ಮಾರುಕಟ್ಟೆಗೆ ಲಗ್ಗೆ ಇಟ್ಟ ಐಫೋನ್ 15; ಕೊಳ್ಳಲು ಸರತಿ ಸಾಲಿನಲ್ಲಿ ನಿಂತ ಜನ

Date:

₹79,900 ಮತ್ತು ₹89,900 ರಿಂದ ಆರಂಭವಾಗುವ ಆ್ಯಪಲ್‌ ಇಂಕ್‌ನ ಐಫೋನ್ 15 ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಜನರಿಗೆ ಈ ಮೊಬೈಲ್ ಲಭ್ಯವಾಗಲಿದೆ. ಈ ಹಿನ್ನೆಲೆ, ಮುಂಬೈನಲ್ಲಿರುವ ಆ್ಯಪಲ್ ಸ್ಟೋರ್‌ ಎದುರು ಹೊಸ ಫೋನ್ ಖರೀದಿ ಮಾಡಲು ಬೆಳ್ಳಂಬೆಳಗ್ಗೆ ಜನ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಕಂಡುಬಂದಿತು.

ಸೆ.12 ರಂದು ಕ್ಯಾಲಿಫೋರ್ನಿಯಾದಲ್ಲಿರುವ ಬಿಲ್ ಗೇಟ್ಸ್‌ ಸಭಾಂಗಣದಲ್ಲಿ ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಕಂಪನಿ ಮುಖ್ಯಸ್ಥ ಟಿಮ್ ಕುಕ್ ಬಿಡುಗಡೆ ಮಾಡಿದ್ದರು.

ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್ ಈ ನೂತನ ಸರಣಿಯ ಮೊಬೈಲ್ ಫೋನ್‌ಗಳು ಅತ್ಯಾಧುನಿಕ ವೈಶಿಷ್ಟ ಹೊಂದಿವೆ. ‘ಮೇಕ್ ಇನ್ ಇಂಡಿಯಾ’ ಐಫೋನ್ 15 ಜಾಗತಿಕ ಮಾರಾಟ ದಿನವಾದ ಸೆ.22 ರಂದು ಮಾರುಕಟ್ಟೆಗೆ ಲಭ್ಯವಾಗಲಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಮೊಬೈಲ್‌ಗಳು ಗುಲಾಬಿ, ಹಳದಿ, ಹಸಿರು, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಈ ಮೊಬೈಲ್ 6.1 ಇಂಚು ಮತ್ತು 6.7 ಇಂಚು ಡಿಸ್‌ಪ್ಲೇ ಹೊಂದಿದೆ. ಜತೆಗೆ 128GB, 256GB, ಹಾಗೂ 512GB ಸ್ಟೋರೇಜ್ ಸಾಮರ್ಥ್ಯ ಇದೆ. ಈ ಮೊಬೈಲ್‌ಗಳ ಬೆಲೆ ಅನುಕ್ರಮವಾಗಿ ₹79,900 ಮತ್ತು ₹89,900ರಿಂದ ಆರಂಭವಾಗಲಿದೆ.

ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್ ಕಪ್ಪು, ಬಿಳಿ, ನೀಲಿ ಮತ್ತು ನ್ಯಾಚುರಲ್ ಟೈಟಾನಿಯಂ ಫಿನಿಶ್ ಬಣ್ಣದಲ್ಲಿ ಸಿಗಲಿದೆ. ಇದರ ಡಿಸ್‌ ಪ್ಲೇ ಗಾತ್ರ 6.1 ಇಂಚು ಮತ್ತು 6.7 ಇಂಚಿನ ಗಾತ್ರದಲ್ಲಿ ಇರಲಿದೆ.

ಐಫೋನ್ 15 ಪ್ರೊ ಬೆಲೆ ₹1,34,900 ರಿಂದ ಆರಂಭವಾಗಲಿದೆ. 128GB, 256GB, 512GB, ಮತ್ತು 1ಟಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಐಫೋನ್ 15 ಪ್ರೋ ಮ್ಯಾಕ್ಸ್‌ ₹1,59,900 ರಿಂದ ಆರಂಭವಾಗಲಿದೆ. ಇದು 256GB, 512GB, ಮತ್ತು 1ಟಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಈ ಸುದ್ದಿ ಓದಿದ್ದೀರಾ? ಓಲಾ, ರ್‍ಯಾಪಿಡೋಗಳಿಂದ ಬೈಕ್ ಟ್ಯಾಕ್ಸಿ : ಆಟೋ ಚಾಲಕರಿಗೆ ಎದುರಾದ ಮತ್ತೊಂದು ಸಂಕಷ್ಟ

ಸೆ.15 ರಿಂದ ಮುಂಗಡವಾಗಿ ಮೊಬೈಲ್ ಕಾಯ್ದಿರಿಸಲು ಅವಕಾಶ ನೀಡಲಾಗಿತ್ತು. ಭಾರತವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಗ್ರಾಹಕರು ಮುಂಗಡವಾಗಿ ಮೊಬೈಲ್ ಕಾಯ್ದಿರಿಸಬಹುದಿತ್ತು.

ಇನ್ನು ಸರತಿ ಸಾಲಿನಲ್ಲಿ ನಿಂತ ಹಲವು ಜನ ಮೊಬೈಲ್ ಕೊಳ್ಳಲು ಉತ್ಸುಕನಾಗಿದ್ದೇನೆ. ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...