ಬೀದರ್‌ | ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ ಧಮ್ಮ ಒಂದೇ ಮಾರ್ಗ: ವೈಜಿನಾಥ ಸೂರ್ಯವಂಶಿ

Date:

ಭಾರತವನ್ನು ಪ್ರಬುದ್ಧ ಭಾರತವನ್ನಾಗಿ ನಿರ್ಮಿಸಲು ಬುದ್ಧ ಧಮ್ಮ ಒಂದೆ ಮಾರ್ಗ. ಇಂದಿನ ಸಮಾಜದ ಪರಿಸ್ಥಿತಿ ತುಂಬಾ ಕಲುಷಿತಗೊಂಡಿದೆ. ಸುಳ್ಳು, ಮೋಸ, ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ  ನೋಡಿದರೆ ಮನುಷ್ಯ ಜನಾಂಗ ದುರ್ಗತಿ ಕಡೆ ಸಾಗುತ್ತಿದೆ ಎನಿಸುತ್ತದೆ ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ವೈಜಿನಾಥ ಸೂರ್ಯವಂಶಿ ಹೇಳಿದರು.

ಔರಾದ ಪಟ್ಟಣದ ಕನ್ನಡ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಶಾಖೆ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, “ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಿಬೇಕಾದರೆ ಬುದ್ಧ ಗುರುವಿನ ಸಂದೇಶ ತುಂಬಾ ಅವಶ್ಯಕತೆವಿದೆ. ಆದ್ದರಿಂದ ಧಮ್ಮ ರಥವನ್ನು ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ನಡೆಯಬೇಕಿದೆ” ಎಂದರು.

ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಕಂಟೆ ಮಾತನಾಡಿ, “ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಬೌದ್ಧಮಯ ನಿರ್ಮಾಣಕ್ಕಾಗಿ ಈ ಸಂಘಟನೆ ಸ್ಥಾಪಿಸಿದರು. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಬಾಬಾ ಸಾಹೇಬರ ಆಶಯ ಈಡೇರಿಸಲು ಶ್ರಮಿಸುವ ಮುಖಾಂತರ ಸಮತೆಯ ಭಾರತ ಕಟ್ಟಲು ಮುಂದಾಗಬೇಕು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನೂತನ ಪದಾಧಿಕಾರಿಗಳ ನೇಮಕ:

ಭಾರತೀಯ ಬೌದ್ಧ ಮಹಾಸಭಾ ಬೀದರ್‌ ಜಿಲ್ಲಾ ಸಮಿತಿಯ ನಿಯಮಾವಳಿ ಅನುಸಾರವಾಗಿ ಔರಾದ ತಾಲೂಕಾ ನೂತನ ಅಧ್ಯಕ್ಷರಾಗಿ ಗಣಪತಿ ವಾಸುದೇವ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ (ಸಮತಾ ಸೈನಿಕದಳ ವಿಭಾಗ), ಸುಭಾಷ ಲಾಧಾ, ಪಂಡರಿ ಕಸ್ತೂರೆ (ಸಂಸ್ಕಾರ ವಿಭಾಗ), ವೈಜಿನಾಥ ಗಲಗಲೇ, (ಪ್ರಧಾನ ಕಾರ್ಯದರ್ಶಿ), ಡಾ.ಮಿಲಿಂದ್ ಸೋಮವಂಶಿ (ಖಜಾಂಚಿ) ಅವರನ್ನು ನೇಮಕ ಮಾಡಲಾಯಿತು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರವೆಸಗಿ, ತುಂಡುತುಂಡಾಗಿ ಕತ್ತರಿಸಿ ಭೀಕರ ಹತ್ಯೆ

ಕಾರ್ಯಕ್ರಮದಲ್ಲಿ ಭೀಮಣ್ಣಾ ಭಾವಿಕಟ್ಟಿ, ದಯಾನಂದ ನವಲೇ, ಯಶವಂತರಾವ ಬಿಗಾಂವಕರ್, ಮೊಘಲಪ್ಪಾ ಸುಂದಾಳ, ನೌನಾಥ್ ಚಟ್ನಾಳ, ಸಂಜುಕುಮಾರ ಲಕ್ಕೆ, ಶಿವಕುಮಾರ ಕಾಂಬ್ಳೆ, ಭೀಮರಾವ ಜೋನ್ನೆಕೆರೆ, ನಂದಾದೀಪ ಬೋರಳೆ, ರಾಮ ಗೋಡಬೊಲೆ, ಮುನ್ನಾ ಗೊಡಬೋಲೆ, ಸಿದ್ಧಾರ್ಥ ಕಾಂಬ್ಳೆ ರಾಹುಲ್ ಖಂದಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಬಡ ಜನರ ಜೀವನಕ್ಕೆ ಉರುಳಾದ ಭೂ ಗುತ್ತಿಗೆ ಆದೇಶ

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಮೂಲಭೂತ ಹಕ್ಕುಗಳು ಹೋಗಲಿ ಕೊಡಗಿನ...

ವಿಜಯಪುರ | ಬಿಜೆಪಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ: ಸಚಿವ ಶಿವಾನಂದ ಪಾಟೀಲ್‌

ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಲ್ಲಿದ್ದಾಗಲೇ ಬಂಧನ ಮಾಡಿ ಬಿಜೆಪಿ ಭಯದ ವಾತಾವರಣ ಸೃಷ್ಟಿ...

ಶಿವಮೊಗ್ಗ | ಹಾರನಳ್ಳಿಯಲ್ಲಿ ಗೀತಾ ಶಿವರಾಜಕುಮಾರ್ ಪ್ರಚಾರ ಸಭೆ

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ...