ಸಾಂಬಾರ ಪದಾರ್ಥಗಳ ಮೇಲೆ ಮಾನಹಾನಿ ವಿಡಿಯೋ ತೆರವಿಗೆ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

Date:

  • ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ನರುಲಾ ಪೀಠ ವಿಚಾರಣೆ
  • ಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ, ಸಗಣಿ ಹೊಂದಿವೆ ಎಂದು ವಿಡಿಯೋ

ಭಾರತೀಯ ಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ ಹಾಗೂ ಸಗಣಿಯನ್ನು ಒಳಗೊಂಡಿವೆ ಎಂದು ಆರೋಪಿಸಿದ ಮಾನಹಾನಿಕರ ವಿಡಿಯೋಗಳನ್ನು ಯೂಟ್ಯೂಬ್‌ನಿಂದ ತೆರವು ಅಥವಾ ನಿರ್ಬಂಧಿಸುವಂತೆ ದೆಹಲಿ ಹೈಕೋರ್ಟ್‌ ಗೂಗಲ್‌ ಸಂಸ್ಥೆಗೆ ಶುಕ್ರವಾರ (ಮೇ 5) ನಿರ್ದೇಶನ ನೀಡಿದೆ.

ಸಾಂಬಾರ್‌ ಪದಾರ್ಥಗಳು ಮೂತ್ರ ಹಾಗೂ ಸಗಣಿ ಹೊಂದಿವೆ ಎಂದು ‘ಕ್ಯಾಚ್‌’ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳನ್ನು ಗುರಿಯಾಗಿಸಿ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

ಈ ವಿಡಿಯೋಗಳು ಮಾನಹಾನಿಕರ ಸ್ವರೂಪದ್ದಾಗಿವೆ ಎಂದು ಆರೋಪಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

‘ಕ್ಯಾಚ್’ ಬ್ರಾಂಡ್ ಹೆಸರಿನಡಿಯಲ್ಲಿ ಉತ್ಪನ್ನಗಳನ್ನು ಹೊಂದಿರುವ ಸಂಘಟಿತ ಧರಂಪಾಲ್ ಸತ್ಯಪಾಲ್ ಸನ್ಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ಮಾನಹಾನಿ ಮೂಲಕ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಎರಡು ಯೂಟ್ಯೂಬ್ ವಾಹಿನಿಗಳನ್ನು ನಿರ್ಬಂಧಿಸಿ ಪೀಠ ಆದೇಶಿಸಿದೆ.

“ಪ್ರತಿವಾದಿಗಳು ಅಂತಹ ವಿಡಿಯೋಗಳನ್ನು ರಚಿಸುವುದು ಮತ್ತು ಅಪ್‌ಲೋಡ್ ಮಾಡುವುದು ‘ಕ್ಯಾಚ್‌’ ಕಂಪನಿ ಗುರುತು ಹೊಂದಿರುವ ಫಿರ್ಯಾದಿಯ ಸರಕುಗಳನ್ನು ಮಾನಹಾನಿ ಮತ್ತು ಅವಹೇಳನ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಯೂಟ್ಯೂಬ್‌ಗೆ ಸುಲಭ ಮತ್ತು ಅನಿಯಂತ್ರಿತ ಪ್ರವೇಶದ ಹಿನ್ನೆಲೆ ಮಾನಹಾನಿಕರ ವಿಡಿಯೋಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಅಥವಾ ಹಂಚಿಕೊಳ್ಳುವ ಸಂಭವನೀಯತೆ ಹೆಚ್ಚಿದೆ” ಎಂದು ಪೀಠ ಉಲ್ಲೇಖಿಸಿದೆ.

ಪ್ರಕರಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪಿಗಳಿಬ್ಬರು ವಿಚಾರಣೆಗೆ ಹಾಜರಾಗದ ಕಾರಣ ತಾತ್ಕಾಲಿಕ ಆದೇಶ ನೀಡಲಾಗಿದ್ದು ಆರೋಪಿಗಳ ಔಪಚಾರಿಕ ವಿಚಾರಣೆ ಬಾಕಿ ಇದೆ ಎಂದು ಪೀಠ ಹೇಳಿದೆ.

ದೆಹಲಿ ಹೈಕೋರ್ಟ್‌ ಹಿಂದಿನ ನಿರ್ದೇಶನಗಳನ್ನು ಅನುಸರಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಮೂರು ವಿಡಿಯೋಗಳು ಇನ್ನು ಮುಂದೆ ವೀಕ್ಷಣೆಗೆ ಲಭ್ಯವಿಲ್ಲ ಎಂದು ಗೂಗಲ್‌ನ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಎರಡು ಪ್ರತಿವಾದಿ ವಾಹಿನಿಗಳಾದ ಟಿವೈಆರ್ ಮತ್ತು ವ್ಯೂಸ್ ಎನ್‌ನ್ಯೂಸ್, ಭಾರತೀಯ ಸಾಂಬಾರ್‌ ಪದಾರ್ಥಗಳ ವಿರುದ್ಧ ಅವಹೇಳನಕಾರಿ ಮತ್ತು ಸುಳ್ಳು ಟೀಕೆಗಳನ್ನು ಹೊಂದಿರುವ ವಿಡಿಯೋಗಳನ್ನು ದುರುದ್ದೇಶಪೂರಿತವಾಗಿ ಅಪ್‌ಲೋಡ್ ಮಾಡಿವೆ.

ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಪರಿಸ್ಥಿತಿ ನಿಯಂತ್ರಣ; ರೈಲುಗಳ ಸಂಚಾರ ಸ್ಥಗಿತ

ವಿಶೇಷವಾಗಿ ‘ಕ್ಯಾಚ್’ ಬ್ರ್ಯಾಂಡ್‌ನ ಅಡಿಯಲ್ಲಿ ಮಾರಾಟವಾಗಿದೆ ಎಂದು ಕಂಪನಿ ಆರೋಪಿಸಿತ್ತು.

ಯೂಟ್ಯೂಬ್ ವಾಹಿನಿಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಪತ್ತೆಹಚ್ಚಿದ ನಂತರ ಕಂಪನಿಯು ಮೊಕದ್ದಮೆ ಹೂಡಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ | ಸಾಂಗ್ಲಿಯಿಂದ ಶಿವಸೇನೆ ಸ್ಪರ್ಧೆ; ಬಿಜೆಪಿಗೆ ನೆರವು ನೀಡದಂತೆ ಸಂಜಯ್ ರಾವತ್ ಕರೆ

ಮಹಾರಾಷ್ಟ್ರದ ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು...

ಸಿಎಂ ಹುದ್ದೆಯಿಂದ ಕೇಜ್ರಿವಾಲ್ ಪದಚ್ಯುತಿಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ...

ಪುರೋಹಿತ ಕೂಡಾ ಸಿಎಎ ಅರ್ಹತಾ ಪ್ರಮಾಣಪತ್ರ ನೀಡಬಹುದೆಂದ ಸರ್ಕಾರಿ ಸಹಾಯವಾಣಿ!

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತದ ಪೌರತ್ವ ಪಡೆಯುವವರಿಗೆ ಸ್ಥಳೀಯ...