ವಿಶ್ವಕಪ್ | ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ 6ನೇ ಸೋಲು; ವಿಶ್ವಕಪ್‌ನಿಂದ ಔಟ್!

Date:

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 5 ಸೋಲು ಕಂಡಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೂಡ 33 ರನ್ ಅಂತರದಲ್ಲಿ ಸೋಲು ಅನುಭವಿಸಿದೆ.

ಇದರೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದದ್ದಲ್ಲದೇ, ವಿಶ್ವಕಪ್‌ನಿಂದಲೇ ಔಟ್ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 286 ರನ್ ಗಳಿಸಿ ಆಲೌಟ್‌ ಆಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಗುರಿ ಬೆನ್ನತ್ತಿದ ಜೋಸ್ ಬಟ್ಲರ್ ನೇತೃತ್ವದ ಆಂಗ್ಲರ ತಂಡ, 48.1 ಓವರ್‌ಗಳಲ್ಲಿ ಕೇವಲ 253 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಸೋಲಿನೊಂದಿಗೆ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅಭಿಯಾನ ಅಂತ್ಯಗೊಂಡಿದೆ.

ಬೆನ್ ಸ್ಟೋಕ್ಸ್ (64) ಮತ್ತು ಡೇವಿಡ್ ಮಲಾನ್ (50) ಮಿಂಚಿದರೂ ಉಳಿದ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು.

ಆಸೀಸ್ ಬೌಲರ್‌ಗಳ ಪೈಕಿ ಆ್ಯಡಂ ಝಾಂಪ 3, ಸ್ಟಾರ್ಕ್, ಕಮ್ಮಿನ್ಸ್ ಮತ್ತು ಹೇಝಲ್‌ವುಡ್ ತಲಾ 2 ವಿಕೆಟ್ ಪಡೆದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಝಾಂಪ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌...

ಐಪಿಎಲ್ | ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್: ರೋಚಕ ಹಣಾಹಣಿಯಲ್ಲಿ ಪಂಜಾಬ್‌ಗೆ ಸೋಲುಣಿಸಿದ ರಾಜಸ್ಥಾನ

ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು...

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ...

ಐಪಿಎಲ್ | ಕೆ ಎಲ್ ರಾಹುಲ್ ನೇತೃತ್ವದ ಲಕ್ನೋಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 26ನೇ...