ಹಿಜಾಬ್ | ‘ಮತ್ತೆ ಕಾಲೇಜಿಗೆ ಹೋಗುತ್ತೇನೆ’: ದೇಶದ ಗಮನ ಸೆಳೆದಿದ್ದ ಮುಸ್ಕಾನ್

Date:

ಹಿಜಾಬ್ ವಿವಾದ ಮುನ್ನೆಲೆಯಲ್ಲಿದ್ದಾಗ ಕೇಸರಿ ಶಾಲು ಧರಿಸಿ ಗಲಾಟೆ ಮಾಡಿದ್ದ ವಿದ್ಯಾರ್ಥಿಗಳ ಮುಂದೆ ಘೋಷಣೆ ಕೂಗಿ ದೇಶದ ಗಮನ ಸೆಳೆದಿದ್ದ ಮಂಡ್ಯದ ಮುಸ್ಕಾನ್‌ ಮತ್ತೆ ಮಾತನಾಡಿದ್ದಾರೆ. ‘ನಾನು ಮತ್ತೆ ಕಾಲೇಜಿಗೆ ಹೋಗುತ್ತೇನೆ’ ಎಂದಿದ್ದಾರೆ.

ಹಿಜಾಬ್ ನಿರ್ಬಂಧದ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಹಿಜಾಬ್ ನಿಷೇಧದ ಕಾರಣದಿಂದ ಶಾಲೆ-ಕಾಲೇಜು ತೊರೆದಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರದ ನಿಲುವನ್ನು ಸ್ವಾಗತಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸ್ವಾಗತಿಸಿರುವ ಮುಸ್ಕಾನ್, “ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮ್ಮದ್​ ಅವರಿಗೆ ಧನ್ಯವಾದಗಳು. ನನ್ನ ಓದು ಅರ್ಧಕ್ಕೆ ನಿಂತಿತ್ತು. ಈಗ ನಾನು ಮತ್ತೆ ಕಾಲೇಜಿಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನನಗೆ ಭರವಸೆ ಇತ್ತು. ನಾನು ಓದನ್ನು ಮುಂದುವರೆಸುತ್ತೇನೆ. ಹಿಜಾಬ್ ನಿಷೇಧದಿಂದಾಗಿ ಯಾರೆಲ್ಲ ಕಾಲೇಜು ತೊರೆದಿದ್ದಾರೆ. ಅವರೆಲ್ಲರೂ ಮರಳಿ ಕಾಲೇಜಿಗೆ ಬನ್ನಿ” ಎಂದು ಕರೆಕೊಟ್ಟಿದ್ದಾರೆ.

“ನಾವೆಲ್ಲರೂ ಸಹೋದರರಂತೆ ಇದ್ದೇವೆ. ಶಿಕ್ಷಣದಲ್ಲಿ ರಾಜಕೀಯ ಬೇಡ. ಮೊದಲಿನಂತೆ ನಾವೆಲ್ಲರೂ ಒಟ್ಟಿಗೆ ಇರಬೇಕು” ಎಂದು ಹೇಳಿದ್ದಾರೆ.

ಹಿಜಾಬ್‌ ವಿವಾದ ರಾಜ್ಯದಲ್ಲಿ ವ್ಯಾಪಿಸಿದ್ದ ಸಮಯದಲ್ಲಿ ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿಯೂ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಿಜಾಬ್ ವಿರುದ್ಧ ಗಲಾಟೆ ಮಾಡಿದ್ದರು. ಆ ವೇಳೆ, ಅದೇ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಹಿಜಾಬ್ ಧರಿಸಿ ಬಂದಿದ್ದರು. ಅವರನ್ನು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಸುತ್ತುವರೆದಿದ್ದರು. ಅವರೆಲ್ಲರ ಮುಂದೆ ಹಿಜಾಬ್ ಪರ ಘೋಷಣೆ ಕೂಗಿದ್ದ ಮುಸ್ಕಾನ್ ದೇಶ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದರು.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ರತಿ ಮುಸ್ಲಿಂ ವಿದ್ಯಾರ್ಥಿನಿ ಯರು ಕೇಸರಿ ಬಣ್ಣದ ಹಿಜಬ್ ಹಾಕಿ ಶಾಲೆಗೆ ಹೋಗಿ ಯಂದು ನನ್ನ ಸಣ್ಣ ಸಲಹೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರಾಕೇಶ ಹತ್ಯೆ ಖಂಡಿಸಿ ಮಾದಿಗ ಸಮಾಜದ ಪ್ರತಿಭಟನೆ

ದಲಿತ ಯುವಕ ರಾಕೇಶ ಕೊಲೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ಮಾದಿಗ ಸಮಾಜ...

ಶಿವಮೊಗ್ಗ | ಕಾಂಗ್ರೆಸ್‌ ಮುಖಂಡರ ಮನೆ ಮನೆ ಪ್ರಚಾರ; ಕಾರ್ಡ್‌ ಹಂಚಿ ಮತಯಾಚನೆ

ಶಿವಮೊಗ್ಗನಗರದ ಗೋಪಾಲಗೌಡ ಬಡಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮನೆಮನೆಗೆ ತೆರಳಿ...

ತುಮಕೂರು | ನಟಿ ಶೃತಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹ

ಬಿಜೆಪಿ ಪಕ್ಷದ ಪ್ರಚಾರಕಿ ನಟಿ ಶ್ರುತಿ ಅವರ ಫ್ರಿ ಬಸ್ ಕುರಿತ...

ಕಲಬುರಗಿ | ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಮತದಾರರಲ್ಲಿ ಸಿಎಂ ಮನವಿ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದರಿಂದ ಖರ್ಗೆಯವರಿಗೆ...