ಚುನಾವಣೆ 2023 | ಹಾಸನ ಜಿಲ್ಲೆಯಲ್ಲಿ 73 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Date:

  • ಉಮೇದುದಾರಿಕೆ ಹಿಂಪಡೆದ 13 ಅಭ್ಯರ್ಥಿಗಳು
  • ಕಣದಲ್ಲಿ 69 ಪುರುಷರು, 4 ಮಹಿಳಾ ಅಭ್ಯರ್ಥಿಗಳು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಏ. 24 ಕೊನೆಯದಿನವಾದ ಕಾರಣ ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಿಂದ 13 ಅಭ್ಯರ್ಥಿಗಳು ತಮ್ಮ ಉಮೇದುದಾರಿಕೆ ಹಿಂಪಡೆದಿದ್ದಾರೆ.

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಕಣದಲ್ಲಿ ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಿಂದ ಒಟ್ಟು 73 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅದರಲ್ಲಿ 69 ಮಂದಿ ಪುರುಷರು, ನಾಲ್ಕು ಮಹಿಳಾ ಅಭ್ಯರ್ಥಿಗಳು ಚುನಾವಣ ಕಣದಲ್ಲಿ ಸ್ಪರ್ಧಿಸಲಿದ್ದಾರೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು, ಏಳು ಅಭ್ಯರ್ಥಿಗಳು ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬೇಲೂರಿನಿಂದ 12 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯಲಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ 8, ಅರಕಲಗೂಡು ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಹಾಗೂ ಹಾಸನದಿಂದ 9 ಅಭ್ಯರ್ಥಿಗಳು ಸೇರಿದಂತೆ ಒಟ್ಟು 73 ಅಭ್ಯಥಿಗಳು ಚುನಾವಣಾ ಕಣದಲ್ಲಿರಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕ್ಷೇತ್ರವಾರು ಅಭ್ಯರ್ಥಿಗಳ ವಿವರ

  • ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂ ಜೆ ಗೌಡ, ಜೆಡಿಎಸ್ ಎಚ್ ಪಿ ಸ್ವರೂಪ್, ಕಾಂಗ್ರೆಸ್ ಬಿ ಕೆ ರಂಗಸ್ವಾಮಿ, ಎಎಪಿಯಿಂದ ಎ ಟಿ ಯೋಗೀಶ್, ಬಹುಜನ ಸಮಾಜ ಪಾರ್ಟಿಯ ಎಚ್ ಬಿ ಮಲ್ಲಯ್ಯ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ರಮೇಶ್ ವಿ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಬಿ ಎಂ ಸ್ವರೂಪ್, ಪಕ್ಷೇತರ ಅಭ್ಯರ್ಥಿಗಳಾಗಿ ಆರ್ ಜಿ ಸತೀಶ್, ಎಚ್ ವಿ ಸ್ವಾಮಿ ಸೇರಿ ಒಟ್ಟು ಒಂಭತ್ತು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
  • ಶ್ರವಣಬೆಳಗೊಳ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿ ಎನ್ ಬಾಲಕೃಷ್ಣ, ಕಾಂಗ್ರೆಸ್ ಎಂ ಎ ಗೋಪಾಲಸ್ವಾಮಿ, ಬಿಜೆಪಿ ಅರ್ಭ್ಯಥಿಯಾಗಿ ಸಿ ಆರ್ ಚಿದಾನಂದ, ಎಎಪಿಯಿಂದ ಬಿ ಎಸ್ ಮಂಜೇಗೌಡ, ಬಿಎಸ್‌ಪಿ ಆರ್ ರಾಜು, ಉತ್ತಮ
    ಪ್ರಜಾಕೀಯ ಪಕ್ಷದ ಟಿ ಕೆ ಕಿರಣ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೆ ಕೆ ಪವಿತ್ರ, ಪೂರ್ವಾಂಚಲ್ ಮಹಾ ಪಂಚಾಯತ್ ಪಕ್ಷದ ಎಚ್ ಡಿ ರೇವಣ್ಣ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಶಿವಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಪಿ ಎನ್ ನಟರಾಜ, ಎಚ್ ಎಂ ರವಿ, ಎಂ ಸುಬ್ರಹ್ಮಣ್ಯ ಸೇರಿ ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದಿದ್ದಾರೆ.
  • ಬೇಲೂರು: ಕ್ಷೇತ್ರದಲ್ಲಿ ಬಿಜೆಪಿಯಿಂದ ಎಚ್ ಕೆ ಸುರೇಶ್, ಕಾಂಗ್ರೆಸ್ ಬಿ.ಶಿವರಾಮ್, ಜೆಡಿಎಸ್ ಕೆ ಎಸ್ ಲಿಂಗೆಶ್, ಆಮ್ ಆದ್ಮಿ ಪಕ್ಷದ ಎಚ್ ಪಿ ಪರ್ವತೇಗೌಡ, ಬಹುಜನ ಸಮಾಜ ಪಾರ್ಟಿಯ ಡಿ ಎಸ್ ಗಂಗಧಾರ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಸಿ ಎನ್ ಆದೇಶ್, ಆರ್ ಪಿ ಐ ಕರ್ನಾಟಕ ಪಕ್ಷದ ಡಿ ಡಿ ಲೊಕೇಶ್ ಹಾಗು ಪಕ್ಷೇತರ ಅಭ್ಯರ್ಥಿಗಳಾಗಿ ದಿನೇಶ್, ಎನ್ ಎಂ ಪರಮೇಶ್, ಎಚ್ ಸಿ ಪ್ರದೀಪ್, ಮಲ್ಲಿಕಾರ್ಜುನ, ಮಹೇಶ್ ಸೇರಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಅರಸೀಕೆರೆ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ ವಿ ಟಿ ಬಸವರಾಜು, ಕಾಂಗ್ರೆಸ್‌ನಿಂದ ಕೆ ಎಂ ಶಿವಲಿಂಗೇಗೌಡ, ಜೆಡಿಎಸ್ ಎನ್ ಆರ್ ಸಂತೋಷ್, ಉತ್ತಮ ಪ್ರಜಾಕೀಯ ಪಕ್ಷದ ಎಸ್ ಕೆ ನವೀನ್, ಕರ್ನಾಟಕ ರಾಷ್ಟ್ರೀಯ ಸಮಿತಿ ಬಿ ಎಂ ಉಮೆಶ್, ಲೋಕಶಕ್ತಿ ಪಕ್ಷದ ಹೊಳೆಯಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಡಿ ಕಿಶೋರ್ ಕುಮಾರ್ ಸೇರಿ ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಹೊಳೆನರಸೀಪುರ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶ್ರೇಯಸ್ ಎಂ ಪಟೇಲ್, ಜೆಡಿಎಸ್ ಎಚ್‌ ಡಿ ರೇವಣ್ಣ, ಬಿಜೆಪಿ ಜಿ ದೇವರಾಜೇಗೌಡ, ಆಮ್ ಆದ್ಮಿ ಪಕ್ಷದ ಗೀತಾ, ಬಹುಜನ ಸಮಾಜ ಪಾರ್ಟಿಯ ಎಚ್ ಎಸ್ ತಾರೇಶ್, ಕರ್ನಾಟಕ ರಾಷ್ಟ್ರೀಯ ಪಕ್ಷದ ಬಿ ಕೆ ನಾಗರಾಜ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಎಚ್ ಡಿ ರೇವಣ್ಣ ಹಾಗೂ ಪಕ್ಷೇತರ ಅಭ್ಯರ್ಥಿ ಡಿ ಆರ್ ರಂಗಸ್ವಾಮಿ ಸೇರಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
  • ಅರಕಲಗೂಡು: ಬಿಜೆಪಿಯಿಂದ ಎಚ್ ಯೋಗಾರಮೇಶ್, ಕಾಂಗ್ರೆಸ್ ಪಕ್ಷದ ಎಚ್ ಪಿ ಶ್ರೀಧರ್‌ಗೌಡ, ಜೆಡಿಎಸ್ ಎ ಮಂಜು, ಆಮ್ ಆದ್ಮಿ ಪಕ್ಷದ ಜಿ ಟಿ ಜವರೇಗೌಡ, ಬಿಎಸ್‌ಪಿಯ ಎ ಪಿ ಹರೀಶ್, ಕೆಆರ್‌ಎಸ್‌ನ ಕೇಶವಮೂರ್ತಿ ಎಚ್ ಟಿ, ಭಾರತೀಯ ಡಾ. ಬಿ ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ, ಉತ್ತಮ ಪ್ರಜಾಕೀಯ ಪಕ್ಷದ ಜಿ ಆರ್ ಶಿವರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ಎಂ ಟಿ ಕೃಷ್ಣೇಗೌಡ, ಪುಟ್ಟರಾಜ, ಬಿ ಆರ್ ಪುನೀತ್, ವಿಜಯ ಭಾರತಿ, ಎಂ ಸಿ ವಿಶ್ವನಾಥ, ಎಂ ಆರ್ ಶಿವಣ್ಣ, ಶ್ರೀನಿವಾಸ್ ಸೇರಿ ಒಟ್ಟು 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಸಕಲೇಶಪುರ: ಬಿಜೆಪಿಯಿಂದ ಸಿಮೆಂಟ್ ಮಂಜು (ಎಸ್ ಮಂಜುನಾಥ) ಕಾಂಗ್ರೆಸ್‌ನಿಂದ ಮುರಳಿ ಮೋಹನ್, ಜೆಡಿಎಸ್ ಎಚ್ ಕೆ ಕುಮಾರಸ್ವಾಮಿ, ಆಮ್ ಆದ್ಮಿ ಪಕ್ಷದ ಕೆ ಎಸ್ ಪವನ್ ಕುಮಾರ್, ಬಿಎಸ್‌ಪಿಯಿಂದ ಡಿ ಶಿವಮ್ಮ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಬಿ ವಿ ಪ್ರದೀಪ್, ಕರುನಾಡ ಪಾರ್ಟಿಯ ಎಚ್ ಎಸ್ ಕುಮಾರಸ್ವಾಮಿ, ಉತ್ತಮ ಪ್ರಜಾಕೀಯ ಪಕ್ಷದ ಪ್ರತಾಪ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಜಿ ಸಿ ರವಿ, ಎಂ ಆರ್ ವೇಣು ಸೇರಿ ಒಟ್ಟು 10 ಮಂದಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ನಾಮಪತ್ರ ಹಿಂಪಡೆಯದಂತೆ ಕೃಷ್ಣೇಗೌಡ ಬೆಂಬಲಿಗರ ಒತ್ತಾಯ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...