ಮೈಸೂರು | ‘ಸಂಹಾರ ದಿನ’ ಆಚರಣೆಗೆ ದಸಂಸ ವಿರೋಧ; ಎರಡು ಗುಂಪುಗಳ ನಡುವೆ ಘರ್ಷಣೆ

Date:

ದೇವಸ್ಥಾನದ ಬಳಿ ಅಂದಕಾಸುರನ ರಂಗೋಲಿ ತುಳಿದು, ಅಳಿಸಿ ಆಚರಿಸಲಾಗುವ ‘ಸಂಹಾರ ದಿನ’ ಆಚರಣೆಗೆ ದಸಂಸ ವಿರೊಧ ವ್ಯಕ್ತಪಡಿಸಿದೆ. ಈ ವೇಳೆ, ದಸಂಸ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಘರ್ಷಣೆ ನಡೆದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ..

ಮಹಿಷಾಸುರನ ಮತ್ತೊಂದು ಹೆಸರೆಂದು ಪರಿಗಣಿಸಲಾಗಿರುವ ಅಂದಕಾಸುರನ ಚಿತ್ರವನ್ನು ನಂಜನಗೂಡಿನ ದೇವಸ್ಥಾನದ ಆವರಣದಲ್ಲಿ ರಂಗೋಲಿಯಲ್ಲಿ ಬಿಡಿಸಲಾಗುತ್ತದೆ. ಬಳಿಕ, ನಂಜುಂಡೇಶ್ವರ, ಪಾರ್ವತಿ ಉತ್ಸವ ಮೂರ್ತಿಗಳನ್ನು ಹೊತ್ತವರು ಅಂದಕಾಸುರ ಚಿತ್ರವನ್ನು ಕಾಲಿನಲ್ಲಿ ತುಳಿದು ಅಳಿಸುತ್ತಾರೆ. ಈ ಆಚರಣೆಯು ಮೂಲ ವಾಸಿಗಳಾದ ದ್ರಾವಿಡರ ಭಾವನೆಗಳಿಗೆ ಧಕ್ಕೆ ತರುತ್ತದೆಂದು ದಸಂಸ ವಿರೋಧ ವ್ಯಕ್ತಪಡಿಸಿದೆ.

ಮಹಿಷಾಸುರ ಜನಪರ ದ್ರಾವಿಡ ರಾಜನಾಗಿದ್ದ. ಹಲವರು ಮಹಿಷಾಸುರನನ್ನು ಪೂಜಿಸುತ್ತಾರೆ. ಆತನ ಚಿತ್ರವನ್ನು ತುಳಿದು, ಅಳಿಸುವುದು ದಲಿತರು ಸೇರಿದಂತೆ ಹಲವರ ಭಾವನೆಗಳಿಗೆ ಧಕ್ಕೆ ತರುತ್ತವೆ. ಈ ಆಚರಣೆಯನ್ನು ನಿಲ್ಲಿಸಬೇಕೆಂದು ದಸಂಸ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ?: ಮಂಡ್ಯ | ಮುಸ್ಲಿಂ ಮಹಿಳೆಯರ ವಿರುದ್ಧ ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು

ಈ ವೇಳೆ, ದಸಂಸ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ. “ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಬಿಡುವಂತಿಲ್ಲ” ಎಂದು ದೇವಸ್ಥಾನದ ಅರ್ಚಕರು ಸಮಜಾಯಿಷಿ ನೀಡಿದ್ದಾರೆ.

ಮೆರವಣಿಗೆ ಸಮಯದಲ್ಲಿ ನಂಜುಂಡೇಶ್ವರ ಮೂರ್ತಿಗೆ ಎಂಜಲು ನೀರು ಎರಚಲಾಗಿದೆ ಎಂದೂ ಕೂಡ ಕೆಲವು ಭಕ್ತರು ಆರೋಪಿಸಿದ್ದಾರೆ. ಆರೋಪ ಸಂಬಂಧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್​​ ಎಂಬವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ವಾಹನ ವ್ಯವಸ್ಥೆ ಇಲ್ಲದೇ ಮತದಾರರ ಪರದಾಟ

ಕೃಷ್ಣರಾಜಪೇಟೆ ಮತ ಹಾಕಿ ಎಂದು ಮನೆ ಮನೆ ಸುತ್ತುತ್ತಾರೆ. ನಾವು ಮತ...

₹4.8 ಕೋಟಿ ನಗದು ವಶ; ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಚಕ್ಷಣ ದಳದ (ಎಫ್‌ಎಸ್‌ಟಿ) ಅಧಿಕಾರಿಗಳು ₹4.8...

ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು

ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಮತದಾರರು ಮೊಬೈಲ್‌ ತೆಗೆದುಕೊಂಡು ಹೋಗದಂತೆ ಚುನಾವಣಾ...

ವಿಜಯಪುರ | ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ: ಎಂ.ಬಿ ಪಾಟೀಲ್‌

ಈ ಬಾರಿ ಲೋಕಸಭೆಯಲ್ಲಿ ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು...