ಭಾರತ – ವೆಸ್ಟ್‌ ಇಂಡೀಸ್‌ 2ನೇ ಟಿ20: ಸೇಡಿಗೆ ಕಾದಿರುವ ಹಾರ್ದಿಕ್‌ ಪಡೆಗೆ ಮಳೆಯ ಆತಂಕ

Date:

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಎರಡನೇ ಟಿ20 ಪಂದ್ಯ ಗಯಾನಾದಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೊದಲ ಪಂದ್ಯ ಸೋತಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಪಡೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ನಾಲ್ಕು ರನ್‌ಗಳ ರೋಚಕ ಜಯದ ನಂತರ ವಿಂಡೀಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬ್ಯಾಟಿಂಗ್​ನಲ್ಲಿ ತೀವ್ರ ವೈಫಲ್ಯ ಕಂಡಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಸರಣಿಯ ಮೇಲೆ ಹಿಡಿತ ಸಾಧಿಸಲು ಕಾತರಿಸುತ್ತಿದೆ. ಅನುಭವಿ ಅಟಗಾರರಿಲ್ಲದ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದು, ಇಂದು ಅಬ್ಬರಿಸುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾಗುತ್ತಿರುವ ಶುಭಮನ್‌​ ಗಿಲ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್‌ ಈ ಪಂದ್ಯದಲ್ಲಿ ಅಬ್ಬರಿಸುತ್ತಾರಾ ಎಂಬುದನ್ನು ಕಾದುನೋಡಬೇಕು. ಸಂಜು ಸ್ಯಾಮ್ಸನ್ ಕೂಡ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ.

ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದರು. ಆದರೆ ಲಯ ಕಂಡುಕೊಳ್ಳದ ಅಕ್ಷರ್ ಪಟೇಲ್​ ಅವರನ್ನು ಕೈಬಿಟ್ಟರು ಅಚ್ಚರಿ ಇಲ್ಲ. ವೇಗಿಗಳಾಗಿ ಕಣಕ್ಕಿಳಿದಿದ್ದ ಅರ್ಶ್​ದೀಪ್ ಸಿಂಗ್, ಮುಕೇಶ್ ಕುಮಾರ್ ಜೊತೆಗೆ ಉಮ್ರಾನ್ ಮಲಿಕ್-ಆವೇಶ್ ಖಾನ್ ಇಬ್ಬರಲ್ಲಿ ಮತ್ತೊಬ್ಬ ವೇಗಿ ಅವಕಾಶ ಪಡೆಯುತ್ತಾರೆ ಎನ್ನುತ್ತದೆ ವರದಿಗಳು.

ಈ ಸುದ್ದಿ ಓದಿದ್ದೀರಾ? ಟಿ20: ಭಾರತದ ವಿರುದ್ಧ ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

ಇನ್ನು ವೆಸ್ಟ್‌ ಇಂಡೀಸ್‌ ತಂಡದಲ್ಲಿ ನಾಯಕ ರೋವ್​ಮನ್ ಪೊವೆಲ್, ಬ್ರೆಂಡನ್ ಕಿಂಗ್ ಮತ್ತು ನಿಕೋಲಸ್ ಪೂರನ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಇವರ ಜೊತೆಗೆ ಜಾನ್ಸ್​ ಚಾರ್ಲೆಸ್, ಶಿಮ್ರಾನ್ ಹೆಟ್ಮೆಯರ್​ ಬ್ಯಾಟಿಂಗ್‌ನಲ್ಲಿ ಸ್ಪೋಟಿಸುವ ಸಾಧ್ಯತೆಯಿದೆ. ಒಬೆಡ್ ಮೆಕಾಯ್, ರೊಮಾರಿಯೋ ಶೆಫಾರ್ಡ್​, ಜೇಸನ್ ಹೋಲ್ಡರ್ ಉತ್ತಮ ಬೌಲಿಂಗ್​ ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಗೆದ್ದಿರುವ ಕಾರಣ ತಂಡದ ಬದಲಾವಣೆ ಸಾಧ್ಯತೆ ಕಡಿಮೆಯಿದೆ.

ಮಳೆ ಬರುವ ನಿರೀಕ್ಷೆ

ಗಯಾನದಲ್ಲಿ ನಡೆಯುವ ಎರಡನೇ ಟಿ20 ಪಂದ್ಯಕ್ಕೆ ಮಳೆಯ ಆತಂಕವಿದೆ. ಹವಾಮಾನ ವರದಿಗಳ ಪ್ರಕಾರ ಶೇ. 30 ರಿಂದ 40 ರಷ್ಟು ಮಳೆ ಬರುವ ಸಾಧ್ಯತೆಯಿದೆ. ವರುಣ ಆಗಮಿಸಿದರೆ ಪಂದ್ಯಕ್ಕೆ ಸ್ವಲ್ಪ ವಿಳಂಬ ಉಂಟುಮಾಡಬಹುದು. ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪಿಚ್‌ ಅನುಕೂಲವಾಗಬಹುದು.

ಪಂದ್ಯವಾಡುವ ಉಭಯ ತಂಡಗಳ ಸಂಭಾವ್ಯ ಬಳಗ

ಭಾರತ:

ಶುಭಮನ್‌ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್(ಉಪ ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.

ವೆಸ್ಟ್‌ ಇಂಡೀಸ್‌:

ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫಾರ್ಡ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್.

ಪಂದ್ಯ ಆರಂಭ: ಸಂಜೆ 8ಕ್ಕೆ

ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್‌, ಫ್ಯಾನ್‌ಕೋಡ್‌ ಆ್ಯಪ್‌

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...