ಅರಣ್ಯ ಸಂರಕ್ಷಣಾ ಕಾಯ್ದೆ; ವನ್ಯಜೀವಿ-ಮಾನವ ಪ್ರಾಣಿ ಸಂಘರ್ಷಕ್ಕೆ ದಾರಿ

Date:

  • ಪ್ರಾಣಿಸಂಕುಲಗಳ ನಾಶಕ್ಕೆ ಗಣಿಗಾರಿಕೆ, ಮರಗಳ ಕಡಿತ ಕಾರಣ
  • ಅರಣ್ಯ ನಾಶ ಸಾಕು ಇನ್ನಾದರೂ ಪರಿಸರ ಉಳಿಸುವ ಬಗ್ಗೆ ಚಿಂತಿಸಿ

ಪರಿಸರ ಪ್ರೇಮಿಗಳ ಆಕ್ಷೇಪಕ್ಕೆ ಮತ್ತು ವನ್ಯಜೀವಿ-ಮಾನವ ಸಂಘರ್ಷಕ್ಕೆ ಎಡೆ ಮಾಡಿಕೊಡುವ 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್‌ ಹೂವರ್‌ ಮನವಿ ಮಾಡಿಕೊಂಡಿದ್ದಾರೆ.

“ಬಿಜೆಪಿ ಸರ್ಕಾರ ಪ್ರಸ್ತಾಪಿಸಿರುವ 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆಯು ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಚುನಾವಣೆಯ ಹಿನ್ನೆಲೆ, ಕರ್ನಾಟಕಕ್ಕೆ ಬಂದು ಬಂಡೀಪುರ ಮತ್ತು ಮೈಸೂರು ವೀಕ್ಷಿಸಿ, ಹುಲಿಗಳ ಸಂತತಿ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದರು. ಈ ಪ್ರಾಣಿ ಸಂಕುಲಗಳು ಜೀವಂತವಾಗಿರಬೇಕೆಂದರೆ ಮಸೂದೆಯನ್ನು ಹಿಂಪಡೆಯುವತ್ತ ಪ್ರಧಾನಿ ಆಲೋಚಿಸಬೆಕು” ಎಂದು ಅವರು ಹೇಳಿದ್ದಾರೆ.

“ಹುಲಿಗಳ ಸಂತತಿ, ಪ್ರಾಣಿ ಸಂಕುಲಗಳ ಬೆಳವಣಿಗೆಗೆ ಅರಣ್ಯದ ಅವಶ್ಯಕತೆ ಇದೆ. 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಅಂಗೀಕಾರಗೊಂಡರೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಮ್‌ಒಇಎಫ್‌ಸಿಸಿ) ಗಣಿಗಾರಿಕೆ ಸೇರಿದಂತೆ ಹಲವು ಅರಣ್ಯ ನಾಶ ಮಾಡುವ ಕಾರ್ಯಚಟುವಟಿಕೆಗಳಿಗೆ ಸಮ್ಮತಿಸುವುದನ್ನು ಆರಂಭಿಸುತ್ತದೆ. ಇದರಿಂದ ಮುಂದೆ ವನ್ಯಜೀವಿ-ಮಾನವ ಸಂಘರ್ಷವಾಗುವುದು ಕಟ್ಟಿಟ್ಟ ಬುತ್ತಿ. ಹೀಗಾಗಿ, ಈ ಮಸೂದೆ ಜಾರಿಯಾಗುವುದನ್ನು ತಡೆಯಿರಿ” ಎಂದು ಜೋಸೆಫ್‌ ಹೂವರ್‌ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದುವರೆದು, “ನಿಮ್ಮ ಮಾತುಗಳನ್ನೇ ವೇದ ವಾಕ್ಯದಂತೆ ಪಾಲಿಸುವ ಸದಸ್ಯರು, ಕಾರ್ಯಕರ್ತರು ಹಾಗೂ ಶಾಸಕರಿಗೆ 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಯೋಜನೆ ಕೈ ಬಿಡಬೇಕೆಂದು ಸೂಚನೆ ನೀಡಿ. ಮೇ 18 ಸಾರ್ವಜನಿಕರು ಈ ಮಸೂದೆ ಜಾರಿಯಾಗುವ ಬಗ್ಗೆ ಆಕ್ಷೇಪ ಸಲ್ಲಿಸಲು ಕಡೆಯ ದಿನವಾಗಿದೆ. ನೀವು ಮನಸ್ಸು ಮಾಡಿದರೆ ಇದರ ಅವಶ್ಯಕತೆ ಇರುವುದಿಲ್ಲ. ಮಸೂದೆ ಜಾರಿಯಾಗದಂತೆ ನೀವು ತಡೆಯಬಹುದು. ಕಾಡು ನಾಶದಿಂದ, ವಾತವರಣ ಬದಲಾವಣೆ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಂಕಷ್ಟಗಳು ದೇಶದಲ್ಲಿ ಅನುಭವಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತು ಅರಣ್ಯ ಉಳಿಸಿಕೊಳ್ಳಬೇಕಿದೆ. ಅರಣ್ಯಗಳ ಮಧ್ಯೆ ರಸ್ತೆ, ರೈಲು ನಿರ್ಮಾಣವಾಗಿ ವಾಹನಗಳ ಸಂಚಾರದಿಂದ, ತಿಳಿಯದೆ ರಸ್ತೆಗಿಳಿದ ಪ್ರಾಣಿಗಳ ಮಾರಣ ಹೋಮವಾಗುತ್ತಿದೆ. ಹೀಗಾಗಿ ಪರಿಸರಕ್ಕೆ ಮಾರಕವಾಗುವವ ಈ ಕಾಯ್ದೆ ಕೈಬಿಡುವ ಬಗ್ಗೆ ಚಿಂತಿಸಿ”ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪ್ರಧಾನಿ ಮೋದಿಯವರ ‘ಅರಣ್ಯಾಸಕ್ತಿ’; ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮಸೂದೆ ಹೇಳುವುದೇನು?

2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಮೂಲಕ ಅನೇಕ ಮೀಸಲು ಅರಣ್ಯಗಳಿಗೆ ನೀಡಲಾದ ಕಾನೂನು ರಕ್ಷಣೆಯನ್ನು ತೆಗೆಯಲು ಪ್ರಯತ್ನಿಸಿದೆ. ಲೋಕಸಭೆಯ ಮುಂದೆ ಮಾರ್ಚ್ 29ರಂದು ಮಸೂದೆಯನ್ನು ಮಂಡಿಸಲಾಗಿದೆ. ಮಸೂದೆಯು ಅರಣ್ಯ ಸಂರಕ್ಷಣೆಯ ಬದಲಾಗಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸುಲಭವಾಗಿ ಅರಣ್ಯ ಭೂಮಿಯನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ರೂಪುಗೊಂಡಿದೆ.

ಪ್ರಸ್ತಾಪಿತ ಹೊಸ ಮಸೂದೆಯಲ್ಲಿ ಅರಣ್ಯ ಭೂಮಿಯ ಅವಿಭಾಜ್ಯ ಅಂಗವಾಗಿರುವ ಒಂದು ಭಾಗವನ್ನು ರಕ್ಷಣೆಯ ವಲಯದಿಂದ ಹೊರಗಿಡಲಾಗಿದೆ. ತ್ವರಿತ ಸೇನಾ ಕಾರ್ಯಯೋಜನೆ ಮತ್ತು ಭದ್ರತೆ ಸಂಬಂಧಿ ಯೋಜನೆಗಳ ಅಗತ್ಯವನ್ನು ಮುಂದಿಟ್ಟು ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಈ ಮಸೂದೆಯಲ್ಲಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸ್ಪಷ್ಟೀಕರಣ ನೀಡುವ ರೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಪರಿಸರ ತಜ್ಞರ ಪ್ರಕಾರ, ವಾಣಿಜ್ಯ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಲು ನೆರವಾಗುವಂತೆ ಈ ತಿದ್ದುಪಡಿಗಳನ್ನು ರೂಪಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್...

ತುಮಕೂರು | ಸಿದ್ದರಾಮಯ್ಯನವರ ₹2000 ಚುನಾವಣೆ ಇದಲ್ಲ: ವಿ ಸೋಮಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ₹2,000ದ ಚುನಾವಣೆ ಇದಲ್ಲ. ದೇಶದ ಭವಿಷ್ಯ ರೂಪಿಸುವ...

ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಿಸಲು ವಾಕಥಾನ್ ಜಾಥಾ

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ...

ವಿಜಯಪುರ | ಸ್ವಚ್ಚತೆ ಕಾಣದೆ ತುಂಬಿ ಹರಿಯುತ್ತಿವೆ ಚರಂಡಿ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಬಗೇರಿ,...