ಕೆನಡಾದಲ್ಲಿ ಇನ್ನು ಮುಂದೆ ಪ್ರತಿ ಸಿಗರೇಟಿನ ಮೇಲೂ ಹಾನಿ ಎಚ್ಚರಿಕೆ ಸಂದೇಶ

Date:

ಕೆನಡಾ ದೇಶವು 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ ಶೇಕಡಾ 5ರಷ್ಟು ತಗ್ಗಿಸಬೇಕು ಎಂಬ ಗುರಿಯ ಹಿನ್ನೆಲೆಯಲ್ಲಿ ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಹಾನಿ ಎಚ್ಚರಿಕೆ ಮುದ್ರಿಸುವ ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಅರೋಗ್ಯ ಹಾನಿ ಎಚ್ಚರಿಕೆ ಮುದ್ರಿಸಿದ ದೇಶಗಳ ಪೈಕಿ ಕೆನಡಾ ವಿಶ್ವದ ಮೊದಲ ರಾ‍‍‍ಷ್ಟ್ರವಾಗಲಿದೆ.

ಪ್ರತಿ ವರ್ಷ ಮೇ 31ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕೆನಡಾದಲ್ಲಿ ಯುವ ಸಮುದಾಯವೇ ಸಿಗರೇಟಿನ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಈ ಕಾರಣದಿಂದ ಸಿಗರೇಟಿನ ಮೇಲೆ ನೇರವಾಗಿ ಆರೋಗ್ಯ ಹಾನಿ ಜಾಗೃತಿ ಮೂಡಿಸುವ ಸಾಲುಗಳನ್ನು ಕೆನಡಾ ದೇಶ ಮೊದಲ ಬಾರಿಗೆ ಮುದ್ರಿಸಿದೆ.

ಹೊಸ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ ಮತ್ತು ಲೇಬಲ್‌ ಮಾಡುವ ನಿಯಮಗಳನ್ನು ಕೆನಡಾ ಸರ್ಕಾರ ಪಾಲಿಸುತ್ತಿದೆ. ಆದಕಾರಣ ಯುವಕರನ್ನು ಮತ್ತು ತಂಬಾಕು ಅಲ್ಲದ ಬಳಕೆದಾರರನ್ನು ನಿಕೋಟಿನ್ ವ್ಯಸನದಿಂದ ದೂರವಿಡಲು ನಿರ್ಧಾರ ಕೈಗೊಂಡಿದೆ. ಯುವಕರಿಗೆ ತಂಬಾಕು ಆಕರ್ಷಣೆ ಆಗದಂತೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೆನಡಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

“ತಂಬಾಕು ಸೇವನೆಯಿಂದ ಪ್ರತಿ ವರ್ಷ 48 ಸಾವಿರ ಕೆನಡಿಯನ್ನರು ಮೃತಪಡುತ್ತಿದ್ದಾರೆ. ಇದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಹಾನಿಕಾರ ಇನ್ನಿತರ ಎಚ್ಚರಿಕೆ ಲೇಬಲ್‌ಗಳು ಮುದ್ರಿಸಲಾಗುವ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ನಿಯಮವು ಧೂಮಪಾನ ಮಾಡುವ ಪ್ರತಿಯೊಬ್ಬರನ್ನು ತಲುಪುತ್ತದೆ. ಇದರಿಂದ ವ್ಯಸನಕ್ಕೆ ಈಡಾಗುವವರನ್ನು ತಡೆಯಲು, ತಂಬಾಕು ಸೇವನೆ ಕಡಿಮೆ ಮಾಡಲು ಸಹಾಯವಾಗುತ್ತದೆ” ಎಂದು ಕೆನಡಿಯನ್ ಕ್ಯಾನ್ಸರ್‌ ಸೊಸೈಟಿಯ ಹಿರಿಯ ನೀತಿ ವಿಶ್ಲೇಷಕರಾದ ರಾಬ್ ಕನ್ನಿಂಗ್ ಹ್ಯಾಮ್ ತಿಳಿಸಿದ್ದಾರೆ.

“ಪ್ರತಿ ದೇಶದಲ್ಲಿ ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿ ಆಯಾ ದೇಶದ ಆರೋಗ್ಯ ಸಚಿವಾಲಯಗಳು ಹೊಂದಿವೆ. ಆದಕಾರಣ ವಿಶ್ವದಲ್ಲಿ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ಗಳಲ್ಲಿ ಆರೋಗ್ಯ ಸಂದೇಶವನ್ನು ಹೆಚ್ಚಿಸಬೇಕಿದೆ. ಸದ್ಯ ಕೆನಡಾ ದೇಶ ಸಿಗರೇಟ್‌ ಮೇಲೆ ಮುದ್ರಿಸಿರುವ ಎಚ್ಚರಿಕೆ ಸಂದೇಶಗಳು ತಂಬಾಕು ಸೇವನೆ ತಡೆ ಹೆಚ್ಚುವರಿ ಕ್ರಮಗಳಿಗೆ ಪೂರಕವಾಗಿದೆ” ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ವಿವಿಧ ಆರೋಗ್ಯ ಇಲಾಖೆಗಳಲ್ಲೂ ವ್ಯಸನ ತಡೆ ಕ್ರಮ ಪರಿಣಾಮಕಾರಿ ಜಾರಿಗೆ ಸೂಚಿಸಲಾಗಿದೆ. ಅಂತೆಯೇ ಶಾಲಾ-ಕಾಲೇಜು, ಆಸ್ಪತ್ರೆಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಸೇರಿದಂತೆ ಹಲವು ಕ್ರಮ ಜಾರಿಯಲ್ಲಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೈಜೀರಿಯಾ | ಮನೆಗೆ ಮರಳಿದ ಅಪಹರಣಕ್ಕೊಳಗಾಗಿದ್ದ 250 ಶಾಲಾ ಮಕ್ಕಳು

ಮಾರ್ಚ್‌ 7ರಂದು ವಾಯವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಅಪಹರಿಸಿದ್ದ 250ಕ್ಕೂ ಹೆಚ್ಚು ಶಾಲಾ...

ರಷ್ಯಾ | ಕನ್ಸರ್ಟ್ ಹಾಲ್ ಮೇಲೆ ದಾಳಿ; 60 ಮಂದಿ ಸಾವು; 100ಕ್ಕೂ ಹೆಚ್ಚು ಮಂದಿ ಗಾಯ

ರಷ್ಯಾದ ಮಾಸ್ಕೊದಲ್ಲಿ ಕನ್ಸರ್ಟ್‌ ಹಾಲ್‌ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಗುಂಡಿನ...

ರಷ್ಯಾ | ಭಯೋತ್ಪಾದಕರಿಂದ ಭೀಕರ ಗುಂಡಿನ ದಾಳಿ: 40ಕ್ಕೂ ಅಧಿಕ ಮಂದಿ ಮೃತ್ಯು; 100ಕ್ಕೂ ಹೆಚ್ಚು ಜನರಿಗೆ ಗಾಯ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ನಾಲ್ಕೈದು ಮಂದಿ ಭಯೋತ್ಪಾದಕರು...

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ನಾಪತ್ತೆ

ಅಮೆರಿಕಾದ ಕ್ಲೀವ್‌ಲ್ಯಾಂಡ್‌ನಲ್ಲಿ ಮಾರ್ಚ್‌ 7 ರಂದು ಕಾಣೆಯಾಗಿದ್ದ 25 ವರ್ಷದ ಭಾರತೀಯ...