ಲೋಕಸಭೆ ದಾಳಿ | ‘ಕಲರ್ ಸ್ಮೋಕ್’ನ ಸ್ಟಿಕ್ ತೋರಿಸಲು ಕಿತ್ತಾಡಿಕೊಂಡ ಪತ್ರಕರ್ತರು!

Date:

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳಗೆ ನುಗ್ಗಿ ‘ಕಲರ್ ಸ್ಮೋಕ್’ ಬರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಲೋಕಸಭೆಯ ಒಳಗಡೆ ‘ಕಲರ್ ಸ್ಮೋಕ್’ ಬರಿಸಿದ್ದಕ್ಕೆ ಸಂಬಂಧಿಸಿ ಮೈಸೂರು ಮೂಲದ ಮನೋರಂಜನ್ ಡಿ ಹಾಗೂ ಸಾಗರ್ ಶರ್ಮಾ ಎಂಬುವವರನ್ನು ಬಂಧಿಸಿದರೆ, ಲೋಕಸಭೆಯ ಹೊರಗಡೆ ಪ್ರತಿಭಟನೆ ನಡೆಸಿದ ಅಮೋಲ್ ಶಿಂಧೆ ಹಾಗೂ ನೀಲಂ ಎಂಬುವವರನ್ನು ಬಂಧಿಸಲಾಗಿದೆ.

“ಈ ಸರ್ಕಾರ ಸರ್ವಾಧಿಕಾರಿಯಾಗಿದ್ದು ನಮ್ಮ ಮಾತು ಕೇಳುತ್ತಿಲ್ಲ. ನಿರುದ್ಯೋಗಿಗಳಾಗಿದ್ದೇವೆ. ಅದಕ್ಕಾಗಿಯೇ ನಾವು ಈ ಮಾರ್ಗವನ್ನು ಆರಿಸಿಕೊಂಡಿದ್ದೇವೆ” ಎಂದು ಲೋಕಸಭೆಯ ಹೊರಗಡೆ ‘ಕಲರ್ ಸ್ಮೋಕ್’ ಬರಿಸಿ ಯುವತಿ ನೀಲಂ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ಈ ಸರ್ಕಾರ ಸರ್ವಾಧಿಕಾರಿ, ನಮ್ಮ ಮಾತು ಕೇಳುತ್ತಿಲ್ಲ: ಲೋಕಸಭೆಯ ದಾಳಿ ಬಳಿಕ ಯುವತಿ ನೀಲಂ ಹೇಳಿಕೆ

‘ಕಲರ್ ಸ್ಮೋಕ್’ ವಸ್ತು ತೋರಿಸಲು ಜಗಳಾಡಿಕೊಂಡ ಪತ್ರಕರ್ತರು: ವಿಡಿಯೋ ವೈರಲ್

ಲೋಕಸಭೆಯ ಹೊರಗಡೆ ಪ್ರತಿಭಟನೆ ನಡೆಸಿದ್ದ ವೇಳೆ ಅಮೋಲ್ ಶಿಂಧೆ ಹಾಗೂ ನೀಲಂ ‘ಕಲರ್ ಸ್ಮೋಕ್’ ಬರಿಸಿ ಘೋಷಣೆ ಕೂಗುತ್ತಿದ್ದರು. ಕೂಡಲೇ ಅವರನ್ನು ಪೊಲೀಸರು ವಿಚಾರಣೆ ನಡೆಸಲು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ ಕಲರ್ ಸ್ಮೋಕ್‌ನ ಅವಶೇಷವನ್ನು ತೋರಿಸಲು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರು ನೇರಪ್ರಸಾರದಲ್ಲೇ ಜಗಳಾಡಿಕೊಂಡ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲಾಗಿದೆ.

‘ಕಲರ್ ಸ್ಮೋಕ್’ ವಸ್ತುವನ್ನು ಮೊದಲು TV9 ಹಿಂದಿ ಚಾನೆಲ್‌ನ ವರದಿಗಾರ ಮನೀಷ್ ಎಂಬುವವರು ಕೈಯಲ್ಲಿ ಹಿಡಿದು ಕ್ಯಾಮೆರಾಕ್ಕೆ ತೋರಿಸುತ್ತಿದ್ದಂತೆಯೇ, ಬಂದ ಇನ್ನೋರ್ವ ಪತ್ರಕರ್ತ ಕಸಿಯಲು ಯತ್ನಿಸಿದ್ದಾನೆ. ಇದೇ ವೇಳೆ ನಾಲ್ಕೈದು ಪತ್ರಕರ್ತರೂ ದಾಳಿ ನಡೆಸಿದ್ದಾರೆ. ಈ ಗುಂಪಿನಲ್ಲಿ ನ್ಯೂಸ್‌ 18 ಸಂಸ್ಥೆಯ ಪತ್ರಕರ್ತೆ ಪಲ್ಲವಿ ಘೋಷ್ ಕೂಡ ಸೇರಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಗಂಭೀರ ಪ್ರಕರಣವಾದಾಗಲೂ ‘ನಮ್ಮಲ್ಲೇ ಮೊದಲು ತೋರಿಸುವ ಹಪಾಹಪಿಗೆ ಪತ್ರಿಕೋದ್ಯಮ ಬಡವಾಗುತ್ತಿದೆ. ಇದು ಗೋದಿ ಮೀಡಿಯಾಗಳ ಇಂದಿನ ಅವಸ್ಥೆ. ನಾಚಿಕೆಯಾಗಬೇಕು’ ಎಂದು ನೆಟ್ಟಿಗರು ವಿಡಿಯೋ ಹಂಚಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲೂ ಕೂಡ ಸೆರೆಹಿಡಿದಿದ್ದು, ಪತ್ರಕರ್ತರ ಅವಸ್ಥೆಗೆ ಬಿದ್ದು ಬಿದ್ದು ನಗಾಡಿದ್ದಾರೆ.

ವಿಡಿಯೋ ವೈರಲಾದ ಬಳಿಕ ಟ್ವೀಟ್ ಮಾಡಿರುವ ಪಲ್ಲವಿ ಘೋಷ್, “ಇದರಲ್ಲಿ ನಾಚಿಕೆಯಾಗುವಂಥದ್ದೇನಿಲ್ಲ. ಗ್ರೌಂಡ್‌ನಲ್ಲಿ ಕೆಲಸ ಮಾಡಲು ಬನ್ನಿ, ಆಗ ಗೊತ್ತಾಗುತ್ತದೆ ಎಷ್ಟು ಕಷ್ಟ ಇದೆ ಎಂಬುದು” ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಲೆಯೇರಿಕೆ, ನಿರುದ್ಯೋಗ, ರೈತರ ಬಗ್ಗೆ ಪ್ರಧಾನಿ ಮೋದಿ ತುಟಿಯೇ ಬಿಚ್ಚಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆಯೇ ಮಾಡುವುದಿಲ್ಲ. ಕೇವಲ...

ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು...

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...

ರಣಹೇಡಿ ನಾನಲ್ಲ, ಗಿಫ್ಟ್ ಕೂಪನ್ ಕೊಡುವವರು ರಣಹೇಡಿಗಳು: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್...