ಮಧ್ಯಪ್ರದೇಶ: ಫೇಸ್‌ಬುಕ್‌ನಲ್ಲಿ ಹೋಮ್ ಡೆಲಿವರಿಯೊಂದಿಗೆ ಗನ್ ಮಾರಾಟ ಜಾಹಿರಾತು

Date:

ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಫೇಸ್‌ಬುಕ್‌ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ ಉಜ್ಜೈನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಹಿರಾತಿನಲ್ಲಿ ಪಿಸ್ತೂಲ್‌ಗಳನ್ನು ಹೋಮ್‌ ಡೆಲಿವರಿ ಮಾಡುವುದಾಗಿ ಭರವಸೆ ನಿಡಲಾಗಿತ್ತು. ಏಪ್ರಿಲ್ 23, 2023ರ ಕೊಹಿನೂರ್‌ ಗ್ರೂಪ್ ಉಜ್ಜೈನ್ ಎಂಬ ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ಶಸ್ತ್ರಗಳ ಚಿತ್ರಗಳನ್ನು ಕೂಡ ಪ್ರಕಟಿಸಲಾಗಿತ್ತು.

ಆರೋಪಿಗಳು ಶಸ್ತ್ರಾಸ್ತ್ರ ಮಾರಾಟ ಮಾಡುವ ವ್ಯಕ್ತಿಯನ್ನು ‘ಪ್ಯೂರ್‌ ಬದ್ಮಾಶ್, ಮೈನ್‌ಲಿ ಕ್ರಿಮಿನಲ್ 302’ ಎಂಬ ಅಡಿಬರಹ ನೀಡಿದ್ದಾರೆ. ಪಿಸ್ತೂಲ್‌ ಹಾಗೂ ಗುಂಡುಗಳನ್ನು ಹೊಂದಿರುವ ವ್ಯಕ್ತಿಯ ಚಿತ್ರವನ್ನು ಜಾಹಿರಾತಿನಲ್ಲಿ ಪ್ರಕಟಿಸಲಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪೋಸ್ಟ್‌ಅನ್ನು ಉಜ್ಜೈನ್‌ನ ಹೊರ ವಲಯದಲ್ಲಿ ಪೋಸ್ಟ್‌ ಮಾಡಲಾಗಿದೆ. ಆರೋಪಿಗಳನ್ನು ಸೈಬರ್‌ ಪೊಲೀಸರು ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ಫೇಸ್‌ಬುಕ್‌ ಪುಟದಲ್ಲಿ ಆರೋಪಿಯ ಚಿತ್ರವು ಸ್ಪಷ್ಟವಾಗಿಲ್ಲ. ಮೊಬೈಲ್‌ ನಂಬರ್‌ ಹಾಗೂ ಮಾರಾಟ ಮಾಡುವ ಸ್ಥಳಗಳನ್ನು ನೀಡಲಾಗಿರಲಿಲ್ಲ” ಎಂದು ಹೆಚ್ಚುವರಿ ಎಸ್‌ಪಿ ಜಯಂತ್ ರಾಥೋರ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು

ಉಜ್ಜೈನ್‌ ಪೊಲೀಸರು ಈ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದುರ್ಲಬ್‌ ಕಶ್ಯಪ್‌ ಎಂಬಾತ  ಗನ್‌ ಮತ್ತು ಇತರ ಶಸ್ತ್ರಾಶ್ತ್ರಗಳೊಂದಿಗೆ ಗ್ಯಾಂಗ್ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಜಾಹಿರಾತು ನೀಡಿದ್ದ. ನಂತರ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. 2020ರ ಸೆಪ್ಟೆಂಬರ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ದುರ್ಲಬ್‌ ಕಶ್ಯಪ್‌ ಹತನಾಗಿದ್ದ.

ಭಾರತೀಯ ಕಾನೂನು ‘ನೀಡಬಹುದಾದ’ ಆಧಾರದ ಮೇಲೆ ಪರವಾನಗಿಯೊಂದಿಗೆ ಬಂದೂಕು ಹೊಂದುವುದನ್ನು ಅನುಮತಿಸುತ್ತದೆ. ಕೇಂದ್ರ ಗೃಹ ಇಲಾಖೆಯು 2016ರಲ್ಲಿ ಬಿಡುಗಡೆಗೊಂಡ ಶಸ್ತ್ರಾಸ್ತ್ರಗಳ ನಿಯಮಗಳನ್ನು ಪ್ರಕಟಿಸಿದ ನಂತರ ಎಲ್ಲ ರೀತಿಯ ಬಂದೂಕು ಹೊಂದಿರುವ ಬಗ್ಗೆ ರಾಜ್ಯ ಸರ್ಕಾರಗಳು ಅವಲೋಕನ ವಹಿಸುವಂತೆ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ನಿಯಮದ ಅನ್ವಯ ಪರವಾನಗಿಯೊಂದಿಗೆ ಬಂದೂಕು ಹೊಂದಿರುವವರು ತಮ್ಮ ಬಂದೂಕನ್ನು ಸಾರ್ವಜನಿಕ ಸ್ಥಳಗಳಿಗೆ ವಿನ್ಯಾಸಗೊಳಿಸಲಾದ ಹೊದಿಕೆ ಇಲ್ಲದೆ ತೆಗೆದುಕೊಂಡು ಹೋಗುವಂತಿಲ್ಲ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆ್ಯಂಗ್ರಿ ರಾಂಟ್‌ಮ್ಯಾನ್’ ಖ್ಯಾತಿಯ ಯೂಟ್ಯೂಬರ್  ಅಬ್ರದೀಪ್ ಸಾಹ!

ಸೋಷಿಯಲ್ ಮೀಡಿಯಾದಲ್ಲಿ 'ಆ್ಯಂಗ್ರಿ ರಾಂಟ್‌ಮ್ಯಾನ್' ಎಂದೇ ಜನಪ್ರಿಯವಾಗಿದ್ದ ಹಿಂದಿ ಯೂಟ್ಯೂಬರ್ ಅಬ್ರದೀಪ್...

ಸುಪ್ರೀಂ ಕೋರ್ಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಶ್ಲಾಘಿಸಿದ ಕೇಂದ್ರ ಸರ್ಕಾರ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 1991ರಲ್ಲಿ ಆರ್ಥಿಕ ಉದಾರೀಕರಣ ಮತ್ತು ಭಾರತೀಯ...

ಸಲ್ಮಾನ್ ಖಾನ್ ಮನೆಗೆ ಗುಂಡಿನ ದಾಳಿ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಹೊರಗೆ ಗುಂಡಿನ...

ರಾಷ್ಟ್ರೀಯ ಭದ್ರತೆ ಹಿನ್ನೆಲೆ; ಟ್ವಿಟರ್ ಸ್ಥಗಿತಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನ ಆಂತರಿಕ ಸಚಿವಾಲಯವು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸಾಮಾಜಿಕ ಮಾಧ್ಯಮ ಎಕ್ಸ್(ಹಳೆಯ...