ಕಂಬಳ ಎಂದರೆ ಮೇಲ್ವರ್ಗಕ್ಕೆ ಹಬ್ಬ – ಕೊರಗರಿಗೆ ವೇದನೆ

Date:

ತುಳುನಾಡಿನ ಜನಪದ ಕ್ರೀಡೆ, ಸಾಂಪ್ರದಾಯಿಕ ಕಂಬಳವನ್ನು ಬೆಂಗಳೂರು ಮಹಾನಗರಕ್ಕೆ ಪರಿಚಯಿಸುವ ಬಗ್ಗೆ ಭಿನ್ನ ಸ್ವರಗಳು ಕೇಳಿಬರುತ್ತಿವೆ. ತುಳುನಾಡಿನ ಸಂಪ್ರದಾಯಸ್ತ ಮನಸ್ಸುಗಳು ಬೆಂಗಳೂರು ಕಂಬಳದ ಬಗ್ಗೆ ಕೆಂಡಕಾರುತ್ತಿವೆ. ಕಂಬಳ ಸಮಿತಿಯವರ ಕಾರ್ಯ ವೈಖರಿಯನ್ನೂ ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲ, ಹಾಗೂ ಇತರ ಮಾದ್ಯಮಗಳಲ್ಲೂ ಚರ್ಚೆಗಳಾಗುತ್ತಿವೆ. ಕೆಲವರು ಕೊರಗರಿಗೂ ಕಂಬಳಕ್ಕೂ ನಂಟು ಬೆಸೆದು, ಇದರಲ್ಲಿ ಅವರನ್ನೂ ಸೇರಿಸಿಕೊಳ್ಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಆದರೆ, ಕಂಬಳ ಎನ್ನುವುದು ತುಳುನಾಡಿನ ಪ್ರತಿಷ್ಟಿತ ಗುತ್ತು, ಬರ್ಕೆಗಳು ತಮ್ಮ ಪ್ರತಿಷ್ಟೆಗಳನ್ನು ಮೆರೆಸಲು ಹುಟ್ಟು ಹಾಕಿರುವ ಒಂದು ಕ್ರೀಡೆ. ತಮ್ಮ ಕೃಷಿ ಕಾರ್ಯಗಳು ಮುಗಿದ ಬಳಿಕ ವಿರಾಮದ ವೇಳೆ ತಮ್ಮದೇ ಗದ್ದೆಗಳಲ್ಲಿ ಕೂಲಿಯಾಳುಗಳಿಂದ ಕೋಣಗಳನ್ನು ಓಡಿಸಿ ಮನರಂಜನೆ ಪಡೆಯುತ್ತಿದ್ದರು. ಕ್ರಮೇಣ ಅದಕ್ಕೆ ಕೆಲವೊಂದು ವಿಧಿ ವಿಧಾನಗಳನ್ನು ಜೋಡಿಸಿ ಸಂಪ್ರದಾಯಬದ್ಧಗೊಳಿಸಿರಬಹುದು. ಬಣ್ಣದ ಕತೆಕಟ್ಟಿ ಕೊರಗರಂತಹ ತಳಸ್ತರದ ಜನರನ್ನು ಇದಕ್ಕಾಗಿ ಬಳಸಿಕೊಂಡಿದ್ದಾರೆ. ಮುಂದೆ ಇದೇ ಸಂಪ್ರದಾಯ, ನಂಬಿಕೆಗಳಾಗಿರಬಹುದು. ವಾಸ್ತವವಾಗಿ ಈ ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಜಾತಿ ವರ್ಗೀಕರಣ, ತಾರತಮ್ಯ ನೀತಿಯನ್ನೇ ಪೋಷಿಸುತ್ತವೆ. ಕಂಬಳವೂ ಇದರಿಂದ ಹೊರತಾಗಿಲ್ಲ.!!

ಕಂಬಳದಲ್ಲಿ ಕೊರಗರ ಪಾತ್ರ ಏನು?!
ಕಂಬಳದ ಕೆಲವು ದಿನಗಳ ಹಿಂದೆಯೆ ಕೊರಗರು ದೋಲುವಾದನ ಮಾಡುತ್ತಾ ಕಂಬಳ ನಡೆಯುವ ಗ್ರಾಮವಿಡೀ ಸುತ್ತಿ (ಪ್ರತೀ ಮನೆ ಭೇಟಿ) ಅಧಿಕೃತವಾಗಿ ಕಂಬಳನ್ನು ತಿಳಿಸುವುದು ಸಂಪ್ರದಾಯ. ಅದಕ್ಕೆ ಅವರಿಗೆ ಪ್ರತಿ ಮನೆಯ ಪುಂಡಿ ಭತ್ತ, ಕೆಲವು ಕಡೆ ತೆಂಗಿನಕಾಯಿ, ಚಿಂದಿ ಬಟ್ಟೆ ಸಿಗುತ್ತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಂಬಳದ ಹಿಂದಿನ ದಿನ ರಾತ್ರಿ ‘ಪನಿ’ ಕುಲ್ಲುನು
ಇದೊಂದು ಅನಿಷ್ಟ ಆಚರಣೆ. ಯಾಕೆಂದರೆ ಈ ಪನಿ (ಹನಿಗೆ) ಕೂರುವ ಕಾರಣವೇ ಗದ್ದೆ ಕಾಯುವುದಾಗಿದೆ. ಅದಿರಲಿ.. ಆದರೆ ಅಲ್ಲಿ ಕೊರಗರು ಅನುಭವಿಸುವ ಯಾತನೆ ಯಾರಿಗೂ ತಿಳಿಯುವುದಿಲ್ಲ. ತಮ್ಮ ಬಲೆಪಿನ ಎಲ್ಲ ಗಂಡಸರು, ಹೆಂಗಸರು ಸೇರಿ (ಸಾಕಷ್ಟು ಜನ ಇಲ್ಲದಿದ್ದರೆ ಬೇರೆ ಬಲೆಪಿನಿಂದ ಜನ ಕರೆಸಿ) ಬಲೆಪು – ಹಾಡಿ ಹನಿಗೆ ಕೂರಲು ತೆರಳುತ್ತಾರೆ. ಸಂಜೆಯಿಂದ ಮರುದಿನ ಬೆಳಿಗ್ಗೆ ಮುಂಜಾವಿನವರೆಗೂ ಇವರು ದೋಲು ಬಾರಿಸುತ್ತಾ, ಕುಣಿಯುತ್ತಾ ಕಾಲ ಕಳೆಯುತ್ತಾರೆ.

ಆ ವೇಳೆ ಕೊರಗರ ಹಸಿವು ಬಾಯಾರಿಕೆಗಳ ಬಗ್ಗೆ ವಿಚಾರಿಸಲು ಯಾವೊಬ್ಬನೂ ಅತ್ತ ಸುಳಿಯುವುದಿಲ್ಲ. ಆದರೆ ಡೋಲಿನ ಸ್ವರ ಕೇಳದಿದ್ದರೆ ಪಕ್ಕನೆ ಎದ್ದು ಬಂದು ಗದರಿಸತ್ತಾರೆ. ಇಲ್ಲಿ ಕೊರಗರು ಸಮಯ ಕಳೆಯಲು ಕುಣಿಯುತ್ತಾರೆ, ಹಾಡುತ್ತಾರೆ, ಅರಚುತ್ತಾರೆ, ಕೆಲವೊಮ್ಮೆ ಅಶ್ಲೀಲವಾಗಿ ನಟಿಸುತ್ತಾರೆ. ಲೈಂಗಿಕ ಕ್ರಿಯೆ ನಡೆಸುವಂತೆಯೂ ನಟಿಸುತ್ತಾರೆ. ಇದು ಕೊರಗರ ಸಂಪ್ರದಾಯವಲ್ಲ.

ಇನ್ನು ಕೆಲವು ಕಂಬಳಗಳಲ್ಲಿ ಓಟದ ಕೋಣಗಳು ಓಡುವ ಮೊದಲು ಕೊರಗ ಯುವಕರನ್ನು ಓಡಿಸುವ ಕ್ರಮವಿದೆ. ಇದು ಮಾಲಿಕರು ಮುದ್ದನಿಂದ ಸಾಕಿದ ಕೋಣಗಳ ಓಟಕ್ಕೆ ಗದ್ದೆಯನ್ನು ಅಂತಿಮಾಗಿ ಪರೀಕ್ಷಿಸುವುದಾಗಿದೆ. ಗದ್ದೆಯಲ್ಲಿ ಏನಾದರೂ ಕಸಕಡ್ಡಿ, ಹೊಂಡಗಳೇನಾದರೂ ಇದ್ದರೆ ಕೋಣಗಳಿಗೆ ಅಪಾಯವಾಗಬಾರದು ಎಂಬುವುದೇ ಇದರ ಹಿಂದಿರುವ ತಂತ್ರಗಾರಿಕೆ. ಇನ್ನು ಕೆಲವು ಕಡೆ ಕೊರಗರು ಚುಣ್ಣ ವೇಷ ಹಾಕಿ ಕುಣಿಯಬೇಕು. ವೇಷದಾರಿಗೆ ಕೆಲವೊಂದು ಕಟ್ಟುಪಾಡುಗಳಿರುತ್ತವೆ. ಆತ ಅದನ್ನು ಮೀರಿದರೆ ಮುಂದಿನ ವರ್ಷದ ಕಂಬಳಕ್ಕೆ ಮೊದಲು ಆತ ಇಲ್ಲವೇ ಕಂಬಳ ನಡೆಸುವವರ ಮನೆಯಲ್ಲಿ ಯಾರಾದರೂ ಒಬ್ಬ ಸಾಯುತ್ತಾನೆ ಎಂಬ ನಂಬಿಕೆಯನ್ನು ತುಂಬಿಸಲಾಗಿದೆ.

ಕಂಬಳ ಗದ್ದೆಯಲ್ಲಿ ಕುಣಿಯುವ ಕೊರಗರು

ಒಟ್ಟರೆಯಾಗಿ ಈ ಸಾಂಪ್ರದಾಯಿಕ ಕಂಬಳವು ಕೊರಗರ ಪಾಲಿಗೆ ಒಂದು ಅನಿಷ್ಟವಾಗಿ ಬಿಡುತ್ತದೆ. ಇದು ಇತರ ಕೆಲವು ಜಾತಿ ಸಮುದಾಯಗಳವರಿಗೂ ಅನ್ವಯಿಸುತ್ತದೆ.ಆದರೆ ನಂಬಿಕೆಗಳು ಅವರು ಅದನ್ನು ಪ್ರಶ್ನೆ ಮಾಡದಂತೆ ತಡೆಯುತ್ತದೆ. ಇದು ಮೇಲ್ಜಾತಿಗಳಿಗೆ ಹಬ್ಬ, ತಳಸ್ತರದ ಜನರಿಗೆ ವೇದನೆ.

ಹಾಗಾಗಿ ಯಾರು ಏನೇ ಹೇಳಿದರೂ ಈ ಸಾಂಪ್ರದಾಯಿಕ ಕಂಬಳಕ್ಕಿಂತ ಕ್ರೀಡಾ ಕಂಬಳಗಳೇ ಲೇಸು. ಯಾಕೆಂದರೆ ಇಲ್ಲಿ ಯಾವುದೇ ಸಾಮಾಜಿ ಕಟ್ಟುಪಾಡುಗಳು , ಮಾನಸಿ ಹಿಂಸೆ ಇರುವುದಿಲ್ಲ. ಎಲ್ಲಾ ಜಾತಿ ಸಮುದಾಯಗಳನ್ನು ಸೇರಿಸಿಕೊಂಡು ಕಂಬಳ ಸಮಿತಿಯನ್ನು ಮಾಡಿ, ಎಲ್ಲಾ ವಿಭಾಗಗಳಲ್ಲೂ ಎಲ್ಲರಿಗೂ ಅವಕಾಶ ನೀಡಬೇಕು. ಜಾತಿ ಜಾತಿಗಳ ನಡುವೆ ಅಂತರ, ಅಸ್ಪೃಶ್ಯತೆಗಳಿಲ್ಲದೆ ಕ್ರೀಡಾ ಕಂಬಳಗಳಿಗೆ ಒತ್ತು ನೀಡುವುದು ಅಗತ್ಯವಾಗಿದೆ. ಹಿಂದಿನ ಕಂಬಳದ ಆಶಯವೇನೆ ಇರಲಿ, ಇಂದಿನ ಕಾಲಮಾನಕ್ಕೆ ತಕ್ಕಂತೆ ಇಂದು ಬದಲಾವಣೆಯಾಗಬೇಕು. ಹಿಂದೆ ಲಂಗೋಟಿಯಲ್ಲಿದ್ದವರು ಇಂದು ಪಂಚೆ, ಪ್ಯಾಂಟು ತೊಡುವುದಿಲ್ವೇ?

(ಅಭಿಪ್ರಾಯಗಳು ಲೇಖಕರವು. ಲೇಖಕರು ಕಂಬಳ ಗದ್ದೆಯಲ್ಲಿ ಓಡಿದ ಸ್ವ ಅನುಭವದೊಂದಿಗೆ ಈ ಬರಹ ಬರೆದಿದ್ದಾರೆ..)

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಹುಬ್ಬಳ್ಳಿ | ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ

ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿನಿಯೋರ್ವಳಿಗೆ ಯುವಕನೋರ್ವ ಮನಬಂದಂತೆ ಚಾಕುವಿನಿಂದ...

ದಾವಣಗೆರೆ | ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್‌; ಜಿಲ್ಲಾಧಿಕಾರಿಯಿಂದ ಸನ್ಮಾನ

ದ್ವಿತೀಯ ಪಿಯುಸಿ ವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್‌ಸಿ...