ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ, ಸ್ಥಗಿತ ಎಂಬುದು ಸುಳ್ಳು: ಲಕ್ಷ್ಮಿ ಹೆಬ್ಬಾಳ್ಕರ್​

Date:

  • ನೋಂದಣಿ ಕಾರ್ಯ ಸ್ಥಗಿತ ಆಗಿದೆ ಅಂತಾ ಕೇಳಿ ನನಗೆ ಆಶ್ಚರ್ಯ ಆಗಿದೆ
  • ‘ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ​ ಕ್ರಮ ಆಗಲಿದೆ’

‘ಗೃಹಲಕ್ಷ್ಮೀ’ ಯೋಜನೆಯ ನೋಂದಣಿ ಕಾರ್ಯ ಸ್ಥಗಿತ ಆಗಿದೆ ಅಂತಾ ಕೇಳಿ ನನಗೆ ಆಶ್ಚರ್ಯ ಆಗಿದೆ. ತಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರ ಕರೆದು ಮಾತನಾಡಿದ್ದು, ಅತಾಚುರ್ಯದಿಂದ ನಮ್ಮ ಇಲಾಖೆಯಿಂದ ಟ್ವೀಟ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ​ ಕ್ರಮ ಆಗಲಿದೆ. ಏಕೆ ಆ ರೀತಿ ಆಯ್ತು ಗೊತ್ತಾಗುತ್ತಿಲ್ಲ. ಟ್ವೀಟ್​ ಸಂಬಂಧ ಎಲ್ಲರಿಗೂ ನೋಟಿಸ್​ ಜಾರಿ ಮಾಡಿದ್ದೇವೆ” ಎಂದರು.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇಂದು ಟ್ವೀಟ್​ ಮಾಡಲಾಗಿತ್ತು. ಯೋಜನೆ ಸ್ಥಗಿತ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಇಲಾಖೆ ಅಧಿಕಾರಿಗಳು ಟ್ವೀಟ್ ಡಿಲೀಟ್​ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪಾದಕರ ಬಾಯಿ ಬಡಿಯುವುದು ವಿಕಟ ವಿಡಂಬನೆ 

ನಿರಂತರವಾಗಿ ನಡೆಯುವ ಯೋಜನೆ

“ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ. ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಆಗಿದೆ. ಬ್ಯಾಂಕ್​ನಿಂದ ಮಾತ್ರ ಹಣ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತದೆ. ನಿಧಾನವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗುತ್ತಿದೆ. ಫಲಾನುಭವಿಗಳಿಗೆ ನಮ್ಮ ಇಲಾಖೆಯಿಂದ ಹಣ ಕಳುಹಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೂ ಲಾಭ ಸಿಗಲಿದೆ” ಎಂದು ಹೇಳಿದರು.

“1.8 ಕೋಟಿ ರೂ. ಅಕೌಂಟ್​​ಗೆ ಇಲ್ಲಿಯವರೆಗೆ ಹಣ ಡಿಬಿಟಿ ಪ್ರೊಸೆಸ್ ಆಗಿದೆ. ಅದರಲ್ಲಿ 63 ಲಕ್ಷ ರೂ. ಅಕೌಂಟ್​ಗೆ ಹಣ ತಲುಪಿ ಆಗಿದೆ. ಬ್ಯಾಂಕ್​ನಿಂದ ಮಾತ್ರ ಹಣ ನಿಧಾನ ಆಗಿದೆ. ನಮ್ಮಿಂದ ಹಣ ಈಗಾಗಲೇ ವರ್ಗಾವಣೆ ಆಗಿದೆ. ಸರ್ಕಾರದಿಂದ ಯಾವುದೇ ತೊಂದರೆ ಆಗಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಹಣ ಎಲ್ಲರಿಗೂ ವರ್ಗಾವಣೆ ಆಗಲಿದೆ. 1.28 ಕೋಟಿ ಯಜಮಾನಿಯರಿಗೆ ಹಣ ಹೋಗಲಿದೆ. ಹೊಸದಾಗಿ ನೋಂದಣಿ ಆದವರಿಗೂ ಯೋಜನೆ ಲಾಭ ಸಿಗಲಿದೆ” ಏಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಾರ್ಖಾನೆಯ ಹಾರುವ ಬೂದಿ ನಿಯಂತ್ರಣಕ್ಕೆ ರೈತರ ಆಗ್ರಹ

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ...

ವಿಜಯಪುರ | ಲೋಕಸಭೆ ಚುನಾವಣೆ ಕಾಂಗ್ರೆಸ್ ಪರ ಹೆಜ್ಜೆ ಗುರುತಾಗಲಿದೆ: ಸಚಿವ ಎಂ.ಬಿ ಪಾಟೀಲ್

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯ ಮತ್ತು ದೇಶದೆಲ್ಲೆಡೆ ಭರ್ಜರಿ ಯಶಸ್ಸು...

ಚಿತ್ರದುರ್ಗ | ಯಡಿಯೂರಪ್ಪ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ: ಶಾಸಕ ಚಂದ್ರಪ್ಪ

ರಘು ಚಂದನ್‌ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ...