ಬಿರಿಯಾನಿ ಕೇಳಿದರೆ ಕುಷ್ಕಾ ನೀಡಿದ ಹೋಟೆಲ್ ಮಾಲೀಕ; ₹1000 ದಂಡ ವಿಧಿಸಿದ ನ್ಯಾಯಾಲಯ

Date:

ಬಿರಿಯಾನಿ ನೀಡಿ ಎಂದು ಕೇಳಿದರೆ ಕುಷ್ಕಾ ನೀಡಿದ್ದ ಹೋಟೆಲ್ ಮಾಲೀಕನಿಗೆ ಗ್ರಾಹಕ ನ್ಯಾಯಾಲಯವು ₹1,000 ದಂಡ ವಿಧಿಸಿದೆ. ಜತೆಗೆ, ₹150 ಬಿರಿಯಾನಿ ಹಣವನ್ನು ಗ್ರಾಹಕನಿಗೆ ಹಿಂತಿರುಗಿಸುವಂತೆ ಆದೇಶಿಸಿದೆ.

ನಾಗರಭಾವಿ ನಿವಾಸಿ ಕೃಷ್ಣಪ್ಪ ಎಂಬುವವರು ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಹಿನ್ನೆಲೆ, 2023ರ ಏಪ್ರಿಲ್ 2ರಂದು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್ ಪ್ರಶಾಂತ್‌ನಿಂದ ₹150 ಕೊಟ್ಟು ಬಿರಿಯಾನಿ ಪಾರ್ಸೆಲ್ ತಂದಿದ್ದರು.

ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ತಾವು ಆರ್ಡ್‌ರ್ ಮಾಡಿದ್ದ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಇರಲಿಲ್ಲ. ಈ ಬಗ್ಗೆ ವಿಚಾರಿಸಲು ಕೃಷ್ಣಪ್ಪ ಅವರು ಹೋಟೆಲ್ ಪ್ರಶಾಂತ್ ಮಾಲೀಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ, ಹೋಟೆಲ್ ಮಾಲೀಕ ಮತ್ತೊಂದು ಬಿರಿಯಾನಿಯನ್ನು ಮನೆಗೆ ಕಳುಹಿಸಿ ಕೊಡುವುದಾಗಿ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ನಂಬಿ ಕೃಷ್ಣಪ್ಪ ದಂಪತಿ ಸುಮಾರು ಎರಡು ಗಂಟೆ ಊಟ ಮಾಡದೇ ಕಾದು ಕುಳಿತಿದ್ದಾರೆ. ಎಷ್ಟು ಕಾದರೂ ಚಿಕನ್ ಬಿರಿಯಾನಿ ಬರದ ಹಿನ್ನೆಲೆ, ಕುಷ್ಕಾ ತಿಂದೆ ರಾತ್ರಿ ಕಳೆದಿದ್ದಾರೆ.

ಎಪ್ರಿಲ್ 28 ರಂದು ಕೃಷ್ಣಪ್ಪ ಅವರು ಹೋಟೆಲ್ ಮಾಲೀಕನಿಗೆ ಈಗಾಗಿರುವ ತಪ್ಪಿನ ಬಗ್ಗೆ ಕಾನೂನಿನ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ಮಾಲೀಕ ಉದಾಸೀನ ತೋರಿ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು: ರಾಜ್ಯದ 63 ಕಡೆ ದಾಳಿ

ಕೃಷ್ಣಪ್ಪ ಅವರು ಪ್ರಶಾಂತ್ ಹೋಟೆಲ್ ಮಾಲೀಕ ₹30 ಸಾವಿರ ಪರಿಹಾರ ನೀಡುವಂತೆ ಕೋರಿ ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್​ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು.

ಹೋಟೆಲ್​ ಮಾಲೀಕ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ವಕೀಲ ಆಗಿರುವ ಕೃಷ್ಣಪ್ಪ ತಾವೇ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

“ಹೋಟೆಲ್ ಮಾಲೀಕ ಗ್ರಾಹಕನಿಂದ ಬಿರಿಯಾನಿಗೆ ಪೂರ್ತಿ ಹಣ ಪಡೆದು ತಪ್ಪಾದ ಪಾರ್ಸೆಲ್ ನೀಡಿದೆ. ಇದು ತಿಳಿದೋ ತಿಳಿಯದೇಯೋ ಆಗಿರುವ ತಪ್ಪಾಗಿದೆ. ಈ ಬಗ್ಗೆ ಗ್ರಾಹಕ ಹೋಟೆಲ್ ಮಾಲೀಕರಿಗೆ ತಿಳಿಸಿದರೂ, ಕೂಡ ಬದಲಿ ಬಿರಿಯಾನಿ ಪಾರ್ಸೆಲ್ ನೀಡಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹೋಟೆಲ್‌ ಮಾಲೀಕ ವಿಫಲವಾಗಿದ್ದಾರೆ. ಹಾಗಾಗಿ, ತಪ್ಪಿಗೆ ₹1000 ಪರಿಹಾರ ಜತೆಗೆ ಬಿರಿಯಾನಿಗೆ ಪಾವತಿಸಿದ ₹150 ಹಣವನ್ನು ನೀಡಬೇಕು” ಎಂದು ಗ್ರಾಹಕ ನ್ಯಾಯಾಲಯ ನ್ಯಾಯಾಧೀಶರು 2023ರ ಅ.5 ರಂದು ಆದೇಶಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಂಡರಗಿ ತಾಲೂಕು ಪಂಚಾಯತ್ ವಿಶಿಷ್ಟ ನಡೆ; ಮದುವೆ ಮನೆಯಲ್ಲಿ ಮತದಾನ ಜಾಗೃತಿ

ಮುಂಡರಗಿ ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ನದಾಫ- ಹರ್ಲಾಪೂರ ಕುಟುಂಬದ ಮದುವೆ...

ಗದಗ | ಮತದಾನದ ಮಹತ್ವ ಕುರಿತು ಯುವ ಮತದಾರರಿಂದ ಮಾನವ ಸರಪಳಿ

ಈ ಬಾರಿ ಗದಗ ಜಿಲ್ಲೆಯಲ್ಲಿ ಹೊಸದಾಗಿ 26 ಸಾವಿರ ಮಂದಿ ಯುವ...

ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ | ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅಂಜುಮನ್ ಸಂಸ್ಥೆಯಿಂದ ಮನವಿ

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆಗೈದ ಆರೋಪಿ ಫಯಾಝ್...

ದಕ್ಷಿಣ ಕನ್ನಡ | ಬಿಜೆಪಿ ಸೋಲಿಸಿ ಜಾತ್ಯತೀತ ಅಭ್ಯರ್ಥಿ ಗೆಲ್ಲಿಸಿ: ಡಿವೈಎಫ್ಐ ಕರೆ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವು ಕಳೆದ ಎರಡು ಅವಧಿಯಿಂದ...