ಕಾಂಗ್ರೆಸ್‌ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆವರೆಗೂ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ

Date:

  • ‘ಒಂದೇ ಪಕ್ಷದ ಮೈತ್ರಿ ಸರ್ಕಾರದಂತೆ ಕಾಂಗ್ರೆಸ್ ಕಾಣಿಸುತ್ತಿದೆ’
  • ‘ಆರ್‌ಎಸ್‌ಎಸ್‌, ಬಜರಂಗದಳ ಬ್ಯಾನ್ ಮಾಡುವ ಅಧಿಕಾರ ಇಲ್ಲ’

ಕಾಂಗ್ರೆಸ್‌ನ ದುರಹಂಕಾರ ಮತ್ತು ದ್ವೇಷದ ಆಡಳಿತದ ಆಯಸ್ಸು ಕೇವಲ ಲೋಕಸಭಾ ಚುನಾವಣೆಯವರೆಗೂ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, “ರಾಜ್ಯದಲ್ಲಿ ನೂತನವಾಗಿ ಸರ್ಕಾರ ರಚನೆ ಆಗಿದೆ. 8 ಶಾಸಕರು ಸಚಿವರಾಗಿದ್ದಾರೆ. ಆ ಸಚಿವರು ಮಾತನಾಡುವುದನ್ನು ನೋಡಿದರೆ, ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿದ್ದಾರೆ. ಅಭಿವೃದ್ಧಿಗಿಂತ ಸೇಡು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ, ಅದನ್ನು ಎದರಿಸಲು ನಾವು ಸಿದ್ದರಿದ್ದೇವೆ” ಎಂದರು.

ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ವಾಕ್ ಸ್ವಾತಂತ್ರ್ಯವಿದೆ. ರಾಜಕೀಯ ಟೀಕೆ ಮಾಡಿದರೆ ಕೇಸ್ ಹಾಕುತ್ತೇವೆ ಎನ್ನುತ್ತಿದ್ದೀರಿ. ಪ್ರತಿ ನಿತ್ಯ ಕೇಸ್ ಹಾಕಲಾಗುತ್ತಿದೆ. ಅಶ್ವತ್ಥನಾರಾಯಣ, ಹರಿಶ್ ಪೂಂಜಾ ಮೇಲೆ ಕೇಸ್ ಹಾಕಿದ್ದಾರೆ. ಇದು ಒಂದು ದುರಹಂಕಾರದ ಆಡಳಿತ, ದ್ವೇಷದ ಆಡಳಿತ. ದಮನಕಾರಿ ಆಡಳಿತ ಪ್ರಾರಂಭದಲ್ಲೇ ಮಾಡಿದ್ದಾರೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಇವರಲ್ಲಿದೆ. ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರ್‌ಎಸ್‌ಎಸ್‌, ಬಜರಂಗದಳ ಬ್ಯಾನ್ ಮಾಡುವ ಅಧಿಕಾರ ಇಲ್ಲ

“ಆರ್‌ಎಸ್‌ಎಸ್‌ ಬಜರಂಗದಳ ಬ್ಯಾನ್ ಬಗ್ಗೆ ಹೇಳುತ್ತಾರೆ. ಅವರಿಗೆ ನಾವು ಸವಾಲು ಹಾಕುತ್ತೇನೆ. ದಯವಿಟ್ಟು ಅವರು ಬ್ಯಾನ್ ಮಾಡಿ ತೋರಿಸಲಿ. ಯಾವುದೇ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡುವ ಅಧಿಕಾರ ಇವರಿಗಿಲ್ಲ. ಅದನ್ನು ಮಾಡುವುದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ಕೂಡ ತುಷ್ಟೀಕರಣ ರಾಜಕಾರಣ ಮಾಡಲು ಹೊರಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ, ಅವರಿಗೂ ಇವರು ಯಾಮಾರಿಸುತ್ತಿದ್ದಾರೆ” ಎಂದು ಹೇಳಿದರು.

ಈ ಸರ್ಕಾರದ ಆಯಸ್ಸು ಲೋಕಸಭಾ ಚುನಾವಣೆವರೆಗೆ ಮಾತ್ರ

“ರಾಜ್ಯ ಸರ್ಕಾರದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ. ಮೊದಲ ಹಂತದ ಮಂತ್ರಿ ಮಂಡಲಕ್ಕೆ ರಾತ್ರಿ ಮೂರೂವರೆಗೂ ಹಗ್ಗಜಗ್ಗಾಟ ಮಾಡಿದರು. ಈಗ ಎರಡನೇ ಹಂತದ ಪೈಪೋಟಿ ನಡೆದಿದೆ. ಇದನ್ನೆಲ್ಲ ನೋಡಿದ್ರೆ, ಇದು ಸಮ್ಮಿಶ್ರ ಸರ್ಕಾರ ಇದ್ದಂತಿದೆ.‌ಕಳೆದ ಬಾರಿ ಎರಡು ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಇತ್ತು. ಆ ಸರ್ಕಾರದ್ದು ಅಧಿಕಾರ ಕಳೆದ ಲೋಕಸಭೆವರೆಗೂ ಇತ್ತು. ಹಾಗೇ ಇವಾಗ ಒಂದೇ ಪಕ್ಷ ಇದ್ದರೂ, ಎರಡು ಪಕ್ಷಗಳ ರೀತಿ ಸಮ್ಮಿಶ್ರ ಸರ್ಕಾರ ಇದೆ. ಇದರ ಆಯಸ್ಸು ಕೂಡ ಬರುವ ಲೋಕಸಭೆ ಚುನಾವಣೆವರೆಗೆ ಇರುತ್ತದೆ” ಎಂದರು.

“ರಾಜ್ಯದಲ್ಲಿನ ಟೆಂಡರ್‌ಗಳೆನ್ನಲ್ಲ ನಿಲ್ಲಿಸಿದ್ದಾರೆ. ಇದರ ಬಗ್ಗೆ ನಮಗೆ ಯೋಚನೆ ಇಲ್ಲ. ಆದರೆ ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿಲ್ಲ. ವ್ಯವಸ್ಥೆ ಎನ್ನುವುದು ರಾಜ್ಯದ ಜನರ ಪರವಾಗಿ ಇರಬೇಕು. ಕನಿಷ್ಠ ಜನರಿಗೆ ಬೇಕಾಗುವ ಕೆಲಸ ಕಾರ್ಯಗಳಿಗೆ ತೊಂದರೆ ಆಗಬಾರದು. ಚುನಾಯಿತ ಸರ್ಕಾರದ ಮುಂದೆ ಜನರ ಸಮಸ್ಯೆಗಳಿವೆ. ಸಮಸ್ಯೆಗಳ ಬಗೆಹರಿಸಲು ತುರ್ತಾದ ನಿರ್ಣಯ ಎಲ್ಲೂ ಕಾಣುತ್ತಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಅದನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಿ ಎಂಬ ಸೂಚನೆ ಸಿಎಂ ಅವರಿಂದಲೂ ಹೋಗಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ರಾಷ್ಟ್ರಹಿತದ ನೆಪದಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವೇ? ವಾಸ್ತವ ಏನು ಹೇಳುತ್ತದೆ?

ಗ್ಯಾರಂಟಿಗಳಿಗೆ ಕಂಡಿಷನ್; ಜನರನ್ನು ಯಾಮಾರಿಸುವ ಕೆಲಸ

ಗ್ಯಾರಂಟಿಗಳ ಬಗ್ಗೆ ಜನರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ‌, “ಜನ ಸ್ವಯಂಪ್ರೇರಿತವಾಗಿ ತೀರ್ಮಾನ ಮಾಡುತ್ತಿದ್ದಾರೆ. ಅವರ ಪರವಾಗಿ ನಾವು ನಿಲ್ಲಬೇಕಾಗುತ್ತದೆ. ಎರಡನೇ ಕ್ಯಾಬಿನೆಟ್‌ವರೆಗೂ ಅವರು ಯಾಕೆ ಕಾಯಬೇಕು. ಎಲ್ಲಾ ಮಹಿಳೆಯರಿಗೆ ನೀಡುತ್ತೇವೆ ಎಂದಿದ್ದರು. ಇಂದು ಕಂಡಿಷನ್ ಅಂತಿದ್ದಾರೆ; ಯಾಕೆ ಎನ್ನುತ್ತಿದ್ದಾರೆ.
ಇದು ಕೇವಲ ಜನರನ್ನು ಯಾಮಾರಿಸುವ ಕೆಲಸ‌. ತಮಿಳುನಾಡಿನಿಂದ ಬಂದವರಿಗೆ ಹೇಗೆ ಗುರುತಿಸುತ್ತಾರೆ. ಒಲ್ಲದ ಗಂಡನಿಗೆ ನೂರಾರು ಕುಂಟು ನೆಪ ಎನ್ನುವ ಹಾಗೆ ಕಾಂಗ್ರೆಸ್ ಕಥೆಯಾಗಿದೆ” ಎಂದು ಟೀಕಿಸಿದರು.

ವಿರೋಧ ಪಕ್ಷದ ನಾಯಕ ವಿಚಾರ; ಕಾಂಗ್ರೆಸ್‌ಗೆ ಬೊಮ್ಮಾಯಿ‌ ಉತ್ತರ

ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ನಮ್ಮ ಬಗ್ಗೆ ಅವರಿಗೆ ಯಾಕೆ ಇಷ್ಟು ಚಿಂತೆ? ಅವರನ್ನು ಜನರು ಗೆಲ್ಲಿಸಿದ್ದಾರೆ. ಮೊದಲು ಅವರು ಜನರ ಕೇಳುತ್ತಿರುವ ಬೇಡಿಕೆ ಈಡೇರಿಸಲಿ. ವಿರೋಧ ಪಕ್ಷದ ನಾಯಕ ನೇಮಕ ಯಾವಾಗ ಮಾಡಬೇಕು ಎಂದು ನಮಗೆ ಗೊತ್ತಿದೆ. ಬರುವ ಅಸೆಂಬ್ಲಿ ಒಳಗೆ ವಿರೋಧ ಪಕ್ಷದ ನಾಯಕ ಯಾರೆಂದು ಆಯ್ಕೆ ಆಗುತ್ತದೆ. ಹೀಗಾಗಿ ನಮ್ಮ ಬಗ್ಗೆ ಬಿಡಿ, ನೀವು ನಿಮ್ಮ ಕೆಲಸ ಮಾಡಿ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?

ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು...

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಚಿಕ್ಕಬಳ್ಳಾಪುರ | ಏಪ್ರಿಲ್‌ 20ರಂದು ಪ್ರಧಾನಿ ಮೋದಿ ಆಗಮನ

ಏಪ್ರಿಲ್‌ 20ರ ಶನಿವಾರ 3 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಬಳಿ...