ಪಶ್ಚಿಮ ಆಫ್ರಿಕಾದಲ್ಲಿ ಹಣದುಬ್ಬರ; ಸಾಮಾನ್ಯರ ಜೋಲೋಫ್‌ ಅನ್ನ ಈಗ ದುಬಾರಿ ಅಡುಗೆ

Date:

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಅನ್ನದ ಜೊತೆಗೆ ಮಾಂಸ ಸೇರಿಸಿ ಮಾಡುವ ಜೋಲೋಫ್ ಈಗ ದುಬಾರಿಯಾಗಿದೆ. ಕಾಡುತ್ತಿರುವ ಹಣದುಬ್ಬರ ಇಲ್ಲಿನ ಜನರ ನೆಮ್ಮದಿಯ ಊಟವನ್ನೂ ಕಸಿದಿದೆ.

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಇದರಿಂದ ಸಾಮಾನ್ಯರ ಬದುಕೂ ಮೂರಾಬಟ್ಟೆಯಾಗಿದೆ. ಸಾಮಾನ್ಯ ಆಹಾರಕ್ಕೂ ಖಂಡದ ದೇಶಗಳ ಜನತೆ ಚಿನ್ನದ ಬೆಲೆ ತೆರುವಂತಾಗಿದೆ. ಬಡ, ಮಧ್ಯಮ ವರ್ಗದ ಜನತೆಗೆ ಅಗ್ಗದ ಬೆಲೆಯಲ್ಲಿ ದೊರೆಯುತ್ತಿದ್ದ ಮಾಂಸ ಖಾದ್ಯಗಳು ಈಗ ದುಬಾರಿಯೆನಿಸಿದೆ. ಜನರು ಸಂಕಷ್ಟದಿಂದ ದಿನ ದೂಡುವಂತಾಗಿದೆ.

ಖಂಡದ ಘಾನಾ ದೇಶದ ಅಕ್ರಾ ನಗರದಲ್ಲಿ ವಾಸಿಸುತ್ತಿರುವ ನಶಿರತಾ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ. ಕುಟುಂಬಕ್ಕೆ ಈಕೆಯೇ ಜೀವನಾಧಾರ. ಅಕ್ರಾದಲ್ಲಿ ಕೆಲಸಗಳು ದೊರೆಯುವುದು ವಿರಳ. ಇಂತಹ ಸ್ಥಿತಿಯಲ್ಲಿ ನಶಿರತಾ ತನ್ನ ಉನ್ನತ ಪದವಿ ಅರ್ಹತೆಯಿಂದ ಕೆಲಸ ಪಡೆದು ಜೀವನ ನಿರ್ವಹಿಸುತ್ತಾರೆ. ಹಾಗಿದ್ದರೂ, ಕುಟುಂಬದ ಪ್ರಿಯವಾದ ಖಾದ್ಯ ಜೋಲೋಫ್‌ ಅನ್ನು ಬರಡಾಗಿ ಉಣ್ಣಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಶ್ಚಿಮ ಆಫ್ರಿಕಾದ ಪ್ರಧಾನ ಖಾದ್ಯ ಜೋಲೋಫ್‌ ಅನ್ನ. ಜೋಲೋಫ್‌ ಎಂದರೆ ಅನ್ನದ ಜೊತೆಗೆ ಮಾಂಸ ಅಥವಾ ಮೀನು ಹೊಂದಿದ ಬಿರಿಯಾನಿ ರೂಪದ ಖಾದ್ಯ. ಜೋಲೋಫ್‌ ಅನ್ನದ ಖಾದ್ಯ ನಶಿರತಾ ಕುಟುಂಬದ ಆಧಾರವಾಗಿತ್ತು. ಏಕೆಂದರೆ ಖಂಡದಲ್ಲಿ ಅಕ್ಕಿ ಮತ್ತು ಮಾಂಸ ಅಗ್ಗದ ದರದಲ್ಲಿ ದೊರೆಯುತ್ತಿತ್ತು. ಆದರೆ ಈಗ ನಶಿರತಾ ಅವರು ಜೋಲೋಫ್ ಅನ್ನವನ್ನು ಮಾತ್ರ ಬಡಿಸಿ ಕುಟುಂಬ ಪೊರೆಯುತ್ತಿದ್ದಾರೆ. ಅನ್ನದ ಜೊತೆಗೆ ಮಾಂಸ ಸೇರಿಸುವುದು ಈಗ ಖಂಡದಲ್ಲಿ ದುಬಾರಿಯಾಗಿದೆ. ಖಂಡದಲ್ಲಿ ಕಾಡುತ್ತಿರುವ ಹಣದುಬ್ಬರ ಇಲ್ಲಿನ ಜನರ ನೆಮ್ಮದಿಯ ಊಟವನ್ನೂ ಕಸಿದಿದೆ.

ಜೋಲೋಫ್‌ ಖಾದ್ಯ ತಯಾರಿಸುವಾಗ ಅನ್ನದ ಜೊತೆಗೆ ಟೊಮೆಟೊ, ಮಸಾಲೆ, ಮೀನು/ ಮಾಂಸದ ಅಡುಗೆ ಸಿದ್ಧವಾಗುತ್ತದೆ. ಒಂದು ಕಾಲದಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಇದು ಅಗ್ಗದ ದರದಲ್ಲಿ ಸಾಮಾನ್ಯರಿಗೆ ದೊರೆಯುತ್ತಿದ್ದ ಮೃಷ್ಟಾನ್ನವಾಗಿತ್ತು.

ಆದರೆ ಈಗ ಹಣದುಬ್ಬರ ಬಡ ಹಾಗೂ ಮಧ್ಯಮ ವರ್ಗದವರನ್ನು ಬಾಣಲೆಯಿಂದ ಬೆಂಕಿಗೆ ಹಾಕಿದೆ. ಮೇ ತಿಂಗಳಿಗೂ ಮುನ್ನ ಜೋಲೋಫ್‌ ಖಾದ್ಯವು 7.40 ಅಮೆರಿಕನ್‌ ಡಾಲರ್‌ ಆಗಿದೆ. ಇದು ದೇಶದಲ್ಲಿ ಈ ಹಿಂದೆ ದೊರೆಯುತ್ತಿದ್ದ ಬೆಲೆಗಿಂತ ಎರಡುಪಟ್ಟು ಹೆಚ್ಚಾಗಿದೆ.

ಪಶ್ಚಿಮ ಆಫ್ರಿಕಾ ಹಣದುಬ್ಬರದ ಪರಿಣಾಮ ಬೆಲೆ ಏರಿಕೆಯಿಂದ ಈಗ ನಶಿರತಾ ಮತ್ತು ಅವರಂತಹ ಇತರ ವೃತ್ತಿಪರ ಮಹಿಳೆಯರು ಕೇವಲ ಅಕ್ಕಿಯನ್ನು ಮಾತ್ರ ಬೇಯಿಸುತ್ತಾರೆ. ಈಗಿನ ದರದಲ್ಲಿ ಮಾಂಸ ಹಾಗೂ ಇತರ ವಸ್ತುಗಳ ಬೆಲೆ ಗಗನಮುಖಿಯಾಗಿದೆ.

“ನಾನು ಎಣಿಸಿದ್ದಕ್ಕಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ. ಜೋಲೋಫ್‌ ಖಾದ್ಯ ತಯಾರಿಗೆ ಇತರ ಪದಾರ್ಥಗಳನ್ನು ಕೊಳ್ಳಲು ಆಗುತ್ತಿಲ್ಲ. ಕೇವಲ ಅನ್ನವನ್ನು ಮಾತ್ರ ಉಣ್ಣುವಂತಾಗಿದೆ” ಎಂದು ತಿಳಿಸಿದ್ದಾರೆ ಎಂದು ‘ಅಲ್‌ ಜಜೀರಾ’ ಸುದ್ದಿವಾಹಿನಿ ವರದಿ ಮಾಡಿದೆ.

ಪಶ್ಚಿಮ ಆಫ್ರಿಕಾ ಖಂಡದ ನೈಜೀರಿಯಾ ದೇಶದ ವಾಣಿಜ್ಯ ರಾಜಧಾನಿ ಲಾಗೋಸ್‌ನಲ್ಲಿ ಕಳೆದ ವರ್ಷ 86.80 ಅಮೆರಿಕ ಡಾಲರ್‌ ಇದ್ದ ದಿನಸಿ ಪದಾರ್ಥಗಳ ಬೆಲೆ ಈಗ 173.61 ಅಮೆರಿಕ ಡಾಲರ್‌ ಆಗಿದೆ. ಇದು ಸಾಮಾನ್ಯ ಜನರ ನಿತ್ಯದ ಬದುಕನ್ನು ಬಿಗಡಾಯಿಸುವಂತೆ ಮಾಡಿದೆ.

2020ರಿಂದ ಪಶ್ಚಿಮ ಆಫ್ರಿಕಾದ ದೇಶಗಳ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಪರಿಣಾಮವಾಗಿ ಬಡ, ಮಧ್ಯಮ ವರ್ಗದ ಹೊಟ್ಟೆ ತುಂಬಿಸುತ್ತಿದ್ದ ಆಹಾರ ಪದಾರ್ಥಗಳು ಈಗ ಕೈಗೆಟುಕದಂತಾಗಿವೆ.

ಈ ಸುದ್ದಿ ಓದಿದ್ದೀರಾ? ಚಂಡೀಗಢಕ್ಕೆ ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ | ಚಾಲಕರೊಡನೆ ಮಾತುಕತೆ

ಮಾರ್ಚ್‌ನಲ್ಲಿ ಆಹಾರ ಹಣದುಬ್ಬರ ಶೇಕಡಾ 50.8 ರಷ್ಟಿತ್ತು. ನೈಜೀರಿಯಾ ಮತ್ತು ಸೆನೆಗಲ್‌ನಲ್ಲಿ ಕ್ರಮವಾಗಿ ದರಗಳು ಶೇ. 24.61 ಮತ್ತು ಶೇ 11.90 ಕಡಿಮೆಯಾಗಿದೆ ಎಂದು ಘಾನಾ ಅಂಕಿ ಅಂಶಗಳ ಸೇವಾ ಸಂಸ್ಥೆ ಹೇಳಿದೆ.

ಬಿಕ್ಕಟ್ಟಿನ ಪರಿಣಾಮ ಬುರ್ಕಿನಾ ಫಾಸೊ ದೇಶದಲ್ಲಿ ಈ ವರ್ಷ ಆಹಾರದ ಬೆಲೆಗಳು ಶೇ 30ರಷ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ರಕ್ಷಣಾ ಸಮಿತಿ ಹೇಳಿದೆ. ಹಣದುಬ್ಬರದ ಪರಿಣಾಮ ಮಾಲಿ ದೇಶದಲ್ಲಿ ಜೂನ್ ಮತ್ತು ಆಗಸ್ಟ್ ನಡುವೆ ತೀವ್ರ ಆಹಾರ ಅಭದ್ರತೆ ಶೇ 30ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆನಡಾ: ಭಾರತೀಯ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾರಿನಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆ ಕೆನಡಾ ದ...

17 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್‌ ಮೂಲದ ಸರಕು ಹಡಗು ವಶಪಡಿಸಿಕೊಂಡ ಇರಾನ್

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು...

ಇಸ್ರೇಲ್ ಕಡೆಗೆ ಹಲವು ಡ್ರೋನ್‌ಗಳನ್ನು ಹಾರಿಸಿದ ಇರಾನ್: ಯುದ್ಧದ ಭೀತಿ

ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿಯ ಮೇಲೆ ಕಳೆದ ವಾರ ಇಸ್ರೇಲ್ ದಾಳಿ...

ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ...