ಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಆಂಧ್ರ ಡಿಸಿಎಂ ವಿರುದ್ಧ ಎಫ್ಐಆರ್ ದಾಖಲು

Date:

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆಂಧ್ರ ಪ್ರದೇಶ ಡಿಸಿಎಂ ನಾರಾಯಣಸ್ವಾಮಿ ಕಲತೂರು ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ಹೈದರಾಬಾದ್‌ನ ಹುಕೂರು ಮಂಡಲ್‌ನಲ್ಲಿ ಹಮ್ಮಿಕೊಂಡಿದ್ದ ಸಮಾಜ ಸುಧಾರಕ ಯಾತ್ರೆಯ ಸಾರ್ವಜನಿಕ ಸಮಾರಂಭದಲ್ಲಿ ಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್‌ನ ಉಪಾಧ್ಯಕ್ಷರಾದ ಡಾ. ಮಲ್ಲು ರವಿ ದೂರು ದಾಖಲಿಸಿದ್ದಾರೆ.

ಡಿಸಿಎಂ ನಾರಾಯಣಸ್ವಾಮಿ ಕಲತೂರು ವಿರುದ್ಧ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕ ಅವಮಾನ ಹಾಗೂ ಶಾಂತಿಗೆ ಭಂಗ ತರುವುದು), 505(2) (ವಿವಿಧ ಜನಾಂಗಗಳ ಮಧ್ಯೆ ದ್ವೇಷ, ಸಾಮರಸ್ಯವನ್ನು ಕೆಡಿಸುವುದು) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಲ್ಲು ರವಿ, ಆಂಧ್ರ ಡಿಸಿಎಂ ಅವರು ಕಾಂಗ್ರೆಸ್ ಸಂಸದೀಯ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿ ವಿರುದ್ಧ ಅವಿಭಜಿತ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅಕಾಲಿಕ ಮರಣಕ್ಕೆ ಸೋನಿಯಾ ಕಾರಣರೆಂಬ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.  ಇವರ ಇಂತಹ ಹೇಳಿಕೆಗಳು ಖಂಡನೀಯ ಹಾಗೂ ಉತ್ತಮ ರಾಜಕಾರಣದಲ್ಲಿ ಶೋಭೆ ತರುವುದಿಲ್ಲ. ಈ ಪ್ರಕರಣದ ಜೊತೆ ‘ದೇಶಕ್ಕಾಗಿ ದಾನ ಮಾಡಿ’ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಆರಂಭಿಸಿ ವಂಚಿಸಿರುವವರ ವಿರುದ್ಧ ಸೈಬರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಲ್ಲು ರವಿ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಿಪ್ಯಾಟ್ ಪರಿಶೀಲನಾ ಗುರುತಿನ ಚೀಟಿ, ಮತಪತ್ರ ಚುನಾವಣಾ ಪ್ರಕ್ರಿಯೆಗೆ ಸುಪ್ರೀಂ ತಿರಸ್ಕಾರ

ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ...

ಗೌಪ್ಯತೆಯ ಬದ್ದತೆ ಮುರಿಯಲು ಒತ್ತಾಯಿಸಿದರೆ ಭಾರತವನ್ನೇ ತೊರೆಯುತ್ತೇವೆ: ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಚ್‌ ಎನ್‌ಕ್ರಿಪ್ಶನ್‌) - ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ...

ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್...

2025ರ ವೇಳೆಗೆ ಬಿಜೆಪಿ ಮೀಸಲಾತಿ ರದ್ದುಪಡಿಸಲಿದೆ: ತೆಲಂಗಾಣ ಸಿಎಂ ಆರೋಪ

ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ...