ಕೊಡಗು | ಆನೆ ದಾಳಿಯಿಂದ ಬೆಳೆ ನಷ್ಟ; ಸಂತ್ರಸ್ತ ರೈತರ ಜಮೀನಿಗೆ ಸಂಕೇತ್ ಪೂವಯ್ಯ ಭೇಟಿ

Date:

ಕಳೆದೆರಡು ದಿನಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿದ್ದು, ಕೊಡಗು ಜಿಲ್ಲೆಯ ಚೆಂಬು ಮತ್ತು ಡಬ್ಬಡ್ಕ ಭಾಗದಲ್ಲಿ ಬೆಳೆ ಹಾನಿಯಾಗಿದೆ. ಆನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ರೈತರ ಜಮೀನಿಗೆ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸ್ಥಳಕ್ಕೆ ಕೃಷಿ ಅಧಿಕಾರಿಗಳನ್ನು ಕರೆಸಿಕೊಂಡ ಅವರು, ‘ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡ ರೈತರು, “ಕಳೆದ 20 ವರ್ಷಗಳಿಂದ ಆನೆ ಹಾವಳಿ ನಿರಂತರವಾಗಿದೆ. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆಯಿಂದ ಕೂಡ ಸೂಕ್ತ ರೀತಿಯಲ್ಲಿ ಪರಿಹಾರ ದೊರಕುತ್ತಿರಲಿಲ್ಲ” ಎಂದು ದೂರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಗ್ಗೆ ಸಂಕೇತ್ ಪೂವಯ್ಯ ಅವರು ಫೋನ್‌ ಕರೆಯ ಮೂಲಕ ಶಾಸಕರಿಗೆ ಮಾಹಿತಿ ನೀಡಿದರು. ಕರೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, “ಕೂಡಲೇ ಬೆಳೆ ನಷ್ಟಕ್ಕೆ ಅಗತ್ಯ ಪರಿಹಾರವನ್ನು ವಿತರಿಸಬೇಕು. ಆನೆ ದಾಳಿ ತಡೆಗೆ ಬೇಕಾದಂತಹ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿಎಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯ ಆದಮ್, ಗಿರೀಶ್ ಹೊಸೂರು, ಕುಸುಮ ಯೋಗೀಶ್ವರ್, ಜೀವಿ ಗಣಪಯ್ಯ, ಸೋಮಣ್ಣ ಬಾಲಂಬಿ, ತಿರುಮಲ ಸೋನ, ವಾಸು ಪೂಜಾರಿ, ಹನೀಫ್ ಸಂಪಾಜೆ, ಭುವನೇಶ್ವರ ಕೊಪ್ಪದ, ರಘುನಾಥ್ ಬಾಲಂಬಿ, ಗಿರೀಶ್ ಕೆದಂಬಾಡಿ, ದಿನಕರ ಗುಂಡಿಯ, ನಾಗೇಶ ಕಿರ್ಲಾಯ ಮತ್ತಿತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ; ಸಮಸ್ಯೆ ಪರಿಹರಿಸುವುದಾಗಿ ಶಾಸಕ ಪೊನ್ನಣ್ಣ ಭರವಸೆ

ಕೊಡಗು ಜಿಲ್ಲೆ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಕಳೆದ 17 ದಿನಗಳಿಂದ...

ಕೊಡಗು | ಮಸೀದಿಯಲ್ಲಿ ನಮಾಜ್ ಮಾಡಿದ್ದ ಮಹಿಳೆ; ಕುಟುಂಬಕ್ಕೆ 25 ವರ್ಷಗಳಿಂದ ಬಹಿಷ್ಕಾರ

ಮುಸ್ಲಿಂ ಮಹಿಳೆಯೊಬ್ಬರು ಮಸೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ, ಅವರ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ...

ಕೊಡಗು | ಬಾಳುಗೋಡು ಆದಿವಾಸಿಗಳ ನೀರಿನ ದಾಹಕ್ಕೆ ಕೊನೆಗೂ ಮುಕ್ತಿ: ಕೊಳವೆಬಾವಿ ಕೊರೆಸಿದ ಗ್ರಾಮ ಪಂಚಾಯತಿ

ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡಿನ...