ಥೈಲ್ಯಾಂಡ್, ಶ್ರೀಲಂಕಾ ಬಳಿಕ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಮಲೇಷ್ಯಾ ಅನುಮತಿ

Date:

ಥೈಲ್ಯಾಂಡ್, ಶ್ರೀಲಂಕಾ ದೇಶಗಳ ನಂತರ ಈಗ ಮಲೇಷ್ಯಾ ಕೂಡ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದೆ. ಡಿಸೆಂಬರ್ 1 ರಿಂದ ಭಾರತ ಮತ್ತು ಚೀನಾದ ನಾಗರಿಕರಿಗೆ 30 ದಿನಗಳ ವೀಸಾ-ಮುಕ್ತ ಪ್ರವೇಶ ನೀಡಲು ಪ್ರಾರಂಭಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಟರ್ಕಿ ಮತ್ತು ಜೋರ್ಡಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳು ಮತ್ತು ಇತರ ಪಶ್ಚಿಮ ಏಷ್ಯಾದ ದೇಶಗಳ ಪ್ರಜೆಗಳಿಗೆ ಈಗಾಗಲೇ ವೀಸಾ ವಿನಾಯಿತಿ ನೀಡಲಾಗಿದ್ದು, ಈಗ ಭಾರತ ಮತ್ತು ಚೀನಾವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.

“ಆದಾಗ್ಯೂ, ವೀಸಾ ವಿನಾಯಿತಿಯು ಉನ್ನತ ಭದ್ರತಾ ಪರಿಶೀಲನೆಯನ್ನು ಒಳಪಟ್ಟಿರುತ್ತದೆ. ಮಲೇಷ್ಯಾಕ್ಕೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ಪ್ರಾಥಮಿಕ ಪರಿಶೀಲನೆಗಳನ್ನು ನಡೆಸಲಾಗುವುದು. ಭದ್ರತೆಗೆ ಒಳಪಟ್ಟಂತೆ ಕ್ರಿಮಿನಲ್ ದಾಖಲೆಗಳು ಅಥವಾ ಭಯೋತ್ಪಾದನೆಯ ಅಪಾಯವಿದ್ದರೆ, ಅಂತಹವರನ್ನು ದೇಶದೊಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಇದು ಭದ್ರತಾ ಪಡೆಗಳು ಮತ್ತು ವಲಸೆಯ ಅಧಿಕಾರದ ಅಡಿಯಲ್ಲಿ ಬರುತ್ತದೆ ”ಎಂದು ಪ್ರಧಾನಿ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು

ಸಾಮಾಜಿಕ ಭೇಟಿಗಳು, ಪ್ರವಾಸೋದ್ಯಮ ಮತ್ತು ವ್ಯಾಪಾರದ ಉದ್ದೇಶಕ್ಕಾಗಿ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಪ್ರಸ್ತುತ ಎಂಟು ಆಸಿಯಾನ್ ದೇಶಗಳು ನೀಡುತ್ತಿವೆ.

ಮಲೇಷ್ಯಾವು ಪ್ರಸ್ತುತ 16.1 ಮಿಲಿಯನ್ ರಿಂಗಿಟ್(ಚಲಾವಣೆಯ ನಾಣ್ಯ) ಪ್ರವಾಸೋದ್ಯಮ ಉದ್ಯಮ ಹೊಂದಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದಿಂದ 49.3 ಬಿಲಿಯನ್ ರಿಂಗಿಟ್ ಉದ್ಯಮವನ್ನು ಗುರಿಯಾಗಿಸಿಕೊಂಡಿದೆ.

ಮಲೇಷ್ಯಾಕ್ಕೆ ಆಗಮಿಸುವ ಪ್ರವಾಸಿಗ ಅಗ್ರ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು, 2022 ರಲ್ಲಿ, ಒಟ್ಟು 3,24,548 ಭಾರತೀಯ ಪ್ರವಾಸಿಗರು ಮಲೇಷ್ಯಾಕ್ಕೆ ಭೇಟಿ ನೀಡಿದ್ದರು. 2023 ರ ಮೊದಲ ಎರಡು ತ್ರೈಮಾಸಿಕದಲ್ಲಿ, ಮಲೇಷ್ಯಾಕ್ಕೆ 1,64,566 ಭಾರತೀಯರು ಭೇಟಿ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿನಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ನಿಮ್ಮ ಜಾಹೀರಾತಿನಷ್ಟು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ: ರಾಮ್‌ದೇವ್‌ಗೆ ಸುಪ್ರೀಂ ತರಾಟೆ

ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರಂತರವಾಗಿ ಪತಂಜಲಿ ಸಂಸ್ಥಾಪಕರಾದ...

ಸಕ್ಕರೆ ಪ್ರಮಾಣ ಹೆಚ್ಚಳ: ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ ಎಂದ ತಿಹಾರ್ ಜೈಲಿನ ಅಧಿಕಾರಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದ...

ಲೋಕಸಭಾ ಚುನಾವಣೆ | ಈವರೆಗೆ ಸ್ಪರ್ಧೆಯೇ ಇಲ್ಲದೆ ಗೆದ್ದಿದ್ದಾರೆ 35 ಅಭ್ಯರ್ಥಿಗಳು 

ಈ ಬಾರಿಯ ಲೋಕಸಭಾ ಚುನವಣೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್...

ಮುಸ್ಲಿಮರು, ಕಾಂಗ್ರೆಸ್ ಬಗ್ಗೆ ದ್ವೇಷ ಭಾಷಣ: ಮೋದಿ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

ಮುಸ್ಲಿಮರು ಮತ್ತು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ದ್ವೇಷ...