ಪ್ರಜಾಪ್ರಭುತ್ವ, ಸತ್ಯ ಉಳಿಸುವಲ್ಲಿ ಮಾಧ್ಯಮ ವಿಫಲವಾದ್ರೆ ಮುಂದೇನು?

Date:

ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವನ್ನು ಪರಿಗಣಿಸಲಾಗುತ್ತದೆ. ಆದರೆ, ನಾವು ಕಳೆದ ಒಂದು ದಶಕದ ವಿದ್ಯಮಾನವನ್ನು ಗಮನಿಸಿದಾಗ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆಯುತ್ತಿರುವುದು ಸ್ಪಷ್ಟವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ಮಾಧ್ಯಮಗಳು ಯಾವುದೋ ಒಂದು ಪಕ್ಷದ ದಾಳವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಮಾಧ್ಯಮದ ವೈಫಲ್ಯವನ್ನು ಇತ್ತೀಚೆಗೆ ಸಿಜೆಎಆರ್‌ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಒತ್ತಿ ಹೇಳಿದ್ದಾರೆ. ಮಾಧ್ಯಮವೇ ವಿಫಲವಾಗಿರುವಾಗ ನಮ್ಮ ಮುಂದಿನ ಸ್ಥಿತಿಯೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ

“ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸತ್ಯವನ್ನು ರಕ್ಷಿಸುವಲ್ಲಿ ಮಾಧ್ಯಮ ವಿಫಲವಾಗಿದೆ. ನಾಲ್ಕನೇ ಸ್ತಂಭವಾದ ಮಾಧ್ಯಮ ದೇಶವನ್ನು ವಿಫಲಗೊಳಿಸಿರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ತಂದಿದೆ” ಎಂದು ಅವರು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾವು ಈ ಸಮಾವೇಶ ಆರಂಭ ಮಾಡುವುದಕ್ಕೂ ಮುನ್ನ ಕೆಲವು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೆವು. ಆದರೆ, ಈ ವಿಚಾರಗಳು ನಮ್ಮ ಇಂದಿನ ಮಾಧ್ಯಮದಲ್ಲಿ ಬರುತ್ತಾ? ಒಂದೆರಡು ಖಾಸಗಿ ಚಾನೆಲ್‌ಗಳನ್ನು ಬಿಟ್ಟು ಯಾವುದೇ ಮಾಧ್ಯಮಗಳು ಇಂದಿನ ನೈಜ ವಿಚಾರಗಳನ್ನು ಸುದ್ದಿ ಮಾಡದೆ ಇರುವುದು ಶೋಚನೀಯ ಸ್ಥಿತಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮಾಧ್ಯಮಗಳು ಯಾವುದೇ ಸತ್ಯ ವಿಷಯವನ್ನು ಭಯವಿಲ್ಲದೆ, ಹೇಗಿದೆಯೋ ಹಾಗೆಯೇ ಪ್ರಸಾರ ಮಾಡುವುದನ್ನು ನಾವೀಗ ನೋಡೋದು ಸಾಧ್ಯವಿಲ್ಲ. ನಾಲ್ಕನೇ ಸ್ತಂಭವೆಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದು ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಏಟು ನೀಡಿದೆ, ದೇಶವನ್ನು ವಿಫಲಗೊಳಿಸಿದೆ” ಎಂದು ನಿವೃತ್ತ ನ್ಯಾಯಮೂರ್ತಿ ಹೇಳಿದರು.

“ಮೊದಲ ಮೂರು ಸ್ತಂಭಗಳನ್ನು ಬಿಡಿ. ನಾಲ್ಕನೇ ಸ್ತಂಭವಾದ ಮಾಧ್ಯಮವೇ ಪ್ರಜಾಪ್ರಭುತ್ವ ರಕ್ಷಿಸುವ ವಿಚಾರದಲ್ಲಿ ವಿಫಲವಾಗಿದೆ, ಸಂವಿಧಾನ ರಕ್ಷಿಸುವುದರಲ್ಲಿ ವಿಫಲವಾಗಿದೆ, ಸತ್ಯವನ್ನು ಸಮರ್ಥನೆ ಮಾಡುವುದರಲ್ಲಿ ಮಾಧ್ಯಮ ಮಿತ್ರರು ವಿಫಲವಾಗಿದ್ದಾರೆ” ಎಂದು ನ್ಯಾಯಮೂರ್ತಿ ಜೋಸೆಫ್ ಅಸಮಾಧಾನ ವ್ಯಕ್ತಪಡಿಸಿದರು.

“whistle-blowers ಎಂದು ಕರೆಯಲಾಗುವ ದೇಶದ ಸಾಮಾಜಿಕ ಕಾರ್ಯಕರ್ತರನ್ನು ಜೋಸೆಫ್ ಸಂವಿಧಾನದ ಐದನೇ ಅಂಗ ಎಂದು ಕರೆದ ನಿವೃತ್ತ ನ್ಯಾಯಾಧೀಶರು ಪ್ರಸ್ತುತ ನಮಗೆ ಇರುವ ಒಂದೇ ಒಂದು ಭರವಸೆ ಈ ಸಾಮಾಜಿಕ ಕಾರ್ಯಕರ್ತರು ಎಂದರು. ಆದರೆ ಏನು ಮಾಡುವುದು ದೇಶದ ಸಮಸ್ಯೆಯನ್ನು ಎತ್ತಿ ಸಿಳ್ಳೆ ಹೊಡೆದು ಹೇಳುವ ಈ ಸಾಮಾಜಿಕ ಕಾರ್ಯಕರ್ತರಿಗೆ ಈಗ ಕೋವಿಡ್‌ನಿಂದ ಶ್ವಾಸಕೋಶದ ತೊಂದರೆ ಆಗಿರುವ ಹಾಗಿದೆ. ಅವರು ಮಾತನಾಡದಂತೆ ಮಾಡಿರುವುದು ಈ ದೇಶಕ್ಕೆ ದೊಡ್ಡ ಅಪಾಯ ತಂದಿದೆ” ಎಂದು ಹೇಳಿದರು.

“ಹಾಗಿರುವಾಗ ನಾವು ಅಳಿದುಳಿರುವ ಈ ಸಾಮಾಜಿಕ ಕಾರ್ಯಕರ್ತರ ಪರವಾಗಿ ನಿಲ್ಲಬೇಕು, ಅವರಿಗೆ ಸಹಾಯ ಮಾಡಬೇಕು. ನಾವು ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಈಗ ನಮ್ಮ ದೇಶಕ್ಕೆ ಅವರು ಮಾತ್ರ ಏಕೈಕ ಭರವಸೆ ಆಗಿರುವುದು” ಎಂದು ನ್ಯಾಯಾಧೀಶ ಕುರಿಯನ್ ಜೋಸೆಫ್ ಅಭಿಪ್ರಾಯಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರರಿಗೆ ಗುರುತಿನ ಚೀಟಿ: ಸುಪ್ರೀಂ ಪ್ರಶ್ನೆಗೆ ಅಪಾಯದ ಕೆಲಸ ಎಂದ ಚುನಾವಣಾ ಆಯೋಗ

ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಸಲು ಚುನಾವಣೆ ಪ್ರಕ್ರಿಯೆಯಲ್ಲಿ ಪಾವಿತ್ರತೆ...

ಪಶ್ಚಿಮ ಬಂಗಾಳ ರಾಜ್ಯಪಾಲದ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ರಾಜ್ಯದಲ್ಲಿ ಲೋಕಸಭಾ ಚುನಾವಣಾ ನಡೆಯುವ ಹಿನ್ನೆಲೆ ಮಧ್ಯಪ್ರದೇಶ ಮಾಡುತ್ತಿರುವ ಪಶ್ಚಿಮ ಬಂಗಾಳ...

ಬಿಟ್‌ಕಾಯಿನ್ ಹಗರಣ| ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್‌ಕುಂದ್ರಾಗೆ ಸೇರಿದ ಬರೋಬ್ಬರಿ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ನಟಿ ಶಿಲ್ಪಾ ಶೆಟ್ಟಿ...

ತೆಲಂಗಾಣ | ಕೇಸರಿ ಉಡುಪು ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಲೆ ಮೇಲೆ ದಾಳಿ

ವಿದ್ಯಾರ್ಥಿಗಳು ಕೇಸರಿ ಉಡುಪು ಧರಿಸಿದ್ದನ್ನು ಪ್ರಾಂಶುಪಾಲರು ಪ್ರಶ್ನಿಸಿದ ನಂತರ ಗುಪೊಂದು ಶಾಲೆಯ...