ಲೈಂಗಿಕ ಉದ್ದೇಶವಿಲ್ಲದೆ ಅಪ್ಪಿಕೊಳ್ಳುವುದು ಅಪರಾಧವಲ್ಲ ಎಂದ ಬ್ರಿಜ್ ಭೂಷಣ್ ಸಿಂಗ್

Date:

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ದೆಹಲಿ ನ್ಯಾಯಾಲಯದಲ್ಲಿ ”ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ಬುಧವಾರ(ಆಗಸ್ಟ್ 10) ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್ ಭೂಷಣ್ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ನಿರಾಕರಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಪರ ಹಿರಿಯ ವಕೀಲ ರಾಜೀವ್ ಮೋಹನ್ ವಕಾಲತ್ತು ವಹಿಸಿದ್ದಾರೆ.

ನ್ಯಾಯಮೂರ್ತಿ ಹರ್ಜಿತ್ಸಿಂಗ್ ಜಸ್ಬಾಲ್ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ. ಕುಸ್ತಿ ಪಂದ್ಯಗಳು ಹೆಚ್ಚಾಗಿ ಪುರುಷ ತರಬೇತುದಾರರನ್ನೇ ಹೊಂದಿರುತ್ತವೆ ಎಂದು ಹೇಳಿದ ವಕೀಲರು, ‘ಆತಂಕದಿಂದ ಅಥವಾ ಉತ್ತಮ ಸಾಧನೆಗಾಗಿ ಆಟಗಾರನನ್ನು ಹುರಿದುಂಬಿಸುವ ಸಲುವಾಗಿ ಪುರುಷ ಕೋಚ್ ತಬ್ಬಿಕೊಂಡರೆ, ಅದು ಸಹಜ’ ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಶಾಸಕನ ಸಹಾಯ; ವರದಿ ಮಾಡಿದ ಪತ್ರಕರ್ತನ ಮೇಲೆ ಗೂಂಡಾಗಳಿಂದ ಹಲ್ಲೆ

“ತಮ್ಮ ಕಕ್ಷಿದಾರರು ಅನೇಕ ವರ್ಷಗಳಿಂದ ಆಟಗಾರರಿಗೆ ತಿಳಿದಿರುವ ವ್ಯಕ್ತಿಯಾಗಿದ್ದರು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಪದಕ ಗೆಲ್ಲುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು ಮತ್ತು ಆ ಅಪ್ಪುಗೆ ಅವರ ಸಂತೋಷದ ಅಭಿವ್ಯಕ್ತಿಯಾಗಿತ್ತು. ಆದ್ದರಿಂದಲೇ ಅವರಿಗೆ ಲೈಂಗಿಕ ಕಿರುಕುಳದ ಉದ್ದೇಶ ಇರಲಿಲ್ಲ ಎಂದು ನಾವು ಸಮರ್ಥಿಸಿಕೊಳ್ಳುತ್ತೇವೆ” ಎಂದು ನ್ಯಾಯಾಲಯಕ್ಕೆ ಬ್ರಿಜ್ ಭೂಷಣ್ ಪರ ವಕೀಲರು ತಿಳಿಸಿದರು.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 188 ರ ಪ್ರಕಾರ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ತನ್ನ ಕಕ್ಷಿದಾರನ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ವಕೀಲ ರಾಜೀವ್ ಮೋಹನ್ ನ್ಯಾಯಾಲಯಕ್ಕೆ ತಿಳಿಸಿದರು. ಮ್ಯಾಜಿಸ್ಟ್ರೇಟ್ ಅಪರಾಧದ ಅರಿವನ್ನು ಮಾತ್ರ ತೆಗೆದುಕೊಳ್ಳಬಹುದು. ಆದರೆ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಕರ್ನಾಟಕದ ಬಳ್ಳಾರಿಯ ಘಟನೆಯೊಂದನ್ನು ಉದಾಹರಣೆ ನೀಡಿದ ವಕೀಲರು, ಸೆಕ್ಷನ್ 176 ರಿಂದ 188 ರವರೆಗಿನ ವಿಚಾರಣೆ ಅಥವಾ ವಿಚಾರಣೆಯ ಸ್ಥಳವು ಯಾವ ವಿಚಾರಣೆಯನ್ನು ನಡೆಸಬೇಕು ಎಂಬುದನ್ನು ನಿರ್ದಿಷ್ಟಪಡಿಸುತ್ತದೆ. ಅಪರಾಧವಾಗಿದ್ದರೆ ಎಲ್ಲಿ ಅಪರಾಧ ಮಾಡಲಾಗಿದೆ, ಕಿರುಕುಳ, ಅತ್ಯಾಚಾರ ಇತ್ಯಾದಿ ಅಪರಾಧಗಳನ್ನು ನಮೂದಿಸಬೇಕು ಎಂದು ವಾದ ಮಂಡಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯ ಭದ್ರತೆ ಹಿನ್ನೆಲೆ; ಟ್ವಿಟರ್ ಸ್ಥಗಿತಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನ ಆಂತರಿಕ ಸಚಿವಾಲಯವು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸಾಮಾಜಿಕ ಮಾಧ್ಯಮ ಎಕ್ಸ್(ಹಳೆಯ...

ಸರ್ಕಾರದ ಮೇಲೆ ಕಾರ್ಪೊರೇಟ್ ನಿಯಂತ್ರಣವಿದೆ; ಬಿಜೆಪಿ ಪ್ರಣಾಳಿಕೆಯನ್ನ ರೈತರು ನಂಬುವುದಿಲ್ಲ: ರಾಕೇಶ್ ಟಿಕಾಯತ್

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ....

ಬೀದರ್‌ | ಬೃಹತ್‌ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ

ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಈಶ್ವರ ಖಂಡ್ರೆ ಮಗ...

ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ಬಂಗಾಳ ರಾಜ್ಯಪಾಲರಿಗೆ ಚುನಾವಣಾ ಆಯೋಗ ಸಲಹೆ

ಮತದಾನದ ದಿನದಂದು ಕೋಚ್‌ ಬೆಹರ್‌ ಜಿಲ್ಲೆಗೆ ತೆರಳದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ...