ಬೀದರ್‌ | ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ: ವಿಜಯರೆಡ್ಡಿ

Date:

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ. ಈ
ವಿಶೇಷವಾದ ಸ್ಥಾನ ಪಡೆಯಲು ಜಾನಪದ, ವಚನ ಮತ್ತು ದಾಸ ಸಾಹಿತ್ಯ ಪ್ರಮುಖವಾದ
ಪಾತ್ರವಹಿಸಿವೆ. ಇವುಗಳು ಕನ್ನಡ ವಾಙ್ಮಯ ರತ್ನತ್ರಯಗಳೆಂದು ಹೇಳಬಹುದು ಎಂದು
ನ್ಯಾಯವಾದಿ ವಿಜಯರೆಡ್ಡಿ ಹೇಳಿದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ವತಿಯಿಂದ  “ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಹರಿದಾಸರು ಮಾನವ ಬದುಕಿನಲ್ಲಿ ಆತ್ಮಬಲವನ್ನು ಹೆಚ್ಚಿಸಿ, ಸುಂದರ ಬದುಕು ಕಟ್ಟಿಕೊಳ್ಳಲು ಅರ್ಥಪೂರ್ಣವಾದ ಅಮೃತವಾಣಿಯನ್ನು ನೀಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ” ಎಂದರು.

ಉಪನ್ಯಾಸಕ ಬಸವರಾಜ ಬಿರಾದಾರ ʼಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆʼ ಕುರಿತು ಉಪನ್ಯಾಸ ನೀಡಿ, ಹರಿದಾಸರು ಷಟ್ಪದಿ, ಸಾಂಗತ್ಯ ಮತ್ತು ತ್ರೀಪದಿ ಪ್ರಕಾರಗಳಲ್ಲಿ ಕೀರ್ತನೆಗಳು, ಉಗಾಬೋಗಗಳು, ಸುಳಾದಿಗಳು, ಮುಂಡಿಗೆಗಳು, ವೃತನಾಮಗಳು, ದಂಡಕಗಳು, ಕೋಲಾಟಗಳು, ಅಲ್ಲದೇ ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಮೋಹನತರಂಗಿಣಿ, ನಲಚರಿತ್ರೆ, ಹರಿ ಕಥಾಮೃತಸಾರ, ಶ್ರೀರಾಮ ಕಥಾಮೃತಸಾರಗಳಂತಹ ಗದ್ಯ ಹಾಗೂ ಪದ್ಯ ಸಾಹಿತ್ಯದ ಮೂಲಕ ಅಗಾಧವಾದ ಕೊಡುಗೆಗಳು ನೀಡಿದ್ದಾರೆ. ಇವುಗಳು ಮಾನವೀಯ ಮೌಲ್ಯಗಳು ಬಿತ್ತಿ, ವೈಚಾರಿಕೆ ತಳಹದಿಯಲ್ಲಿ ಸಮೃದ್ಧ ಮತ್ತು ಸಮಸಮಾಜದ ಸಂದೇಶಗಳ ಹೊತ್ತಿಗೆಗಳಾಗಿವೆ” ಎಂದು ನುಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸರ್ವೋದಯ ಬಾಲಕಿಯರ ವಸತಿ ನಿಲಯ ಆಡಳಿತಾಧಿಕಾರಿ ಸಿದ್ದರಾಮಯ್ಯಾ ಸ್ವಾಮಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ” ಸ್ವತಃ ಜ್ಞಾನತೀರ್ಥದಲ್ಲಿ ಮಿಂದು ಮಡಿಯಾಗಿರುವ ಹರಿದಾಸರು ಸಮಾಜದಲ್ಲಿ ಅನುಭವಿಸಿದ ಸತ್ಯ-ಮಿಥ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಿ, ಬದುಕನ್ನು ಹಸನಾಗಿಕೊಂಡು ಉದ್ದಾರವಾಗಲು ಉಪದೇಶಗಳನ್ನು ನೀಡಿದ್ದಾರೆ” ಎಂದರು.

ಶಿಕ್ಷಕ, ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ, “ಜನರಿಗೆ ಉತ್ತಮ ಸಂಸ್ಕಾರ ನೀಡಿ, ಸುಸಂಸ್ಕೃತರಾಗಿ ಬಾಳುವಂತೆ ಮಾಡುವದೇ ಸಾಹಿತ್ಯದ ಉದ್ದೇಶ. ಇದರಲ್ಲಿ ದಾಸ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ಕಾಣುತ್ತೇವೆ” ಎಂದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಪ್ರಾಸ್ತಾವಿಕವಾಗಿ ಮಾತನಾಡಿ, “ಧರ್ಮ, ನೀತಿ, ಸಂಸಾರ, ವೇದಾಂತ, ಅರ್ಥನೀತಿ, ಜೀವನ
ಮೌಲ್ಯಗಳು ಮುಂತಾದವುಗಳು ಹಾಸುಹೊಕ್ಕಿರುವ ಹರಿದಾಸ ಸಾಹಿತ್ಯವು ನಿರಂತರ ಪ್ರಚಾರ
ಮಾಡಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಅಪರಾಧ ತಡೆಗೆ ಕಾನೂನು ಅರಿವು ಅಗತ್ಯ : ಎಸ್‌ಪಿ ಚನ್ನಬಸವಣ್ಣ

ಕಾರ್ಯಕ್ರಮದಲ್ಲಿ ಮಹೇಶ ಮೈಲೂರಕರ್ ಹಾಗೂ ರೋಹಿದಾಸ ಕಾಂಬಳೆ ಕೀರ್ತನೆ ಗಾಯನ ಮಾಡಿದರು.
ರಾಮಶೇವಂದನಾರ್ಪಣೆಟ್ಟಿ ಐನೊಳಿ ನಿರೂಪಿಸಿದರು, ಮಹೇಶ ಮೈಲೂರಕರ್ ಸ್ವಾಗತಿಸಿದರು, ಮಹೇಬೂಬ್ ಉಸ್ತಾದ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಮತದಾನ ಮಾಡಿ ಜವಾಬ್ದಾರಿಯುತ ನಾಗರಿಕರಾಗೋಣ: ತಾಹೇರ್ ಹುಸೇನ್

ನಮ್ಮ ದೇಶ ಚುನಾವಣೆಯ ಹೊಸ್ತಿಲಿನಲ್ಲಿದೆ. ಈ ಬಾರಿ ನಡೆಯುವಂತಹ ಚುನಾವಣೆಯು ಪ್ರಜಾಪ್ರಭುತ್ವ...

ಧಾರವಾಡ | ನೇಹಾ ಹಿರೇಮಠ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆಗೆ ಅಂಜುಮನ್ ಆಗ್ರಹ

ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ...

ವಿಜಯನಗರ | ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಅಕ್ರಮ ಮರಳು ದಂಧೆ ಆರೋಪ

ರಾಜ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ...

ಬಿಸಿಲ ಧಗೆಗೆ ಬೆಂದ ಜನರಿಗೆ ತಂಪೆರೆದ ಮಳೆ: ಶನಿವಾರ ಬೆಳಿಗ್ಗೆ ರಾಜ್ಯದ ಹಲವೆಡೆ ಮಳೆ

ತಾಪಮಾನ ಹೆಚ್ಚಳದಿಂದ ಬಸವಳಿದ್ದಿದ್ದ ರಾಜ್ಯದ ಜನತೆಗೆ ತಡವಾಗಿ ಆರಂಭವಾದ ಪೂರ್ವ ಮುಂಗಾರು...