ಕೆ.ಜಿಗೆ ₹50ಕ್ಕಿಂತ ಬೆಲೆ ಕಡಿಮೆಯಿರುವ ಸೇಬು ಹಣ್ಣು ಆಮದಿಗೆ ಕೇಂದ್ರ ನಿಷೇಧ

Date:

  • ಸೇಬು ಟರ್ಕಿಯಿಂದ ಗರಿಷ್ಠ ಆಮದು
  • ಭೂತಾನ್ ಹಣ್ಣಿನ ಆಮದಿಗೆ ವಿನಾಯತಿ

ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 50 ರೂ.ಗಿಂತಲೂ ಕಡಿಮೆಯಿರುವ ಸೇಬು ಹಣ್ಣಿನ ಆಮದನ್ನು ಸೋಮವಾರ (ಮೇ 8) ನಿಷೇಧಿಸಿದೆ.

ಪ್ರತಿ ಕೆಜಿಗೆ 50ಕ್ಕಿಂತ ಹೆಚ್ಚಿದ್ದರೆ ಸೇಬನ್ನು ಆಮದು ಮಾಡಬಹುದು ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯೊಂದರಲ್ಲಿ ತಿಳಿಸಿದೆ.

ಇದರಿಂದ ದೇಶಕ್ಕೆ ಅಧಿಕ ಪ್ರಮಾಣದಲ್ಲಿ ಹಣ್ಣನ್ನು ರಫ್ತು ಮಾಡುತ್ತಿರುವ ಇರಾನ್, ಯುಎಇ ಹಾಗೂ ಅಫ್ಗಾನಿಸ್ತಾನಕ್ಕೆ ಹೊಡೆತ ಬೀಳಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಣ್ಣಿನ ಆಮದು ನಿಷೇಧ ಚೀನಾದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಆದರೆ ಅಂಕಿ ಅಂಶಗಳ ಪ್ರಕಾರ ಅತಿ ಕಡಿಮೆ ಪ್ರಮಾಣದ ಸೇಬಿನ ಹಣ್ಣು ಆಮದು ಆಗುತ್ತಿದೆ.

ಸೇಬು ಹಣ್ಣಿನ ಸಿಐಎಫ್ (ವೆಚ್ಚ, ವಿಮೆ, ಸರಕು ಸಾಗಣೆ) ಆಮದು ಬೆಲೆ ಪ್ರತಿ ಕೆಜಿಗೆ ₹50ಕ್ಕಿಂತಲೂ ಕಡಿಮೆ ಇರುವ ಆಮದನ್ನು ನಿಷೇಧಿಸಲಾಗಿದೆ ಎಂದು ಡಿಜಿಎಫ್‌ಟಿ ಅಧಿಸೂಚನೆಯಲ್ಲಿ ತಿಳಿಸಿದೆ.

ಹಣ್ಣಿನ ಋತುಮಾನ ಕ್ಷೀಣಿಸಿರುವ ಹಿನ್ನೆಲೆ ಕೃಷಿ ಸಚಿವಾಲಯದ ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸೇಬಿನ ಹಣ್ಣು ಇತ್ತೀಚೆಗೆ ವಾಷಿಂಗ್ಟನ್ ಹಾಗೂ ಟರ್ಕಿಗಳಿಂದ ಹೆಚ್ಚು ಆಮದಾಗುತ್ತಿತ್ತು. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 300 ದಶಲಕ್ಷ ಡಾಲರ್ ಮೌಲ್ಯದ ಸೇಬಿನ ಹಣ್ಣು ಆಮದಾಗಿತ್ತು.

ಭೂತಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ಸೇಬಿನ ಹಣ್ಣುಗಳಿಗೆ ಕನಿಷ್ಠ ಆಮದು ಬೆಲೆಯ ಷರತ್ತು ಅನ್ವಯಿಸುವುದಿಲ್ಲ ಎಂದು ಅಧಿಸೂಚನೆ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಗಲಭೆ ಲಾಭ ಪಡೆದ ವಿಮಾನಯಾನ ಸಂಸ್ಥೆಗಳು; ₹2 ಸಾವಿರ ಬೆಲೆಯ ಟಿಕೆಟ್ ₹25 ಸಾವಿರಕ್ಕೆ ಏರಿಕೆ

ಸೇಬು ಹಣ್ಣಿನ ರಫ್ತನ್ನು ಅಮೆರಿಕ, ಇರಾನ್, ಬ್ರೆಜಿಲ್, ಯುಎಇ, ಅಫ್ಗಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಇಟಲಿ, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್ ದೇಶಗಳು ಮಾಡುತ್ತವೆ.

ಭಾರತಕ್ಕೆ ಟರ್ಕಿಯಿಂದ ಗರಿಷ್ಠ ಅಂದರೆ 72 ದಶಲಕ್ಷ ಡಾಲರ್‌ ಮೌಲ್ಯದ ಸೇಬಿನ ಹಣ್ಣು ಆಮದಾಗುತ್ತಿದೆ. ಚಿಲಿ (38.6 ದಶಲಕ್ಷ), ಇಟಲಿ (34), ಇರಾನ್ (26) ನಂತರ ಸ್ಥಾನ ಪಡೆದಿವೆ. ಅಮೆರಿಕದಿಂದ ಆಮದಾಗುವ ಸೇಬಿನ ಪ್ರಮಾಣ 50 ಲಕ್ಷ ಡಾಲರ್‌ಗೆ ಕುಸಿದಿದೆ.

ಜಮ್ಮು ಮತ್ತು ಕಾಶ್ಮೀರ ದೇಶದಲ್ಲಿ ಶೇ 70 ರಷ್ಟನ್ನು ಸೇಬನ್ನು ಉತ್ಪಾದನೆ ಮಾಡುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಮರು, ಕಾಂಗ್ರೆಸ್ ಬಗ್ಗೆ ದ್ವೇಷ ಭಾಷಣ: ಮೋದಿ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

ಮುಸ್ಲಿಮರು ಮತ್ತು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ದ್ವೇಷ...

ಮೋದಿ ಟೀಕೆ | ‘ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಚರ್ಚಿಸೋಣ ಬನ್ನಿ’; ಮೋದಿ ಭೇಟಿಗೆ ಸಮಯ ಕೇಳಿದ ಖರ್ಗೆ

ಕಾಂಗ್ರೆಸ್‌ ಒಳನುಸುಳುಕೋರರಿಗೆ ದೇಶದ ಸಂಪತ್ತನ್ನು ಹಂಚಬಹುದು ಎಂದು ಪ್ರಧಾನಿ ಮೋದಿ ಹೇಳಿಕೆ...

ಈ ದಿನ ಸಮೀಕ್ಷೆ | ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ?

18-25 ವರ್ಷದೊಳಗಿನವರು ಶೇ.42.86ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ...

‘ಸಂವಿಧಾನವನ್ನು ಬಲವಂತವಾಗಿ ಹೇರಲಾಗಿದೆ’; ಗೋವಾ ಕಾಂಗ್ರೆಸ್‌ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

1961ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸಿದ ನಂತರ, ರಾಜ್ಯದ ಮೇಲೆ ಭಾರತೀಯ...