ಮಹಾರಾಷ್ಟ್ರ ಬಿಜೆಪಿ ಮುಖಂಡನ ಅಶ್ಲೀಲ ವಿಡಿಯೋ ಪ್ರಕರಣ | ತನಿಖೆಗೆ ಆದೇಶಿಸಿದ ಡಿಸಿಎಂ ಫಡ್ನವೀಸ್

Date:

  • ಬಿಜೆಪಿಯ ಮಾಜಿ ಸಂಸದ ಕಿರಿಟ್‌ ಸೋಮಯ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋ
  • ‘ಆಡಳಿತ ಮೈತ್ರಿಕೂಟದ ನಿಜವಾದ ಮುಖ ಈಗ ಹೊರಬಂದಿದೆ’ ಎಂದ ವಿಪಕ್ಷಗಳು

ಮಹಾರಾಷ್ಟ್ರದ ರಾಜಕಿಯ ಬಿಕ್ಕಟ್ಟಿನ ಚರ್ಚೆಗೊಳಗಾಗುತ್ತಿರುವ ನಡುವೆಯೇ ಬಿಜೆಪಿ ಮುಖಂಡ ಕಿರಿಟ್‌ ಸೋಮಯ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿರುವ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ದೇವೇಂದ್ರ ಫಡ್ನವೀಸ್ ತನಿಖೆಗೆ ಆದೇಶಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಯನ್ನು ಘೋಷಿಸಿದ ಫಡ್ನವೀಸ್, ‘ಗೃಹ ಸಚಿವಾಲಯವು ಮುಂಬೈ ಅಪರಾಧ ವಿಭಾಗಕ್ಕೆ ವಿಚಾರಣೆ ನಡೆಸುವಂತೆ ಸೂಚಿಸಿದೆ. ಹಿರಿಯ ಅಧಿಕಾರಿ ತನಿಖೆ ನಡೆಸುತ್ತಾರೆ. ಅದು ನ್ಯಾಯಯುತವಾಗಿರುತ್ತದೆ ಮತ್ತು ಯಾರನ್ನೂ ರಕ್ಷಿಸುವುದಿಲ್ಲ’ ಎಂದು ಹೇಳಿದರು.

ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹೇಳಿಕೆ ನೀಡಿರುವ ಮಾಜಿ ಸಂಸದ ಕಿರಿಟ್ ಸೋಮಯ್ಯ, ‘ಈ ವಿಡಿಯೋ ನಕಲಿಯಾಗಿದ್ದು, ನಾನು ಯಾವ ಮಹಿಳೆಗೂ ಕಿರುಕುಳ ನೀಡಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಫಡ್ನವೀಸ್‌ಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಆ ಪತ್ರವನ್ನು ಟ್ವಿಟರ್‍‌ನಲ್ಲೂ ಪ್ರಕಟಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಎಲ್ಲ ಬೆಳವಣಿಗೆಗಳ ನಡುವೆ, ‘ಆಡಳಿತ ಮೈತ್ರಿಕೂಟದ ನಿಜವಾದ ಮುಖ ಈಗ ಹೊರಬಂದಿದೆ’ ಎಂದು ಶಿವಸೇನೆ (ಯುಬಿಟಿ) ನೇತೃತ್ವದ ಪ್ರತಿಪಕ್ಷಗಳು ಟೀಕಿಸಿವೆ.

