ʼನ್ಯಾನೋ ಚಿಪ್‌ʼ ವದಂತಿ ಹಬ್ಬಿಸಿದ್ದ ʼಆಜ್‌ ತಕ್‌ʼ ನಿರೂಪಕಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಪಾಠ

Date:

2 ಸಾವಿರ ಮುಖಬೆಲೆಯ ನೋಟಿನಲ್ಲಿ ಚಿಪ್‌ ಇದೆ ಎಂದಿದ್ದ ಶ್ವೇತಾ ಸಿಂಗ್‌

ಪ್ರಶ್ನೆ ಕೇಳಿದ್ದಕ್ಕೆ ಕೇಸು ಹಾಕ್ತೀನಿ ಎಂದ ʼಆಜ್‌ ತಕ್‌ʼ ವಾಹಿನಿ ನಿರೂಪಕಿ

ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ರಿಸರ್ವ್‌ ಬ್ಯಾಂಕ್‌ನ ಈ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂಪಡೆಯುವುದೇ ಆಗಿದ್ದರೆ, ಈ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ತಂದಿದ್ದಾದರೂ ಯಾಕೆ ಎಂಬ ಚರ್ಚೆ ಶುರುವಾಗಿತ್ತು. ಜೊತೆಗೆ ಈ ಗುಲಾಬಿ ನೋಟುಗಳಲ್ಲಿ ʼನ್ಯಾನೋ ಚಿಪ್‌ʼ ಇದೆ ಎಂದು ಆರಂಭದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕೆಲ ಪತ್ರಕರ್ತರನ್ನು ಕೂಡ ಟ್ರೋಲ್‌ ಮಾಡಲಾಗಿತ್ತು. ಹೀಗೆ ವದಂತಿ ಹಬ್ಬಿಸಿದ್ದ ಪತ್ರಕರ್ತರ ಪೈಕಿ ʼಆಜ್‌ ತಾಕ್‌ʼ ಸುದ್ದಿ ವಾಹಿನಿಯ ನಿರೂಪಕಿ ಶ್ವೇತಾ ಸಿಂಗ್‌ ಕೂಡ ಒಬ್ಬರು. ಈಗ ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ಸುದ್ದಿಯ ಹೆಸರಲ್ಲಿ ಸುಳ್ಳು ಹರಡಿದ ನಿರೂಪಕಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪತ್ರಿಕೋದ್ಯಮದ ವಿದ್ಯಾರ್ಥಿಗಳು ಶ್ವೇತಾ ಸಿಂಗ್‌ ಅವರನ್ನು ಪ್ರಶ್ನಿಸಿರುವ ವಿಡಿಯೋವನ್ನು ʼಆಲ್ಟ್‌ ನ್ಯೂಸ್‌ʼ ಸಂಸ್ಥಾಪಕ ಮೊಹಮ್ಮದ್‌ ಜುಬೇರ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷಗಳ ವಿಡಿಯೋದಲ್ಲಿ ಯುವಕನೊಬ್ಬ “2 ಸಾವಿರದ ನೋಟಿನಲ್ಲಿ ಚಿಪ್‌ ಇದೆ ಎಂದು ಹೇಳಿದ್ದು ನೀವೇ ಅಲ್ಲವೇ” ಎಂದು ಪ್ರಶ್ನಿಸಿದ್ದಾನೆ. ಆತನ ಪ್ರಶ್ನೆಗೆ ಉತ್ತರಿಸಿರುವ ಶ್ವೇತಾ ಸಿಂಗ್‌, “ನಾನು ಹಾಗೆ ಹೇಳಿಯೇ ಇಲ್ಲ. ಮನಸ್ಸು ಮಾಡಿದರೆ ನಿಮ್ಮ ಮೇಲೆ ಕೇಸು ಹಾಕಬಲ್ಲೆ. ನೀವು 45 ಸೆಕಂಡ್‌ಗಳ ತಿರುಚಿದ ವಿಡಿಯೋವನ್ನು ನೋಡಿದ್ದೀರಿ. ಆದರೆ, ನಾನು 45 ನಿಮಿಷಗಳ ವಿಡಿಯೋದಲ್ಲಿ ವಿವರವಾಗಿ ಮಾತನಾಡಿದ್ದೀನಿ. ಇದು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಎಂದು ಉಲ್ಲೇಖಿಸಿದ್ದೀನಿ” ಎಂದಿದ್ದಾರೆ.

ಕೇಸು ದಾಖಲಿಸುತ್ತೇನೆ ಎಂದು ಶ್ವೇತಾ ಸಿಂಗ್‌ ಧಮ್ಕಿ ಹಾಕಿದರೂ ಯುವಕ ಹಿಂಜರಿದಿಲ್ಲ. “140 ಕೋಟಿ ಜನತೆಯ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ನಿಮಗೆ ಸುಳ್ಳು ಹೇಳಲು ಮನಸ್ಸಾದರೂ ಹೇಗೆ ಬಂತು? ನೋಟಿನಲ್ಲಿ ಚಿಪ್‌ ಇದೆ. ನೋಟಿನ ಕಂತೆ ಭೂಮಿಯ ಕೇಳಗಿದ್ದರೂ ಗೊತ್ತಾಗುತ್ತೆ ಎಂದವರು ನೀವೇ. ನಮ್ಮಂಥ ಯುವಜನತೆ ನಿಮ್ಮನ್ನು ಮಾದರಿ ವ್ಯಕ್ತಿಗಳನ್ನಾಗಿ ಕಾಣಲು ಹೇಗೆ ಸಾಧ್ಯ?” ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ.

ಶ್ವೇತಾ ಸಿಂಗ್‌, ನಾನು ನೋಟಿನಲ್ಲಿ ಚಿಪ್‌ ಇದೆ ಎಂದು ಹೇಳಿಯೇ ಇಲ್ಲ ಎಂದ ವಿಡಿಯೋ ವೈರಲ್‌ ಆಗುತ್ತಲೇ, ಆಕೆ 2 ಸಾವಿರ ಮುಖಬೆಲೆ ನೋಟಿನ ವಿಶೇಷತೆಯ ಬಗ್ಗೆ ಫುಂಕಾನು ಫುಂಕವಾಗಿ ಮಾತನಾಡಿದ ಹಳೆಯ ವಿಡಿಯೋವನ್ನು ಕೆದಕಿ, ನೆಟ್ಟಿಗರು ಸಾಕ್ಷಿ ಸಮೇತ ಪ್ರಶ್ನೆ ಮಾಡುತ್ತಿದ್ದಾರೆ.

ಗುಲಾಬಿ ನೋಟಿನ ವೈಶಿಷ್ಟ್ಯಗಳ ಬಗ್ಗೆ ವದಂತಿ ಹಬ್ಬಿಸಿದ್ದು ಶ್ವೇತಾ ಸಿಂಗ್‌ ಮಾತ್ರವಲ್ಲ, ʼಝೀ ನ್ಯೂಸ್‌ʼನ ಸುಧೀರ್‌ ಚೌಧರಿ, ಕನ್ನಡದ ಪಬ್ಲಿಕ್‌ ಟಿ.ವಿ ಮುಖ್ಯಸ್ಥ ಹೆಚ್‌. ಆರ್‌ ರಂಗನಾಥ್‌ ಮುಂತಾದವರು ನೋಟಿನಲ್ಲಿ ʼನ್ಯಾನೋ ಚಿಪ್‌ʼ ಇದೆ ಎಂದು ವದಂತಿ ಹಬ್ಬಿಸಿ ಕೊನೆಯಲ್ಲಿ ಟ್ರೋಲ್‌ ಪಡೆಗೆ ಆಹಾರವಾಗಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಬಾಂಡ್ | ನಮ್ಮ ತೀರ್ಪನ್ನು ಮೂರನೇಯವರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ: ಸುಪ್ರೀಂ ಕೋರ್ಟ್‌

ಚುನಾವಣಾ ಬಾಂಡ್‌ಗೆ ಕುರಿತಾದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಗೊಳಿಸುವಂತೆ ಎಸ್‌ಬಿಐಗೆ ಸುಪ್ರೀಂ...

ಚುನಾವಣಾ ಬಾಂಡ್ | ಕೇಂದ್ರದ ‘ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ’ ಎಂದ ಕಾಂಗ್ರೆಸ್

ಚುನಾವಣಾ ಬಾಂಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್,...

ಹಿಮಾಚಲ ಪ್ರದೇಶ | 6 ಶಾಸಕರ ಅನರ್ಹತೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಹಿಮಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ಸದನದ ನಿಯಮಗಳನ್ನು ಉಲ್ಲಂಘಿಸಿದ 6 ಶಾಸಕರನ್ನು...