ಬಿಹಾರ | ನಿರ್ಮಾಣ ಹಂತದ ಸೇತುವೆ ಕುಸಿತ ; ತಿಂಗಳಲ್ಲೇ ಎರಡನೇ ಘಟನೆ

Date:

  • ಬಿಹಾರ ಕಿಶನ್‌ಗಂಜ್‌ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ
  • ಜೂನ್‌ 4ಕ್ಕೆ ಖಗಾರಿಯಾ ಜಿಲ್ಲೆಯಲ್ಲಿ ಕುಸಿದಿದ್ದ ನಿರ್ಮಾಣ ಹಂತದ ಸೇತುವೆ

ಬಿಹಾರ ರಾಜ್ಯದ ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಶನಿವಾರ (ಜೂನ್‌ 24) ನಿರ್ಮಾಣ ಹಂತದ ಸೇತುವೆಯೊಂದರ ಭಾಗ ಕುಸಿದು ಬಿದ್ದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆ ಕುಸಿದು ಬಿದ್ದು ಮೂರು ವಾರಗಳ ಬಳಿಕ ಇದೀಗ ಮತ್ತೊಂದು ಸೇತುವೆ ಕುಸಿದಿದೆ.

“ರಾಜಧಾನಿ ಪಾಟ್ನಾ ಜಿಲ್ಲೆಯಿಂದ 400 ಕಿ.ಮೀ ದೂರದಲ್ಲಿರುವ ಕಿಶನ್ಗಂಜ್ ಜಿಲ್ಲೆಯ ಮೆಚ್ಚಿ ನದಿಯ ಮೇಲಿನ ಸೇತುವೆಯ ಕಂಬ ಕುಸಿದಿದೆ. ಎನ್‌ಎಚ್—27ಇ ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿರ್ಮಾಣ ಹಂತದಲ್ಲಿರುವ ಈ ಸೇತುವೆ ಅಸ್ಸಾಂ ರಾಜ್ಯದ ಕಿಶನ್ಗಂಜ್ ಮತ್ತು ಕತಿಹಾರ್ ಜಿಲ್ಲೆಗಳನ್ನು ಸಂಪರ್ಕಿಸುತ್ತಿತ್ತು” ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಅರವಿಂದ್ ಕುಮಾರ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಕಾರಣ ಪತ್ತೆಗೆ ತಜ್ಞರಿರುವ ಐದು ಸದಸ್ಯರ ತಂಡವನ್ನು ರಚಿಸಲಾಗಿದೆ. ಸೇತುವೆ ನಿರ್ಮಾಣದಲ್ಲಿ ದೋಷವಿದ್ದಂತೆ ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅರವಿಂದ್ ಕುಮಾರ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರಪ್ರದೇಶ | ಪೊಲೀಸ್ ಬಂಧನದಲ್ಲಿದ್ದ ಇಬ್ಬರು ದಲಿತರ ಸಾವು; ಕಸ್ಟಡಿ ಕೊಲೆ ಆರೋಪ

ಬಿಹಾರ ರಾಜ್ಯದಲ್ಲಿ ಪೂರ್ಣಗೊಂಡಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಎಲ್ಲ ಸೇತುವೆಗಳ ರಚನೆ ಕುರಿತು ಪರಿಶೀಲನೆ ನಡೆಸುವುದು ಅಗತ್ಯವಿದೆ ಎಂದು ಬಿಹಾರ ಎಂಜಿನಿಯರ್ ಅಸೋಸಿಯೇಷನ್ ತಿಳಿಸಿದೆ.

ಜೂನ್ 4 ರಂದು ಖಗಾರಿಯಾ ಜಿಲ್ಲೆಯಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ನಾಲ್ಕು ಪಥದ ಬೃಹತ್ ಸೇತುವೆ ಕುಸಿದಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...

ನಿಜವಾದ ಬದಲಾವಣೆ ಮಾಡುವವರು ನೀವು: ಮೊದಲ ಬಾರಿ ಮತದಾನ ಮಾಡುವವರಿಗೆ ಖರ್ಗೆ ಸಂದೇಶ

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮೊದಲ...