ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತ ’ಸಾಕ್ಷ್ಯಚಿತ್ರ’ ಪ್ರದರ್ಶನ ಇಂದು

Date:

ಜ್ಯೋತಿ ನಿಶಾ ನಿರ್ದೇಶನದ “ಡಾ.ಬಿ.ಆರ್‌.ಅಂಬೇಡ್ಕರ್‌: ದೆನ್ ಅಂಡ್‌ ನೌ” ಸಾಕ್ಷ್ಯಚಿತ್ರ ಪ್ರದರ್ಶನವನ್ನು ಜಂಗಮ ಮತ್ತು ತಮಟೆ ಬಳಗದ ವತಿಯಿಂದ ವಸಂತನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

ಸಂಜೆ 5.30ಕ್ಕೆ ಮಿಲ್ಲರ್‌ ರಸ್ತೆಯಲ್ಲಿರುವ ಸ್ಟುಡಿಯೋದಲ್ಲಿ (m48/3) ಪ್ರದರ್ಶನ ನಡೆಯಲಿದೆ. (ಟಿಕೆಟ್ ಬುಕ್ಕಿಂಗ್‌ಗಾಗಿ ’ಇಲ್ಲಿ’ ಕ್ಲಿಕ್ ಮಾಡಬಹುದು.)

ಈ ಸಾಕ್ಷ್ಯಚಿತ್ರದ ವೈಶಿಷ್ಟ್ಯವೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತೀಯ ಸಮಾಜದ ಅಡಿಪಾಯ ಆಗಿರುವ ಜಾತಿವ್ಯವಸ್ಥೆ ಮತ್ತು ಅದರ ಉತ್ಪನ್ನವಾಗುರುವ ಶ್ರೇಣಿಕೃತ ಅಸಮಾನತೆಯ ಕುರಿತು ಜನಪ್ರಿಯ ಸಂಸ್ಕೃತಿ, ಇತಿಹಾಸದ ಬರವಣಿಗೆ, ಮಾಧ್ಯಮಗಳು ಕುರುಡುತನ ಪ್ರದರ್ಶಿಸಿಕೊಂಡೆ ಬಂದಿವೆ. ಜಾತಿ ಅಸಮಾನತೆಯನ್ನು ಮರೆಮಾಚಿರುವ ಈ ಪ್ರಜ್ಞಾಪೂರ್ವಕ ಕುರುಡುತನದ ಹಿಂದಿರುವುದು ಮೇಲು ಜಾತಿಗಳ ಹಿಡಿತ. ಯಾಕೆಂದರೆ ಇಲ್ಲಿನ ಅಕಡೆಮಿಕ್ ವಲಯ, ಜನಪ್ರಿಯ ಸಂಸ್ಕೃತಿ, ಸಾಮಾಜಿಕ ಹೋರಾಟಗಳು, ಮಾಧ್ಯಮ ಸೇರಿದಂತೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಯಾವುದೇ ವಲಯವಾಗಲಿ ಮೇಲುಜಾತಿಗಳ ಹಿಡಿತದಲ್ಲಿರುವುದು. ಹಾಗಾಗಿಯೇ ಈ ಮೇಲುಜಾತಿಗಳು ಇವೆಲ್ಲವನ್ನು ತಮ್ಮ ಹಿತಾಸಕ್ತಿಗೆ ಪೂರಕಾವಾಗಿ ಬಳಸಿಕೊಂಡು ಬಂದು ದಲಿತರನ್ನು ನಿರಂತರವಾಗಿ ಅಂಚಿಗೆ ತಳ್ಳುತ್ತಿದ್ದಾರೆ. ತಮ್ಮ Caste privilege ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಮತ್ತು ಶ್ರೇಣೀಕೃತ ಅಸಮಾನತೆಯನ್ನು ಅದು ಸಾಮಾನ್ಯ ಅಂತ ಭಾವಿಸಿರುವ ಜಾತಿ ಸಮಾಜ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ,‌ ಶೋಷಣೆ, ಹಿಂಸೆಯನ್ನು ಕೇವಲ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳು ಅಂತ Normalise ಮಾಡಲು ಪ್ರಯತ್ನಿಸುತ್ತದೆ. ದಲಿತರ ಮೇಲಿನ ಹಿಂಸೆಯ ಪ್ರಕರಣಗಳು ಸರ್ಕಾರಿ ಸಂಸ್ಥೆಗಳಲ್ಲಿ ಕೇವಲ ಅಪರಾಧ ಪ್ರಕರಣಗಳ ಅಂಕಿಅಂಶಗಳಾಗಿ ದಾಖಲಾಗುತ್ತಿವೆ.

ಇದು ಇಂದು ನೆನ್ನೆಯದಲ್ಲ ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.
ಹಾಗಾದರೆ ಏನು ಆ ಇತಿಹಾಸ? ಈ ಮರೆಮಾಚುವ ರಾಜಕಾರಣದ ಹಿಂದಿರುವ ಶಕ್ತಿ ಯಾವುದು? ಬಾಬಾಸಾಹೇಬರ ಬೌದ್ಧಿಕತೆಯನ್ನು ಅಕಡೆಮಿಕ್ ವಲಯದಿಂದ ದೂರ ಇಟ್ಟಿರುವವರು ಯಾರು?

ಅದರಲ್ಲೂ ಮಹಿಳಾ ವಿಮೋಚನೆಯ ಮಾತಾಡುವ ಸವರ್ಣ ಸ್ತ್ರೀವಾದ ಹೇಗೆ ದಲಿತ ಮಹಿಳೆಯರ ಪ್ರಾತಿನಿಧ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾತಿವಾದವನ್ನು ಆಚರಿಸಿಕೊಂಡು ಬಂದಿದೆ?

ಈ ಎಲ್ಲ ಪ್ರಶ್ನೆಗಳನ್ನು ಜ್ಯೋತಿ ನಿಶಾ ಅವರ
“B.R. Ambedkar: Then and Now” ನಮ್ಮ ಮುಂದಿಡುತ್ತದೆ.

ದಲಿತರ ಪ್ರಶ್ನೆಯನ್ನು ಇತಿಹಾಸದ ಹಿನ್ನಲೆಯಲ್ಲಿ ಸಮಕಾಲೀನ ಸಮಾಜದ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲು ಈ ಸಾಕ್ಷ್ಯಚಿತ್ರ ಮುಖ್ಯವಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇ; ಮತ್ತೆ ಟೋಲ್‌ ದರ ಹೆಚ್ಚಳ

ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್‌-ವೇ ಕಾಮಗಾರಿ ಆರಂಭವಾದಾಗಿನಿಂದಲೂ ನಾನಾ ರೀತಿಯಲ್ಲಿ ಚರ್ಚೆಯ ವಿಷಯವಾಗಿಯೇ...

ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿ, ಆರ್.‌ಕನ್ನಡ ಸಂಪಾದಕರ ವಿರುದ್ಧ ಎಫ್‌ಐಆರ್

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ದ್ವೇಷ...

ಧಾರವಾಡ ಕ್ಷೇತ್ರ | ಪ್ರಲ್ಹಾದ್ ಜೋಶಿ ಬದಲಾವಣೆಗೆ ಮಠಾಧೀಶರಿಂದ ಹಕ್ಕೊತ್ತಾಯ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಅವರನ್ನು ಬದಲಿಸಬೇಕು...

ಕನ್ನಡಿಗರ ಎದುರು ಚರ್ಚೆಗೆ ಬನ್ನಿ; ನಿರ್ಮಲಾ ಸೀತಾರಾಮನ್‌ಗೆ ಸಿದ್ದರಾಮಯ್ಯ ಪಂಥಾಹ್ವಾನ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ...