ಕಲ್ಬುರ್ಗಿಯವರ ಹತ್ಯೆಗೆ ವಿಶ್ವೇಶ್ವರ ಭಟ್ ವರದಿ ಕಾರಣ: ಜಾಮದಾರ್‌

Date:

ಹಿರಿಯ ಸಂಶೋಧಕರಾದ ಎಂ.ಎಂ.ಕಲ್ಬುರ್ಗಿಯವರ ಕೊಲೆಗೆ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರ ವರದಿಯೇ ಕಾರಣ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಆರೋಪಿಸಿದ್ದಾರೆ.

’ಗಣೇಶ ಆಚರಣೆ ಶರಣ ಸಂಸ್ಕೃತಿಯಲ್ಲ’ ಎಂದಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕುರಿತು ವಿಶ್ವವಾಣಿ ಪತ್ರಿಕೆಯಲ್ಲಿ ಬಂದಿರುವ ನಿಂದನಾತ್ಮಕ ಬರಹಗಳ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

“ವಿಶ್ವೇಶ್ವರ ಭಟ್ಟ ಅವರು ಇದೇ ರೀತಿಯ ವರದಿಗಳನ್ನು ಮಾಡಿ ಡಾ.ಕಲ್ಬುರ್ಗಿಯವರ ಕೊಲೆಗೆ ಕಾರಣವಾಗಿದ್ದಾರೆ. ಆದ್ದರಿಂದ ಆ ಪ್ರಕರಣದಲ್ಲಿ (ಕಲ್ಬುರ್ಗಿಯವರ ಹತ್ಯೆಯಲ್ಲಿ) ವಿಶ್ವೇಶ್ವರ ಭಟ್ಟ ಅವರನ್ನು ಪ್ರಚೋದಕರೆಂದು ಪೋಲಿಸರು ಅವರ ವಿರುದ್ಧ ಕ್ರಮಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಶ್ವೇಶ್ವರ ಭಟ್ಟ ಅವರು ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಅವಧಿಯಲ್ಲಿ ಎಂ.ಎಂ.ಕಲ್ಬುರ್ಗಿಯವರ ಕುರಿತು ಅಪಪ್ರಚಾರ ಮಾಡಲಾಗಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿವೆ. “ಸಾಹಿತಿ ಯು.ಆರ್. ಅನಂತಮೂರ್ತಿಯವರು ಚಿಕ್ಕ ವಯಸ್ಸಿನಲ್ಲಿ ವಯೋ ಸಹಜ ಕುತೂಹಲದಿಂದ ಹಾಳಾಗಿದ್ದ ವಿಗ್ರಹವೊಂದರ ಮೇಲೆ ಉಚ್ಚೆ ಮಾಡಿದರೂ ನನಗೇನು ಆಗಲಿಲ್ಲ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ” ಎಂದು ಕಲ್ಬುರ್ಗಿಯವರು ಹೇಳಿದ್ದರು. ಆದರೆ ಅವರ ವಿರುದ್ಧ ದ್ವೇಷ ಬಿತ್ತುವ ಬರಹಗಳನ್ನು ಪ್ರಕಟಿಸಲಾಯಿತು. ಸಾಣೇಹಳ್ಳಿ ಸ್ವಾಮೀಜಿಯವರ ಕುರಿತೂ ಇಂತಹದ್ದೇ ದ್ವೇಷದ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲಿ ಲಿಂಗಾಯತ ಧರ್ಮಾನುಯಾಯಿಯಾದ ಜಾಮದಾರ್‌ ಪ್ರತಿಕ್ರಿಯಿಸಿದ್ದಾರೆ.

“ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಗಣಪತಿಯ ಪೂಜೆಯ ಬಗ್ಗೆ ಲಿಂಗಾಯತರನ್ನು ಕುರಿತು ಹೇಳಿದ ಮಾತನ್ನು ವಿಶ್ವೇಶ್ವರ ಭಟ್ಟ ಅವರು ಅತಿರಂಜಿತವಾಗಿ ಬಣ್ಣಿಸಿ ಅಸಭ್ಯ ಶಬ್ದಗಳಲ್ಲಿ ವಿರೋಧಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಅಷ್ಟೇ ಬಲವಾಗಿ ಖಂಡಿಸುತ್ತದೆ. ಬಸವ ಸ್ಥಾಪಿತ ಲಿಂಗಾಯತ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸಿರಿಗೆರೆ ಸ್ವಾಮೀಜಿಯವರ ನಿಲುವನ್ನೂ ವಿರೋಧಿಸಿರುವ ಅವರು,  “ಬಸವಣ್ಣನವರು ವೇದಗಳ ವಿರೋಧಿಯಾಗಿರಲಿಲ್ಲ ಎಂದು ಸಿರಿಗೆರೆ ಸ್ವಾಮೀಜಿಯವರು ಹೇಳಿರುವುದು ಬಾಲಿಷವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನೆರೆಹೊರೆಯ ಸನಾತನಿಗಳ ಪ್ರಭಾವದಿಂದ ಅನೇಕ ಲಿಂಗಾಯತರು ವಿಶೇಷವಾಗಿ ವೀರಶೈವರು ತಮ್ಮ ಮನೆಗಳಲ್ಲಿ ಗಣೇಶ ಹಬ್ಬದ ಆಚರಣೆ ಮಾಡುವದನ್ನು ಸ್ವಾಮಿಗಳು ಪ್ರಶ್ನಿಸಿದ್ದಾರೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದ್ದರಿಂದ ಸ್ವಾಮಿಗಳು ಆ ಬಗ್ಗೆ ಕ್ಷಮೆ ಕೇಳುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

“ಅದನ್ನೆ ನೆಪವಾಗಿಟ್ಟುಕೊಂಡು ಸಿರಿಗೆರೆ ಮಠದ ಹಿರಿಯ ಸ್ವಾಮಿಗಳು ಬಸವಣ್ಣನವರು ವೇದಗಳನ್ನು ತಿರಸ್ಕರಿಸಲಿಲ್ಲವೆಂದು ಹೇಳಿದ್ದು ಬಾಲಿಶ ಹೇಳಿಕೆ. ಅವರ ’ಬಿಸಿಲು ಬೆಳೆಂಗಳು’ನ ಒಂದು ಲೇಖನದಲ್ಲೂ ಹಾಗೆ ಬರೆದಿದ್ದು ಪ್ರಶ್ನಾರ್ಹ ಸಂಗತಿ. ಬಸವಣ್ಣನವರ ಅನೇಕ ವಚನಗಳಲ್ಲಿ ನೇರವಾಗಿಯೇ ವೇದಗಳನ್ನು ತಿರಸ್ಕರಿದ್ದಾರೆ ಮತ್ತು ಖಂಡಿಸಿದ್ದಾರೆ” ಎಂದು ಹೇಳಿದ್ದಾರೆ.

ಸಂಧರ್ಭಾನುಸಾರವಾಗಿ ನಾಲ್ಕಾರು ವಚನಗಳಲ್ಲಿ “ಶ್ರುತಿಗಳು ಸಾರುತಿದ್ದಾವೆ ನೋಡಾ” ಎಂದು ಶಿವನ ಶ್ರೇಷ್ಠತೆಯ ಬಗ್ಗೆ ಹೇಳಿದ್ದ ಮಾತ್ರಕ್ಕೆ ಅವರು ವೇದಗಳನ್ನು ಒಪ್ಪಿದ್ದಾರೆಂದು ಅರ್ಥೈಸುವುದು ಸರಿಯಲ್ಲ. ಅವರಷ್ಟೇ ಅಲ್ಲ ಅಲ್ಲಮರು, ಸಿದ್ದರಾಮರು, ಅಂಬಿಗರ ಚೌಡಯ್ಯನವರು ಇತರ ಅನೇಕ ಶರಣರೂ ವೇದಗಳನ್ನು ನೇರವಾಗಿಯೇ ತಿರಸ್ಕರಿಸಿದ್ದಾರೆ ಎಂದು ವಿವರಿಸಿದ್ದಾರೆ.

“ಅಷ್ಟಕ್ಕೂ ಈಗಿನ ತಂಟೆಗೂ ವೇದಕ್ಕೂ ಏನು ಸಂಬಂಧ ಗುರುಗಳೇ? ಸಾಣೆಹಳ್ಳಿ ಶ್ರೀಗಳೊಂದಿಗಿನ ನಿಮ್ಮ ಒಳಜಗಳ ಈಗಾಗಲೇ ಸಾರ್ವಜನಿಕರಿಗೆ ತಿಳಿದ ಸಂಗತಿ. ಆದ್ದರಿಂದ ನಿಮ್ಮ ಈಗಿನ ಹೇಳಿಕೆ ಕದಡಿದ ನೀರಲ್ಲಿ ಮೀನು ಹಿಡಿದಂತೆ ಭಾಸವಾಗುತ್ತದೆ” ಎಂದು ಟೀಕಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆ ನಡೆಯಲ್ಲ: ಪತ್ರಕರ್ತ ಜಿ ಪಿ ಬಸವರಾಜು ಕಳವಳ

2024ರ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಅಳಿವು ಉಳಿವಿನ ಚುನಾವಣೆ. ಈ ಬಾರಿಯ...

ಬೆಂಗಳೂರು | ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ

ರೈಲಿಗೆ ಸಿಲುಕಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು...

ಯಾವ ಟ್ಯಾಕ್ಸ್ಯೂ ಇಲ್ಲ; ಪಿತ್ರೋಡಾ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಡಿ ಕೆ ಶಿವಕುಮಾರ್

"ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್...

ಲೋಕಸಭಾ ಚುನಾವಣೆ | ಏ.26ರಂದು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ವ್ಯತ್ಯಯ ಸಾಧ್ಯತೆ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಈ...