ಬೆಳಕಿನ ಹಬ್ಬ | ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ

Date:

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬ ಆಚರಣೆಯಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರ ಪೊಲೀಸ್ ಪಟಾಕಿ ಸಿಡಿಸುವ ಮುಂಚೆ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಹೇಳಿತ್ತು. ಜತೆಗೆ, ಹಸಿರು ಪಟಾಕಿ ಮಾತ್ರ ಬಳಕೆ ಮಾಡಲು ಸೂಚಿಸಿತ್ತು. ತಪ್ಪಿದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿತ್ತು. ಹಬ್ಬದ ಆರಂಭದ ದಿನ ರವಿವಾರದಿಂದ ನಗರದ ಹಲವೆಡೆ ಜನರು ಪಟಾಕಿ ಹಚ್ಚುತ್ತಿದ್ದಾರೆ. ಎರಡೇ ದಿನ ಪಟಾಕಿ ಸಿಡಿಸಿದಕ್ಕೆ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಕಡ್ಡಾಯವಾಗಿ ಹಸಿರು ಪಟಾಕಿ ಬಳಸಬೇಕು ಎಂದು ಎಚ್ಚರಿಕೆ ನೀಡಿದರೂ ಸಹ ನಗರದಲ್ಲಿ ಎರಡೇ ದಿನಕ್ಕೆ ವಾಯುಮಾಲಿನ್ಯ ಡಬಲ್ ಆಗಿದೆ. ನಿತ್ಯ ಬೆಂಗಳೂರಿನಲ್ಲಿ ವಾಹನಗಳ ಹೊಗೆ, ಧೂಳಿನಿಂದ ವಾಯು ಮಾಲಿನ್ಯ ಉಂಟಾಗುತ್ತಿತ್ತು. ಇದೀಗ ಪಟಾಕಿ ಮಾಲಿನ್ಯದಿಂದ ನಗರದ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಸದ್ಯ ಬೆಂಗಳೂರಿನ ವಾಯು ಗುಣಮಟ್ಟ (ಎಕ್ಯೂಐ) 100 ರ ಗಡಿ ದಾಟಿದೆ.

ಬೆಂಗಳೂರಿನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿಗೆ ಹೋಗಿದೆ. ಇದು ಹಲವು ಆತಂಕಕ್ಕೆ ಕಾರಣವಾಗಿದೆ. ಈ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳಲಿದೆ. ಹೆಚ್ಚಾಗಿ ಮಕ್ಕಳ ಮತ್ತು ವಯಸ್ಕರು ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ, ಅಸ್ತಮ, ಕೆಮ್ಮು ರೋಗಗಳಿಂದ ಬಳಲುತ್ತಿರುವವರಿಗೆ ಮಾಲಿನ್ಯ ವಿಷವಾಗಬಹುದು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಯನಗರ, ಕವಿಕ, ನಿಮ್ಹಾನ್ಸ್, ಸಿಲ್ಕ್ ಬೋರ್ಡ್ ಜಂಕ್ಷನ್, ಜಿಗಣಿ, ಪೀಣ್ಯ, ಮೈಲಸಂದ್ರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತವಾಗಿದೆ.

ಜಯನಗರದಲ್ಲಿ ಸಾಮಾನ್ಯ ದಿನಗಳಲ್ಲಿ 105 ಇದ್ದ ಮಾಲಿನ್ಯಕಾರಕಗಳ ಪ್ರಮಾಣ 282ಕ್ಕೆ ಏರಿಕೆಯಾಗಿದೆ. ಪಿಎಮ್‌ 2.5 ಮಾಲಿನ್ಯಕಾರಕಗಳು ಹೆಚ್ಚು ಇದ್ದು ಗುಣಮಟ್ಟ ಕಳಪೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಇನ್ನು ಹೆಬ್ಬಾಳದಲ್ಲೂ 57 ಇದ್ದ ಗಾಳಿಯ ಮಾಲಿನ್ಯಕಾರಕಗಳು ಪಟಾಕಿ ಹೊಗೆಯಿಂದಾಗಿ 176ಕ್ಕೆ ಏರಿಕೆಯಾಗಿದ್ದು, ಬಸವೇಶ್ವರನಗರದಲ್ಲಿ 39 ರಿಂದ 82 ಕ್ಕೆ ಏರಿಕೆಯಾಗಿದೆ. ಕಸ್ತೂರಿನಗರದಲ್ಲಿ ಗಾಳಿಯ ಮಾಲಿನ್ಯಕಾರಕಗಳು 57 ದಿಂದ 77ಕ್ಕೆ ಏರಿಕೆಯಾಗಿದೆ. ಕವಿಕ ಬಳಿ 90 ರಿಂದ 192ಕ್ಕೆ ಗಾಳಿಯ ಗುಣಮಟ್ಟ ಇಳಿಕೆಯಾಗಿದ್ದು, ಸಾಧಾರಣವಾಗಿದೆ. ನಿಮ್ಯಾನ್ಸ್ ಆಸ್ಪತ್ರೆ ಬಳಿ 51 ರಿಂದ 179ಕ್ಕೆ ಜಾಸ್ತಿಯಾಗಿದೆ. ಸಿಲ್ಕ್ ಬೋರ್ಡ್​​ನಲ್ಲಿ 68 ರಿಂದ 175ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಳಕಿನ ಹಬ್ಬ | ಎರಡೇ ದಿನದಲ್ಲಿ 80ಕ್ಕೂ ಹೆಚ್ಚು ಪಟಾಕಿ ಅವಘಡಗಳು ವರದಿ

ಮೆಜೆಸ್ಟಿಕ್​ನಲ್ಲಿ 67 ರಿಂದ 101ಕ್ಕೆ ಏರಿಕೆಯಾಗಿದೆ. ಜಿಗಣಿಯಲ್ಲಿ 80 ರಿಂದ 128ಕ್ಕೆ ಏರಿಕೆಯಾಗಿದೆ. ಪೀಣ್ಯದಲ್ಲಿ 80 ರಿಂದ 108ಕ್ಕೆ ತಲುಪಿದೆ. ಮೈಲಸಂದ್ರದಲ್ಲಿ 78 ರಿಂದ 187 ಕ್ಕೆ ಏರಿಕೆಯಾಗಿದೆ. ಕೆಆರ್​ಪುರಂನಲ್ಲೂ ಮಾಲಿನ್ಯ ಹೆಚ್ಚಳವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹4.8 ಕೋಟಿ ನಗದು ವಶ; ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಚಕ್ಷಣ ದಳದ (ಎಫ್‌ಎಸ್‌ಟಿ) ಅಧಿಕಾರಿಗಳು ₹4.8...

ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು

ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಮತದಾರರು ಮೊಬೈಲ್‌ ತೆಗೆದುಕೊಂಡು ಹೋಗದಂತೆ ಚುನಾವಣಾ...

ವಿಜಯಪುರ | ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ: ಎಂ.ಬಿ ಪಾಟೀಲ್‌

ಈ ಬಾರಿ ಲೋಕಸಭೆಯಲ್ಲಿ ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು...

ಮೈಸೂರು | ಬಿಜೆಪಿ ಸರ್ಕಾರ ಧಾರ್ಮಿಕ ದ್ವೇಷ ಹರಡಿ ರಾಜಕೀಯ ಮಾಡುತ್ತಿದೆ: ಡಾ. ತಿಮ್ಮಯ್ಯ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಧರ್ಮ ಧರ್ಮಗಳ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ...