ಕರ್ನಾಟಕ | ದ್ವೇಷ ಭಾಷಣ, ಕೋಮುಗಲಭೆ ಸೇರಿದಂತೆ 385 ಪ್ರಕರಣಗಳನ್ನು ವಾಪಸ್‌ ಪಡೆದ ಬಿಜೆಪಿ ಸರ್ಕಾರ

Date:

  • ಕರ್ನಾಟಕ ಗೃಹ ಇಲಾಖೆ ನೀಡಿದ ಆರ್‌ಟಿಐ ಮಾಹಿತಿಯಿಂದ ಬಹಿರಂಗ
  • ಶಾಸಕ, ಸಂಸದ ಮತ್ತು ಹಿಂದೂಪರ ಹೋರಾಟದ ಪ್ರಕರಣಗಳೇ ಹೆಚ್ಚು

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು 2019ರ ಜುಲೈನಿಂದ 2023ರ ಏಪ್ರಿಲ್ ವರೆಗೆ ರಾಜ್ಯದಲ್ಲಿ ನಡೆದಿರುವ 182 ದ್ವೇಷ ಭಾಷಣಗಳು, ದನಗಳ ಹೆಸರಿನ ಹಿಂಸಾಚಾರ ಮತ್ತು ಕೋಮು ಹಿಂಸಾಚಾರ ಸೇರಿದಂತೆ 385 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣ ಹಿಂಪಡೆದಿದ್ದ ಸಂಬಂಧ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಸಲ್ಲಿಸಿದ್ದ ಆರ್‌ಟಿಐಗೆ ರಾಜ್ಯ ಗೃಹ ಇಲಾಖೆ ಉತ್ತರಿಸಿದೆ. “2020ರ ಫೆಬ್ರವರಿ 11 ಮತ್ತು 2023 ಫೆಬ್ರವರಿ 28ರ ನಡುವೆ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತದಲ್ಲಿ ದಾಖಲಾಗಿದ್ದ 385 ಕೋಮು ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರವು 7 ಆದೇಶಗಳನ್ನು ಹೊರಡಿಸಿದೆ” ಎಂದು ಹೇಳಿದೆ.

“ರಾಜ್ಯ ಸರ್ಕಾರವು ಹಿಂಪಡೆದಿರುವ 1,000ಕ್ಕೂ ಹೆಚ್ಚಿನ ಪ್ರಕರಣಗಳು ಕೋಮು ಘಟನೆಗಳಿಗೆ ಸಂಬಂದಿಸಿದ್ದು, ಬಲಪಂಥೀಯ ಕಾರ್ಯಕರ್ತರು, ಬಿಜೆಪಿ ಶಾಸಕರ ವಿರುದ್ಧದ ಪ್ರಕರಣಗಳಾಗಿವೆ. ಇದರಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ದಾಖಲಾಗಿದ್ದ 182 ಪ್ರಕರಣಗಳು ಸೇರಿವೆ” ಎಂದು ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2013 ಮತ್ತು 2018ರ ನಡುವೆ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸುಮಾರು 1,600 ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ನಿಷೇಧಾಜ್ಞೆ ಉಲ್ಲಂಘನೆಗೆ ಸಂಬಂಧಿಸಿದ್ದ 176 ಪ್ರಕರಣಗಳನ್ನು ಕೈಬಿಡಲು ಆದೇಶಿಸಿತ್ತು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ, ಇಂದಿನ ಬಿಜೆಪಿ ಸರ್ಕಾರವು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿಸ 182 ಪ್ರಕರಣಗಳನ್ನು ಕೈಬಿಟ್ಟಿದೆ. ಇವುಗಳಲ್ಲಿ ಹಲವು ಪ್ರಕರಣಗಳು 2017ರ ಡಿಸೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂ ಯುವಕ ಪರೇಶ್ ಮೇಸ್ತಾ ಸಾವಿನ ನಂತರ ಬಲಪಂಥೀಯ ಕಾರ್ಯಕರ್ತರು ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

ಹೊನ್ನಾವರದಲ್ಲಿ ನಡೆದ ಮೇಸ್ತಾ ಸಾವಿನ ನಂತರ ಮುಸ್ಲಿಂ ಸಂಘಟನೆಗಳು ಮತ್ತು ಪೊಲೀಸರ ಮೇಲೆ ಗಲಭೆ ಮತ್ತು ದಾಳಿಗಳು ನಡೆದಿದ್ದು, 45 ಪ್ರಕರಣಗಳಲ್ಲಿ 300 ಜನರನ್ನು ಹೆಸರಿಸಲಾಗಿದೆ. ಒಂದು ಪ್ರಕರಣದಲ್ಲಿ 66 ಮಂದಿ ಕೊಲೆ ಯತ್ನದ ಆರೋಪ ಎದುರಿಸಿದ್ದರು.

