ಜಾತಿ ಪದ್ಧತಿ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ; ವ್ಯಾಪಾರಿಗಳು ಮತ್ತು ದೇವಸ್ಥಾನ ಮಂಡಳಿಗಳಿಂದ ವಿರೋಧ

Date:

  • ಅನಿಷ್ಟ ಪದ್ಧತಿ ನಿಷೇಧಿಸಿದ ಅಮೆರಿಕದ ಎರಡನೇ ರಾಜ್ಯ ಕ್ಯಾಲಿಫೋರ್ನಿಯಾ
  • ಈ ಮೊದಲು ವಾಷಿಂಗ್ಟನ್‌ನ ಸಿಯಾಟಲ್ ನಗರವು ಮಸೂದೆಯನ್ನು ಜಾರಿಗೊಳಿಸಿತ್ತು

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಜಾತಿ ಪದ್ಧತಿಯನ್ನು ನಿಷೇಧಿಸುವ ಮಸೂದೆ ಮಂಗಳವಾರ ಜಾರಿಯಾಗಿದ್ದು, ಜಾತಿ ಪದ್ದತಿಯನ್ನು ತೊಡೆದು ಹಾಕಿದ ಅಮೆರಿಕದ ಎರಡನೇ ರಾಜ್ಯ ಎಂಬ ಹಿರಿಮೆ ತನ್ನದಾಗಿಸಿಕೊಂಡಿತು.

ಕ್ಯಾಲಿಫೋರ್ನಿಯಾದ ಮೊದಲ ಮುಸ್ಲಿಂ ಹಾಗೂ ಅಫ್ಘಾನ್‌ ಸೆನೇಟರ್‌ ಆಗಿರುವ ಆಯಿಷಾ ವಾಹಬ್ ಈ ಮಸೂದೆಯನ್ನು ಪರಿಚಯಿಸಿದ್ದು, ಸಮಿತಿಯ ಸದಸ್ಯರು ಅವಿರೋಧವಾಗಿ ಮಸೂದೆ ಪರ ಬೆಂಬಲ ವ್ಯಕ್ತಪಡಿಸಿದರು. ಈಕ್ವಾಲಿಟಿ ಲ್ಯಾಬ್ಸ್‌ನ ಜಾತಿ ಸಮಾನತೆ ನಾಗರಿಕ ಹಕ್ಕುಗಳ ನಾಯಕರು, ಕ್ಯಾಲಿಫೋರ್ನಿಯದ ಜಾತಿ ಸಮಾನತಾ ವೇದಿಕೆ ಹಾಗೂ ಆಯಿಷಾ ವಹಾಬ್, ಇತರರು ಕೆಲವು ವಾರಗಳಿಂದ ವಕಾಲತ್ತು ವಹಿಸಿದ ನಂತರ ಸೆನೆಟ್ ಸಮಿತಿಯ ಈ ಮಸೂದೆಯನ್ನು ಅಂಗೀಕರಿಸಿದೆ.

ಈ ಹಿಂದೆ ವಾಷಿಂಗ್ಟನ್‌ನ ಸಿಯಾಟಲ್ ನಗರವು ಈ ಮಸೂದೆಯನ್ನು ಜಾರಿಗೊಳಿಸಿತ್ತು. ಜಾತಿ ಪದ್ಧತಿ ನಿಷೇಧಿಸಿದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಅಮೆರಿಕ ಅಧ್ಯಕ್ಷೀಯ ಚುನಾವಣೆ; ಮತ್ತೆ ಸ್ಪರ್ಧಿಸುವುದಾಗಿ ಘೋಷಿಸಿದ ಜೋ ಬೈಡನ್

ಮಸೂದೆ ಜಾರಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಈಕ್ವಾಲಿಟಿ ಲ್ಯಾಬ್ ಸಂಘಟನೆಯ ತೇನ್ಮೋಳಿ ಸೌಂದರರಾಜನ್, “ಇದು ಸುಮಾರು 15 ವರ್ಷ ಗಳ ಹೋ ರಾಟದ ಫಲವಾಗಿದೆ‘ ಎಂದು ತಿಳಿಸಿದ್ದಾರೆ.

‘ಕ್ಯಾಲಿರ್ಫೋನಿಯಾದಲ್ಲಿ ಈ ಮಸೂದೆ ಜಾರಿಗೆ ಬರುವುದು ಅತ್ಯವಶ್ಯಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಏಷ್ಯನ್ – ಅಮೆರಿಕನ್ ಸಮುದಾಯಗಳ ಮೇಲೆ ಜಾತಿ ತಾರತಮ್ಯ ನಡೆಯುತ್ತಲೇ ಇದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಸಂಘಟಿತರಾಗಿದ್ದೇವೆ. ಈಕ್ವಾಲಿಟಿ ಲ್ಯಾಬ್ ಸಂಘಟನೆಯ ಮೂಲಕ ರಾಜ್ಯದಾದ್ಯಂತ ಹೋರಾಟ ಮಾಡಲಾಗಿತ್ತು. ಈ ಹೋರಾಟದ ಫಲವಾಗಿಯೇ ವಾಷಿಂಗ್ಟನ್‌ನ ಸಿಯಾಟಲ್ ನಗರದಲ್ಲಿ ಫೆಬ್ರುವರಿಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆ ಜಾರಿಗೊಳಿಸಲಾಗಿತ್ತು. ಈಗ ಕ್ಯಾಲಿರ್ಫೋನಿಯಾದಲ್ಲಿ ಜಾರಿಗೆ ಬಂದಿದೆ‘ ಎಂದು ತೇನ್ಮೋಳಿ ಸೌಂದರರಾಜನ್ ಹೇಳಿದರು.

ಜಾತಿ ಪದ್ಧತಿ ವಿರೋಧಿ ಮಸೂದೆ ಜಾರಿಗೆ ಏಷ್ಯನ್ – ಅಮೆರಿಕನ್ ವ್ಯಾಪಾರಿಗಳು ಮತ್ತು ದೇವಸ್ಥಾನ ಮಂಡಳಿಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.

ಏಷ್ಯನ್ – ಅಮೆರಿಕನ್‌ ಹೋಟೆಲ್‌ ಮಾಲೀಕರ ಸಂಘದ ಮಂಡಳಿಯ ಸದಸ್ಯ ಕಲ್ಪೇ ಶ್ ಜೋಶಿ, ‘ಇದು ಭಾರತೀಯ ಹೋಟೆಲ್ ಮತ್ತು ಹೋಟೆಲ್‌ ಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಈ ಮಸೂದೆಯು ಅಂಗೀಕಾರವಾದರೆ, ಸಣ್ಣ ಉದ್ಯಮಗಳ ವಿರುದ್ಧ ಕ್ಷುಲ್ಲಕ ಮೊಕದ್ದಮೆಗಳನ್ನು ಹೂಡುವ ಸಾಧ್ಯತೆಯಿದೆ. ಇದರಿಂದ ಸಣ್ಣ ವ್ಯಾಪಾರಿಗಳು ವ್ಯಾಪಾರದಿಂದ ಹೊರಗುಳಿಯುವ ಸಾಧ್ಯತೆಯಿದೆ‘ ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆನಡಾ: ಭಾರತೀಯ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾರಿನಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆ ಕೆನಡಾ ದ...

17 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್‌ ಮೂಲದ ಸರಕು ಹಡಗು ವಶಪಡಿಸಿಕೊಂಡ ಇರಾನ್

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು...

ಇಸ್ರೇಲ್ ಕಡೆಗೆ ಹಲವು ಡ್ರೋನ್‌ಗಳನ್ನು ಹಾರಿಸಿದ ಇರಾನ್: ಯುದ್ಧದ ಭೀತಿ

ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿಯ ಮೇಲೆ ಕಳೆದ ವಾರ ಇಸ್ರೇಲ್ ದಾಳಿ...

ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ...