ಚಿಕ್ಕೋಡಿ ಲೋಕಸಭಾ ಕ್ಷೇತ್ರ | ಗೆದ್ದವರಾರೂ ಜನರ ಬಹುಕಾಲದ ಬೇಡಿಕೆ ಈಡೇರಿಸಿಲ್ಲ!

Date:

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಮತ್ತು ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ಕ್ಷೇತ್ರವೂ ಹೌದು.

ವೇದಗಂಗಾ, ದೂದ್‌ಗಂಗಾ, ಕೃಷ್ಣಾ ನದಿಗಳು ಹರಿಯುವ ಪ್ರದೇಶ ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿಯ ಜನ ಜೀವನ ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗುತ್ತದೆ ಆದರೆ ಅದಕ್ಕೆ ಸರಿಯಾದ ಪರಿಹಾರ ಒದಗಿಸುವಲ್ಲಿ ಇಲ್ಲಿನ ರಾಜಕೀಯ ವ್ಯವಸ್ಥೆ ವಿಫಲವಾಗಿದೆ. ಇದರ ಜೊತೆಗೆ ಈ ಕ್ಷೇತ್ರದ ಜನರ ಬಹುಕಾಲದ ಬೇಡಿಕೆ ಪ್ರತ್ಯೇಕ ಜಿಲ್ಲೆಗಾಗಿ 1980 ರಿಂದ ಇಲ್ಲಿಯವರೆಗೂ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಈ ಲೋಕಸಭಾ ವ್ಯಾಪ್ತಿಯ ಶಾಸಕರಾಗಲಿ, ಸಂಸದರಾಗಲಿ ಈ ಬೇಡಿಕೆಯನ್ನು ಈಡೇರಿಸಲು ವಿಫಲರಾಗಿದ್ದಾರೆ.

2009ರ ಚುನಾವಣೆವರೆಗೆ ಪರಿಶಿಷ್ಟ ಜಾತಿಯವರಿಗೆ ಮಿಸಲಾಗಿದ್ದ ಕ್ಷೇತ್ರ 2009ರಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತಿತವಾಗಿದೆ ಮತ್ತು 1951ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ. ಬೆಳಗಾವಿ ಉತ್ತರ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು ನಂತರದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವಾಗಿದೆ. ಹಾಗೂ ಈ ಕ್ಷೇತ್ರ 2009ರ ಚುನಾವಣೆವರೆಗೆ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿತ್ತು 2009ರಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತಿತವಾಯಿತು. ಅಲ್ಲಿಂದ ಇಲ್ಲಿಯವರೆಗೆ ಆಯ್ಕೆಯಾದ ಸಂಸದರ ವಿವರ ಈ ಕೆಳಗಿನಂತಿದೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1951: ಶಂಕರಗೌಡ ವೀರನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1957: ಕ್ಷೇತ್ರವು ಅಸ್ತಿತ್ವದಲ್ಲಿರಲ್ಲಿಲ್ಲ.
ಮೈಸೂರು ರಾಜ್ಯ – ಬೆಳಗಾವಿ ಉತ್ತರ ಲೋಕಸಭಾ ಕ್ಷೇತ್ರ
1962: ವಸಂತರಾವ್ ಲಕ್ಕನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1967: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1971: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ – ಚಿಕ್ಕೋಡಿ ಲೋಕಸಭಾ ಕ್ಷೇತ್ರ
1977: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1980: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1984: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1989: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1991: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1996: ರತ್ನಮಾಲ ಧಾರೇಶ್ವರ ಸವನೂರು, ಜನತಾ ದಳ
1998: ರಮೇಶ್ ಜಿಗಜಿಣಗಿ, ಲೋಕ ಶಕ್ತಿ
1999: ರಮೇಶ್ ಜಿಗಜಿಣಗಿ, ಜನತಾ ದಳ (ಸಂಯುಕ್ತ)
2004: ರಮೇಶ್ ಜಿಗಜಿಣಗಿ, ಭಾರತೀಯ ಜನತಾ ಪಕ್ಷ
2009: ರಮೇಶ ಕತ್ತಿ, ಭಾರತೀಯ ಜನತಾ ಪಕ್ಷ
2014: ಪ್ರಕಾಶ ಹುಕ್ಕೇರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2019: ಅಣ್ಣಾಸಾಹೇಬ ಜೊಲ್ಲೆ, ಭಾರತೀಯ ಜನತಾ ಪಕ್ಷ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಶಂಕರಾನಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಇಲ್ಲಿಯ ಇತಿಹಾಸ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ 8 ವಿಧಾನ ಕ್ಷೇತ್ರಗಳು ಚಿಕ್ಕೋಡಿ-ಸದಲಗಾ, ಹುಕ್ಕೇರಿ, ರಾಯಬಾಗ, ಕುಡಚಿ, ನಿಪ್ಪಾಣಿ, ರಾಯಬಾಗ, ಯಮಕನಮರಡಿ, ಅಥಣಿ, ಕಾಗವಾಡ.

2024ರಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಸಚಿವರಾದ ಸತೀಶ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಮತದಾರರು ಯಾರಿಗೆ ಮತ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ಸುನಿಲ್ ಹಂಪನ್ನವರ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಕ್ಕೆ ಸಾಂತ್ವನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಅನಾಗರಿಕ ವಿಕೃತ ದುಷ್ಕರ್ಮಿಯಿಂದ ಕೊಲೆಯಾದ ಹುಬ್ಬಳ್ಳಿಯ...

ಬೀದರ್‌ | ಇಬ್ಬರು ಬಂಡಾಯ ಅಭ್ಯರ್ಥಿಗಳು ಸೇರಿ ಐವರು ಬಿಜೆಪಿಯಿಂದ ಉಚ್ಛಾಟನೆ

ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಬೀದರ್‌ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಬಂಡಾಯ...

ಚುನಾವಣೆ ಬಂದಾಗ ಮಾತ್ರ ಮೋದಿಯವರಿಗೆ ಕನ್ನಡಿಗರ ನೆನಪಾಗುತ್ತದೆ: ಸಿಎಂ ಸಿದ್ದರಾಮಯ್ಯ ಕಿಡಿ

"ಕನ್ನಡ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆ...

ಪೆನ್‌ಡ್ರೈವ್ ಕಾಮಕೃತ್ಯ | ಹಾಸನಕ್ಕೆ ಸೀಮಿತವಾ? ರಾಜ್ಯ ಮತದಾರರ ಕರ್ತವ್ಯವೇನು?

ರಾಯಕೀಯ ಯುವ ನಾಯಕನೊಬ್ಬರ ಕಾಮಕೃತ್ಯಗಳ ಪೆನ್‌ಡ್ರೈನ್‌ ಹಾಸನ ಜಿಲ್ಲೆಯಲ್ಲಿ ಅಂತಕ ಸೃಷ್ಟಿಸಿದೆ....