನು ಸಾರುತ್ತದೆ,...

ವಿಜಯಪುರ | ಕಾಂಗ್ರೆಸ್ ಮಾರುಕಟ್ಟೆ ವ್ಯಾಪಾರಿಗಳ ಪರವಾಗಿದೆ: ಎಂ.ಬಿ ಪಾಟೀಲ

ಕಾಂಗ್ರೆಸ್ ಯಾವತ್ತೂ ಆರ್ಥಿಕತೆ ಮೂಲವಾದ ವ್ಯಾಪಾರ-ವಹಿವಾಟಿನ ಪರವಿದೆ. ನಾವು ವ್ಯಾಪಾರಿಗಳ ಹಿತ...

ಕೋಮುವಾದಿ ಮಾತನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ.ಸಿ ಸುಧಾಕರ್

'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...