ಕಂದಾಯ ಇಲಾಖೆ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ವೆಚ್ಚ ಕಡಿತದ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಟಿಪ್ಪಣೆ ಹೊರಡಿಸಿರುವ ಸಚಿವ ಕೃಷ್ಣಭೈರೇಗೌಡ ಅವರು, “ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಇಲಾಖಾ ವತಿಯಿಂದ ನಾನಾ ಹಂತಗಳಲ್ಲಿ ಸಭೆ ಸಮಾರಂಭಗಳನ್ನು ನಿಯಮಿತವಾಗಿ ಏರ್ಪಡಿಸಲಾಗುತ್ತದೆ. ಕಂದಾಯ ಇಲಾಖೆಯಡಿ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು” ಎಂದು ಸೂಚಿಸಿದ್ದಾರೆ.
- ಆಡಂಬರ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಸಭೆ ಸಮಾರಂಭಗಳನ್ನು ಸರಳವಾಗಿ ನಡೆಸುವುದು. ಅನಗತ್ಯವಾಗಿ ಹಾರ, ನೆನಪಿನ ಕಾಣಿಕೆ ನೀಡದೇ, ಅವಶ್ಯವಿದ್ದಲ್ಲಿ ತ್ರಿವರ್ಣ ಖಾದಿ ಹತ್ತಿಯ ಹಾರವನ್ನು ಮಾತ್ರ ಬಳಸುವುದು.
- ಸಭೆ ಸಮಾರಂಭಗಳಲ್ಲಿ ಆತಿಥ್ಯಕ್ಕೆ, ಔಪಚಾರಿಕತೆಗೆ ಸಮಯ ವ್ಯರ್ಥ ಮಾಡದೇ, ಔಪಚಾರಿಕತೆಗೆ ಸಮಯವನ್ನು ಮಿತವಾಗಿರಿಸಿ, ಸಭೆ ಸಮಾರಂಭದ ಮೂಲ ವಿಷಯಕ್ಕೆ ಹೆಚ್ಚಿನ ಸಮಯ ಒದಗಿಸುವುದು.
- ಕುಡಿಯುವ ನೀರಿಗೆ ಬಳಸಿ ಬಿಸಾಡುವಂತ ಪ್ಲಾಸ್ಟಿಕ್ ಬಾಟಲ್, ಕಪ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಿ, ಮರುಬಳಕೆ ಮಾಡುವ ಬಾಟಲ್, ಕಪ್‌ಗಳನ್ನು ಉಪಯೋಗಿಸುವುದು. ನೀರನ್ನು 20 ಲೀ, ಕ್ಯಾನ್ ಮುಖಾಂತರ ಖರೀದಿಸಿ, ಮರುಬಳಕೆ ಮಾಡಲಾಗುವ ಬಾಟಲ್‌ಗಳಲ್ಲಿ ನೀಡುವುದು.
ಈ ಸುದ್ದಿ ಓದಿದ್ದೀರಾ? ಮೈಷುಗರ್ ಸಕ್ಕರೆ ಕಾರ್ಖಾನೆಗೆ ವಿದ್ಯುತ್ ಪೂರೈಸಲು ಒತ್ತಾಯ: ಇಂಧನ ಸಚಿವರಿಗೆ ದಿನೇಶ್ ಗೂಳಿಗೌಡ ಪತ್ರ