ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ‘ಝಡ್’ ವರ್ಗದ ಭದ್ರತೆ

Date:

ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸಶಸ್ತ್ರ ಕಮಾಂಡೋಗಳ ಝಡ್(Z) ವರ್ಗದ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಈ ಕಾರ್ಯಕ್ಕಾಗಿ ಸುಮಾರು 40-45 ಸಿಬ್ಬಂದಿಯ ತುಕಡಿಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಗೆ ವಹಿಸಿದೆ ಎನ್ನಲಾಗಿದೆ.

ಕೇಂದ್ರ ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕೆ ವರದಿಯು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಕುಮಾರ್ ಅವರಿಗೆ ಬಲವಾದ ರಕ್ಷಣೆಯನ್ನು ಶಿಫಾರಸು ಮಾಡಿತ್ತು. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಏಳು ಹಂತಗಳ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಗಳ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಇಸಿ ದೇಶಾದ್ಯಂತ ಪ್ರಯಾಣಿಸುವಾಗ ಸಶಸ್ತ್ರ ಕಮಾಂಡೋಗಳು ಅವರೊಂದಿಗೆ ಇರಲಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ

ಕುಮಾರ್ ಅವರು 1984ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರು 2022ರ ಮೇ 15ರಂದು 25ನೇ ಸಿಇಸಿಯಾಗಿ ಅಧಿಕಾರ ವಹಿಸಿಕೊಂಡರು. ಅವರನ್ನು 2020ರ ಸೆಪ್ಟೆಂಬರ್ 1ರಂದು ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಲ್ಮಾನ್ ಖಾನ್ ಮನೆಗೆ ಗುಂಡಿನ ದಾಳಿ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಹೊರಗೆ ಗುಂಡಿನ...

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ದಿಗ್ಗಜರ ದಿಕ್ಕೆಡಿಸಿದ, ಅವಾಂತರಕಾರಿಗಳಿಗೆ ಮಣೆ ಹಾಕಿದ ಕ್ಷೇತ್ರ

ಕೆನರಾ ಕ್ಷೇತ್ರದ ಚುನಾವಣಾ ಇತಿಹಾಸದ ಮೇಲೆ ಕಣ್ಣುಹಾಯಿಸಿದರೆ ಪರಿಚಿತರು, ಪ್ರಸಿದ್ಧರು ತಿರಸ್ಕೃತರಾಗಿರುವ...

ಬೀದರ್‌ | ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ನಾನು ಒಮ್ಮೆಯೂ ನೋಡಿಲ್ಲ : ಸಾಗರ್‌ ಖಂಡ್ರೆ

ಭಗವಂತ ಖುಬಾ ಅವರು ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಾನು ಕ್ಷೇತ್ರದ...

ಸರ್ಕಾರ ಪತನ ಎನ್ನುವುದು ವಿಪಕ್ಷಗಳ ಭ್ರಮೆ: ಸಿಎಂ ಸಿದ್ದರಾಮಯ್ಯ

ಈ ಚುನಾವಣೆಯಲ್ಲಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದು ಉಳಿಯಲು ಕಾಂಗ್ರೆಸ್...