ದಾಳಿಗೆ ಹೆದರಿ ದೇಣಿಗೆ : ಬಿಜೆಪಿ ವಿರುದ್ಧದ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್

Date:

ಹಲವು ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿಯನ್ನು ತಪ್ಪಿಸಿಕೊಳ್ಳಲು ಬಿಜೆಪಿಗೆ ದೇಣಿಗೆ ನೀಡಿರುವುದು ಹಾಗೂ ಬಿಜೆಪಿಯಿಂದ ದೇಣಿಗೆ ಪಡೆದಿರುವ ಹಲವು ಸಂಸ್ಥೆಗಳು ಕೇಂದ್ರದಿಂದ ಅನುಕೂಲ ಪಡೆದಿರುವುದರ ವಿರುದ್ಧ ಸಂಪೂರ್ಣ ತನಿಖೆ ನಡೆಸುವಂತೆ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪತ್ರ ಬರೆದಿದ್ದಾರೆ.

ಇತ್ತೀಚಿಗಷ್ಟೆ ಆನ್‌ಲೈನ್‌ ಮಾಧ್ಯಮಗಳಾದ ದಿ ನ್ಯೂಸ್ ಮಿನಿಟ್ ಹಾಗೂ ನ್ಯೂಸ್ ಲಾಂಡ್ರಿ ಬಿಜೆಪಿಗೆ ದೇಣಿಗೆ ನೀಡಿದ ಸುಮಾರು 30 ಕಂಪನಿಗಳ ಪಟ್ಟಿಯನ್ನು ಹಲವು ದಾಖಲೆಗಳ ಸಮೇತ ತನಿಖಾ ವರದಿ ಪ್ರಕಟಿಸಿದ್ದವು.

ಎರಡೂ ಮಾಧ್ಯಮ ಸಂಸ್ಥೆಗಳು ಕೈಗೊಂಡ ತನಿಖಾ ವರದಿಯಲ್ಲಿ ದೇಶದ ವಿವಿಧ ರಾಜ್ಯಗಳ 30 ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ), ಆದಾಯ ತೆರಿಗೆ ಇಲಾಖೆ(ಐ.ಟಿ) ಹಾಗೂ ಸಿಬಿಐ ಒಳಗೊಂಡ ಇತರ ಸಂಸ್ಥೆಗಳು ದಾಳಿ ನಡೆಸಿವೆ. ದಾಳಿಗೊಳಗಾದ ನಂತರ ಈ ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂದು ತಿಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತನಿಖಾ ವರದಿಯ ಪ್ರಕಾರ ಕನಿಷ್ಠ 30 ಸಂಸ್ಥೆಗಳು 2018 ರಿಂದ 2022-23 ವರೆಗೆ ಬಿಜೆಪಿಗೆ ಸುಮಾರು 335 ಕೋಟಿ ರೂ. ದೇಣಿಗೆ ನೀಡಿವೆ. ಇವುಗಳಲ್ಲಿ 23 ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡದಿದ್ದಾಗ ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾಗಿವೆ. ಈ ಕಂಪನಿಗಳಲ್ಲಿ ಹಲವು ತನಿಖಾ ಸಂಸ್ಥೆಗಳ ಕ್ರಮದಿಂದಾಗಿ ಬಿಜೆಪಿಗೆ ದೇಣಿಗೆ ನೀಡುವುದನ್ನು ಹೆಚ್ಚಿಸಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

“ಮೇಲಿನ ನಿದರ್ಶನಗಳಂತೆ ತನಿಖಾ ಸಂಸ್ಥೆಗಳ ದಾಳಿಗೆ ಹೆದರಿ ಆಡಳಿತ ಪಕ್ಷಕ್ಕೆ ದೇಣಿಗೆ ನೀಡಿರುವುದು  ಕಾನೂನು ಸುಲಿಗೆಯ ಸ್ಪಷ್ಟವಾದ ಪ್ರಕರಣವಾಗಿದೆ. ಖಂಡಿತವಾಗಿಯೂ ಕೇವಲ ಇಂತಹ ಕಾರ್ಯವಿಧಾನದ ಪ್ರಕರಣಗಳಲ್ಲಿ ಮಾತ್ರ ಸುಲಿಗೆಗಳು ನಡೆದಿಲ್ಲ. ಈ ಪ್ರಕರಣ ದೊಡ್ಡ ಜಾಲದಂತೆ ಕಾಣುತ್ತಿದೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

“ನಾವು ಎಲ್ಲಿಯೂ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಆರೋಪಿಸಿಲ್ಲ ಅಥವಾ ತನಿಖಾ ಸಂಸ್ಥೆಗಳು ಅಕ್ರಮವಾಗಿ ಕ್ರಮ ಕೈಗೊಂಡಿವೆ ಎಂದು ಹೇಳಿಲ್ಲ. ಈ ಸಂಶಯಾತ್ಮಕ ಕಂಪನಿಗಳ ವಿರುದ್ಧ ಏಕೆ ಇ.ಡಿ ಕ್ರಮ ಕೈಗೊಂದೆ ಹಾಗೂ ನಂತರ ಇವುಗಳು ಬಿಜೆಪಿಗೆ ದೇಣಿಗೆ ನೀಡಿರುವುದರಿಂದ ತನಿಖೆಯನ್ನು ಸಮರ್ಥಿಸುತ್ತದೆ.ಇದು ಕಾಕತಾಳಿಯವಾದರೆ ಇ.ಡಿ ಕ್ರಮದ ನಂತರ ಬಿಜೆಪಿಗೆ ಏಕೆ ದೇಣಿಗೆ ನೀಡಿದ್ದಾರೆ” ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

“ನೀವು ಯಾವುದನ್ನು ಮುಚ್ಚಿಡಲಿಲ್ಲವೆಂದರೆ, ನೀವು ಪ್ರತಿಯೊಂದು ವರ್ಷ ಬಿಜೆಪಿ ಖಜಾನೆಗೆ ನೀಡಿರುವ ದಾಖಲೆಗಳನ್ನು ಪ್ರಸ್ತುತಪಡಿಸಲು ಇಚ್ಚೀಸುವಿರಾ?ನೀವು ವಾಸ್ತವ ವರದಿಯನ್ನು ಪ್ರಸ್ತುತಪಡಿಸದಿದ್ದರೆ, ಸಂಶಯಾಸ್ಪದ ಸಂಸ್ಥೆಗಳ ಮೂಲಕ ಬಿಜೆಪಿಗೆ ನೀಡಿರುವ ಸುಲಿಗೆ ದೇಣಿಗೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೊಳಪಡಿಸಲು ಸಿದ್ಧರಿದ್ದೀರಾ?” ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...