ವಿಡಿಯೋವನ್ನು ಮೊದಲು ಮರಾಠಿ ನ್ಯೂಸ್‌ ಚಾನಲ್‌ ಲೋಕಶಾಹಿ ಪ್ರಸಾರ ಮಾಡಿದ್ದು, ಬಳಿಕ ಇದು ವೈರಲ್‌ ಆಗಿದೆ. 8 ತಾಸಿನ ವಿಡಿಯೋ ಬಹಿರಂಗವಾಗಿದ್ದು, ಮಹಿಳೆ ಜತೆ ಸೋಮಯ್ಯ ರಾಸಲೀಲೆ ನಡೆಸಿದ ದೃಶ್ಯಗಳಿವೆ ಎನ್ನಲಾಗಿದೆ. ಆದರೆ ವಿಡಿಯೋದಲ್ಲಿನ ಮಹಿಳೆ ಈವರೆಗೂ ದೂರು ನೀಡಿಲ್ಲ. ‘ಹೀಗಾಗಿ ಮಹಿಳೆಯು ಕಾನೂನು ಮೇಲೆ ನಂಬಿಕೆ ಇರಿಸಿ ದೂರು ನೀಡಬೇಕು’ ಎಂದು ಮಹಾರಾಷ್ಟ್ರ ವಿಧಾನಪರಿಷತ್ ಉಪಸಭಾಪತಿ ನೀಲಂ ಗೋರೆ ಆಗ್ರಹಿಸಿದ್ದಾರೆ.

ಇದರ ನಡುವೆ ಫಡ್ನವೀಸ್‌ ತನಿಖೆಗೆ ಆದೇಶಿಸಿದ್ದು, ‘ವಿಡಿಯೋದಲ್ಲಿನ ಮಹಿಳೆ ಪತ್ತೆ ಮಾಡಲಾಗುವುದು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು’ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? I-N-D-I-A ಮುಂದಿನ ಸಭೆ ಮುಂಬೈನಲ್ಲಿ : ಮಲ್ಲಿಕಾರ್ಜುನ ಖರ್ಗೆ

ಆದರೆ ವಿಪಕ್ಷಗಳು, ‘ಆಡಳಿತ ಮೈತ್ರಿಕೂಟದ ಸ್ವಭಾವ ಮತ್ತು ನಿಜವಾದ ಮುಖ ಈಗ ಬಹಿರಂಗಗೊಂಡಿದೆ. ಕಿರಿಟ್‌ ಸೋಮಯ್ಯ ಹಲವು ಶಾಸಕರು ಮತ್ತು ಸಂಸದರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದಾರೆ. ಇದೀಗ ಸಾಕಷ್ಟು ಮಹಿಳೆಯರನ್ನು ಇ.ಡಿ. ತನಿಖೆ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಸೋಮಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಶಾಸಕಿ ಯಶೋಮತಿ ಠಾಕೂರ್‌ ಆಗ್ರಹಿಸಿದ್ದಾರೆ.

ಮಾಜಿ ಸಂಸದರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಯುಬಿಟಿ ಸೇನೆಯ ಅಂಬಾದಾಸ್ ದಾನ್ವೆ ಹೇಳಿದ್ದಾರೆ.

“ಸೋಮಯ್ಯ ಮಹಿಳೆಯರನ್ನು ಶೋಷಣೆ ಮಾಡಿದ್ದನ್ನು ತೋರಿಸುವ ವೀಡಿಯೊಗಳ ಪೂರ್ಣ ಪೆನ್ ಡ್ರೈವ್ ನನ್ನ ಬಳಿ ಇದೆ. ನಾನು ಅದನ್ನು ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ. ಈ ಬಗ್ಗೆ ತನಿಖೆ ಮಾಡಬೇಕು. ಆರೋಪ ಹೊತ್ತಿರುವ ಮಾಜಿ ಸಂಸದ ಕೇಂದ್ರ ಸರ್ಕಾರದ ಭದ್ರತೆಯೊಂದಿಗೆ ತಿರುಗಾಡುತ್ತಿದ್ದಾರೆ” ಎಂದು ಅಂಬಾದಾಸ್ ದಾನ್ವೆ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ತಡವಾಗಿ ತಲುಪಿದ ವಿಮಾನ; ಒಲಿಂಪಿಕ್ ಅರ್ಹತಾ ಪಂದ್ಯದಿಂದ ಹೊರಗುಳಿದ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಸುಜೀತ್ ಕಲ್ಕಲ್‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ...

ಡಿಡಿ ನ್ಯೂಸ್ ಲೋಗೊ ಬಣ್ಣ ಕೇಸರೀಕರಣ: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ...