ಇಡಿ ಮುಖ್ಯಸ್ಥ ಸಂಜಯ್ ಮಿಶ್ರಾ ಸೇವಾ ವಿಸ್ತರಣೆ ಕಾನೂನುಬಾಹಿರ ಎಂದ ಸುಪ್ರೀಂ ಕೋರ್ಟ್

Date:

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ನೀಡಿದ್ದ ಅಧಿಕಾರಾವಧಿ ವಿಸ್ತರಣೆಯನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ಅಸಿಂಧುಗೊಳಿಸಿದೆ.

ಆದಾಗ್ಯೂ, ಜುಲೈ 31ರವರೆಗೆ ಅಧಿಕಾರಾವಧಿಯಲ್ಲಿ ಮುಂದುವರಿಸಲು ಅವಕಾಶ ನೀಡಿದ್ದು, ತನಿಖಾ ಸಂಸ್ಥೆಗೆ ಹೊಸ ಮುಖ್ಯಸ್ಥರನ್ನು ನೇಮಿಸುವಂತೆ ಕೇಂದ್ರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಮಿಶ್ರಾ ಅವರು ನವೆಂಬರ್ 2018 ರಲ್ಲಿ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ನೇಮಕಗೊಂಡರು. 60 ವರ್ಷ ತುಂಬಿದ ಕಾರಣ ಅವರು ಎರಡು ವರ್ಷಗಳ ನಂತರ ನಿವೃತ್ತರಾಗಬೇಕಿತ್ತು. ಆದರೆ ನವೆಂಬರ್ 2020ರಲ್ಲಿ ಸರ್ಕಾರವು ಅವರಿಗೆ ಸೇವಾ ವಿಸ್ತರಣೆಯನ್ನು ನೀಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಎಸ್‌ಕೆ ಮಿಶ್ರಾ ಅವರ ಸೇವಾ ಅವಧಿಯನ್ನು ವಿಸ್ತರಿಸಿರುವುದು 2021ರ ತೀರ್ಪಿನ ಆದೇಶವನ್ನು ಉಲ್ಲಂಘಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಲಿಖಿತ ಕಾರಣಗಳೊಂದಿಗೆ ಈ ರೀತಿಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೇವಾ ವಿಸ್ತರಣೆಯನ್ನು ನೀಡಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಿಶ್ರಾ ಅವರಿಗೆ ನೀಡಲಾದ ಮೂರನೇ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಒಂದು ಬ್ಯಾಚ್ ಅನ್ನು ಆಲಿಸಿದ ಸುಪ್ರೀಂ ಕೋರ್ಟ್, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಿವೃತ್ತಿ ಹೊಂದಿದ ಅಧಿಕಾರಿಯ ಸೇವೆಯನ್ನು ವಿಸ್ತರಿಸಬಹುದು ಎಂಬ 2021ರ ತೀರ್ಪನ್ನು ಮರುಪರಿಶೀಲಿಸಬಹುದು ಎಂದು ಮೇ ತಿಂಗಳಲ್ಲಿ ಹೇಳಿತ್ತು.

ಮಿಶ್ರಾ ಅವರಿಗೆ ನೀಡಲಾದ ಮೂರನೇ ಸೇವಾ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ 12 ರಂದು ಕೇಂದ್ರ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಪ್ರತಿಕ್ರಿಯೆ ಕೇಳಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಸಂಜಯ್ ಕುಮಾರ್ ಮಿಶ್ರಾ ಅವರು ನಿವೃತ್ತರಾಗುವ ಒಂದು ದಿನ ಮುಂಚಿತವಾಗಿ ಕೇಂದ್ರವು ಮತ್ತೊಂದು ವರ್ಷ ವಿಸ್ತರಣೆಯನ್ನು ನೀಡಿತ್ತು. ನವೆಂಬರ್ 18, 2023 ರವರೆಗೆ ಅಧಿಕಾರದಲ್ಲಿರಬೇಕಿದ್ದ ಮಿಶ್ರಾ ಅವರ ಅಧಿಕಾರಾವಧಿಯಲ್ಲಿ ಇದು ಮೂರನೇ ವಿಸ್ತರಣೆಯಾಗಿದ್ದು, ಒಟ್ಟು ಐದು ವರ್ಷಗಳ ಕಾಲ ಇಡಿ ಮುಖ್ಯಸ್ಥರಾಗಿ ಅಧಿಕಾರ ಹೊಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಎನ್‌ಸಿಪಿ, ಶಿವಸೇನೆ ಒಡಕಿನ ಬೆನ್ನಲ್ಲೇ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ

ಮಿಶ್ರಾ ಅವರನ್ನು ನವೆಂಬರ್ 19, 2018 ರಂದು ಎರಡು ವರ್ಷಗಳ ನಿಗದಿತ ಅವಧಿಗೆ ಇಡಿ ನಿರ್ದೇಶಕರಾಗಿ ನೇಮಿಸಲಾಯಿತು. ಅವರ ಅಧಿಕಾರಾವಧಿ ಕೊನೆಗೊಳ್ಳುವ ಕೆಲವು ದಿನಗಳ ಮೊದಲು, ನವೆಂಬರ್ 13, 2020 ರಂದು ರಾಷ್ಟ್ರಪತಿಗಳು ಹಿಂದಿನ ಆದೇಶವನ್ನು ಮಾರ್ಪಡಿಸಿ ಮಿಶ್ರಾ ಅವರ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ಬದಲಾಯಿಸಿದರು.

ಸೆಪ್ಟೆಂಬರ್ 8, 2021 ರಂದು, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎಲ್ ನಾಗೇಶ್ವರ ರಾವ್ ಅವರ ಪೀಠವು ಮಿಶ್ರಾ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳ ನಂತರ ವಿಸ್ತರಿಸುವ ಕೇಂದ್ರದ ಆದೇಶವನ್ನು ಎತ್ತಿಹಿಡಿದಿತ್ತು. ಆದಾಗ್ಯೂ, “ನಿವೃತ್ತಿಯ ವಯಸ್ಸನ್ನು ತಲುಪಿದ ಅಧಿಕಾರಿಗಳಿಗೆ ಅಧಿಕಾರದ ವಿಸ್ತರಣೆಯನ್ನು ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಾಡಬೇಕು ಮತ್ತು ಅಂತಹ ವಿಸ್ತರಣೆಗಳು ಅಲ್ಪ ಅವಧಿಗೆ ಇರಬೇಕು” ಎಂದು ಪೀಠ ಹೇಳಿದೆ.

“ಎರಡು ವರ್ಷಗಳ ಅವಧಿಯನ್ನು ಮೀರಿ ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರದ ಅಧಿಕಾರದ ಮೇಲೆ ಯಾವುದೇ ನಿರ್ಬಂಧವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇಡಿ ನಿರ್ದೇಶಕರ ಕನಿಷ್ಠ ಅಧಿಕಾರಾವಧಿಯನ್ನು ನಿಗದಿಪಡಿಸುವ 2003ರ ಕೇಂದ್ರ ಜಾಗೃತ ಆಯೋಗದ ಆಯ್ದೆ, ಸೆಕ್ಷನ್ 25 (ಡಿ) ನಲ್ಲಿ, ಎರಡು ವರ್ಷಗಳಿಗಿಂತ ಕಡಿಮೆಯಿಲ್ಲ ಎಂಬ ನಿಯಮಗಳು ಎರಡಕ್ಕಿಂತ ಹೆಚ್ಚಿಲ್ಲ ಎಂದು ಅರ್ಥೈಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಬ್ಯಾಂಕ್ ಖಾತೆ ನಿರ್ಬಂಧ ಉಲ್ಲೇಖ; ಕೇಜ್ರಿವಾಲ್ ಬಂಧನದ ಬಗ್ಗೆ ಮತ್ತೆ ಹೇಳಿಕೆ ನೀಡಿದ ಅಮೆರಿಕಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ಅಮೆರಿಕಾ ಹೇಳಿಕೆ ನೀಡಿದ...

ಕಲಬುರಗಿ | ಮೋದಿ ಗ್ಯಾರಂಟಿ ಟಿವಿಯಲ್ಲಿದೆ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ: ಸಚಿವ ಪ್ರಿಯಾಂಕ್‌ ಖರ್ಗೆ

ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಎಂದು ಹೇಳಿಕೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ....

ಉತ್ತರಾಖಂಡ | ನಾನಕ್ ಮಠ ಗುರುದ್ವಾರ ಕರ ಸೇವಾ ಮುಖ್ಯಸ್ಥನ ಹತ್ಯೆ

ಉತ್ತರಾಖಂಡದ ನಾನಕ್ ಮಠ ಗುರುದ್ವಾರ ಕರ ಸೇವಾ ಪ್ರಮುಖ್‌ ಬಾಬಾ ತಾರ್ಸೆಮ್...

ಎಎಪಿಯ ಏಕೈಕ ಸಂಸದ ಬಿಜೆಪಿ ಸೇರ್ಪಡೆ

ಎಎಪಿ ಯಿಂದ ಆಯ್ಕೆಯಾಗಿದ್ದ ಏಕೈಕ ಸಂಸತ್ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್‌ನ...