2020ರ ಫಬ್ರವರಿ 11ರಂದು ಸರ್ಕಾರ ಹೊರಡಿಸಿದ್ದ ಮೊದಲ ಆದೇಶದಲ್ಲಿ ರೈತರ ಪ್ರತಿಭಟನೆಗಳ ಸಮಯದಲ್ಲಿ ದಾಖಲಾಗಿದ್ದ ಪ್ರಕರಣಗಳಿದ್ದವು. ಆದರೆ, ನಂತರದ ಇತರ ಆರು ಆದೇಶಗಳಲ್ಲಿ ಕನಿಷ್ಠ 50% ಪ್ರಕರಣಗಳು ಕೋಮು ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿವೆ ಎಂದು ಆರ್‌ಟಿಐನಿಂದ ಬಹಿರಂಗವಾಗಿದೆ.

2020ರ ಫೆಬ್ರವರಿ ಮತ್ತು ಆಗಸ್ಟ್‌ ನಡುವೆ ಹೊರಡಿಸಲಾದ ಕೆಲವು ಆದೇಶಗಳು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಂತಹ ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆದಿವೆ.

2020ರ ಆಗಸ್ಟ್ 31ರ ಆದೇಶ ಹೊರಬಂದ ಬಳಿಕ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ವಕೀಲರು ಪ್ರಾಸಿಕ್ಯೂಷನ್‌ನಿಂದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದರ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

2022ರ ಜುಲೈನಲ್ಲಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, “ನ್ಯಾಯಾಲಯದ (ಹೈಕೋರ್ಟ್‌) ಅನುಮತಿಯಿಲ್ಲದೆ ಹಾಲಿ ಅಥವಾ ಮಾಜಿ ಸಂಸದ/ಶಾಸಕರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಹಿಂಪಡೆಯುವಂತಿಲ್ಲ” ಎಂದು ಆದೇಶ ನೀಡಿತು.

ಒಟ್ಟಾರೆ, ಹಿಂತೆಗೆದುಕೊಳ್ಳಲಾದ ಪ್ರಕರಣಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಗೋರಕ್ಷಕರ ನಾಲ್ಕು ಘಟನೆಗಳು, ಟಿಪ್ಪು ಜಯಂತಿ ಆಚರಣೆಗೆ ಕೊಡಗು ಮತ್ತು ಮೈಸೂರಿನಲ್ಲಿ ನಡೆದ ಹಲವಾರು ಹಿಂಸಾಚಾರದ ಘಟನೆಗಳು, ರಾಮ ನವಮಿ, ಹನುಮ ಜಯಂತಿ ಮತ್ತು ಗಣೇಶ ಹಬ್ಬಗಳಂತಹ ಸಂದರ್ಭಗಳಲ್ಲಿ ನಡೆದ ಘಟನೆಗಳು, ಮತಾಂತರ, ಸರ್ವಧರ್ಮೀಯ ಪ್ರತಿಭಟನೆಗಳು ಸೇರಿವೆ.

ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ನಾಳೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ

ಪ್ರಕರಣಗಳ ಹಿಂಪಡೆಯುವಿಕೆಯ ಮತ್ತೊಂದು ಪ್ರಮುಖ ಫಲಾನುಭವಿ ಎಂದರೆ ಹಿಂದೂ ಜಾಗರಣ ವೇದಿಕೆಯ ಹಿರಿಯ ಮುಖಂಡ ಜಗದೀಶ್ ಕಾರಂತ್. ಅವರು ದಕ್ಷಿಣ ಕನ್ನಡ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರಿನಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿದ್ದರು. ಅವುಗಳನ್ನು ಅಕ್ಟೋಬರ್ 1, 2022 ರಂದು ಕೈಬಿಡಲಾಗಿದೆ.

“ನಾವು ಕಾನೂನು ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕುಳಿತು ಹಿಂಪಡೆಯಬೇಕಾದ ಪ್ರಕರಣಗಳನ್ನು ಕ್ಯಾಬಿನೆಟ್ ಉಪಸಮಿತಿಯಲ್ಲಿ ನಿರ್ಧರಿಸಿದ್ದೇವೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

“ನಾವು ಹಿಂಪಡೆದಿರುವ ಪ್ರಕರಣಗಳಲ್ಲಿ ಬಲಪಂಥೀಯ ಕಾರ್ಯಕರ್ತರಷ್ಟೇ ಅಲ್ಲ, ರೈತ ಪ್ರತಿಭಟನೆ, ಭಾಷೆ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಹಲವರ ವಿರುದ್ಧದ ಪ್ರಕರಣಗಳೂ ಸೇರಿವೆ. ಇವುಗಳು ಹೆಚ್ಚಾಗಿ 10 ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನ್ಯಾಯಾಲಯಗಳಲ್ಲಿ ಕೊಳೆಯುತ್ತಿರುವ ಪ್ರಕರಣಗಳಾಗಿವೆ” ಎಂದು ಮಾಹಿತಿ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಲೋಕಸಭಾ | ಮುಗಿದ ನಾಮಪತ್ರ ಭರಾಟೆ, ಶುರುವಾಗಿ ಮತಬೇಟೆ

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಮುಕ್ತಾಯವಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರದ...

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂ. ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು...

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...

ಮಹಾಪ್ರಭು ಬಟ್ಟೆಯೊಳಗಡೆಯೇ ಬೆವರುತ್ತಿದ್ದಾರೆ: ಪ್ರಕಾಶ್‌ ರಾಜ್

“ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ....