ಇಬ್ಬರು ಯುವಕರಿಂದ ಬ್ಲ್ಯಾಕ್ ಮೇಲ್ ; ಯುವತಿ ಆತ್ಮಹತ್ಯೆ

Date:

ಇಬ್ಬರು ಯುವಕರಿಂದ ನಿರಂತರ ಕಿರುಕುಳ ಅನುಭವಿಸಿದ್ದ ಯುವತಿ, ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಜಿ ನಿಹಾರಿಕಾ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಆಂಧ್ರಪ್ರದೇಶದ ಧರ್ಮಾವರಂನ ನಿವಾಸಿಯಾದ ನಿಹಾರಿಕಾ ಬೆಂಗಳೂರಿನಲ್ಲಿ ಬಿ.ಟೆಕ್‌ ಪದವಿ ಪಡೆದು, ಇಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆ ಆಂಧ್ರ ಮೂಲದ ಯುವಕನೊಬ್ಬನನ್ನು ನಿಹಾರಿಕಾ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೆಲಸಕ್ಕೆ ಸೇರಿದ ಬಳಿಕ ಆಕೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಬ್ಬ ಯುವಕ ಪರಿಚಯವಾಗಿದ್ದಾನೆ. ಆತನೊಂಂದಿಗೆ ನಿಹಾರಿಕ ಸ್ನೇಹ ಬೆಳೆಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಇಬ್ಬರನ್ನೂ ನಿಹಾರಿಕಾ ಪ್ರೀತಿಸುತ್ತಿದ್ದಾರೆಂದು ಭಾವಿಸಿದ ಯುವಕರು ಆಕೆಗೆ ಬ್ಲಾಕ್‌ಮೇಲ್‌ ಮಾಡುವ ಮೂಲಕ ನಿರಂತವಾಗಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಿರುಕುಳದಿಂದ ಮನನೊಂದಿದ್ದ ಯುವತಿ ಜೂನ್‌ 23ರ ಸಂಜೆ ತನ್ನೂರಿಗೆ ತೆರಳಲು ಧರ್ಮಾವರಂ ಬಸ್‌ ಹತ್ತಿದ್ದಾಳೆ. ಆದರೆ, ಮಾರ್ಗ ಮಧ್ಯೆ, ಬಾಗೇಪಲ್ಲಿಯಲ್ಲಿ ಬಸ್‌ ಇಳಿದು, ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೋಬೋಟ್‌ ನೆರವಿನಿಂದ 30 ವರ್ಷದ ರೋಗಿಗೆ ಮಗುವಿನ ಮೂತ್ರಪಿಂಡ ಕಸಿ

ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಬಾಗೇಪಲ್ಲಿ ಪೊಲೀಸರು, “ಊರಿಗೆ ಹೋಗುತ್ತಿರುವುದಾಗಿ ಆಕೆ ತನ್ನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ, ಆಕೆ ಮನೆಗೆ ತೆರಳಿಲ್ಲ. ನಾಲ್ಕು ದಿನಗಳು ಕಳೆದರೂ ಮಗಳು ಮನೆಗೆ ಬರದಿರುವುದನ್ನು ಗಮನಿಸಿದ ಪಾಲಕರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಹುಡುಕಾಡಿದ್ದಾರೆ. ಆದರೆ, ಆಕೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ: 3 ಚಾಕು, 40 ಸಾವಿರ ನಗದು ಜಪ್ತಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು...

ವಲಸೆ ಕಾರ್ಮಿಕರ ಮಕ್ಕಳ ಮಾರ್ಗದರ್ಶಿಯಾಗಿದ್ದ ಬೆಂಗಳೂರು ಎಸ್ಐ ಈಗ ಐಎಎಸ್ ಅಧಿಕಾರಿ

ತಮ್ಮ ಸರ್ಕಾರಿ ವೃತ್ತಿಯ ಜೊತೆ ವಲಸೆ ಕಾರ್ಮಿಕರ ಮಕ್ಕಳ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ...

ಬೆಂಗಳೂರು | ಡಾ. ಸುನಿಲ್ ಕುಮಾರ್ ಹೆಬ್ಬಿ ಮೇಲೆ ಮಾರಣಾಂತಿಕ ಹಲ್ಲೆ; ಪೊಲೀಸ್ ರಕ್ಷಣೆಗೆ ಆಗ್ರಹ

ಯಲಹಂಕದ ಕೇಂದ್ರೀಯ ವಿಹಾರ ಬಹು ಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ವಾಸ ಮಾಡುತ್ತಿರುವ...

ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ: ಚುನಾವಣಾ ಆಯೋಗಕ್ಕೆ ಡಿ.ಕೆ. ಸುರೇಶ್ ಆಗ್ರಹ

"ಕುಮಾರಸ್ವಾಮಿ ಅವರ ಹೇಳಿಕೆ ಮಹಿಳಾ ಕುಲಕ್ಕೆ ಮಾಡಿದ ಅಪಮಾನವಾಗಿದ್ದು ಕುಮಾರಸ್ವಾಮಿ ವಿರುದ್ಧ...