ಒಂದೇ ದಿನ 5 ಕೋಟಿ ದಾಟಿದ ಮೆಟಾದ ‘ಥ್ರೆಡ್ಸ್’ ಬಳಕೆದಾರರು | ಟ್ವಿಟರ್‌ನಿಂದ ಬೆದರಿಕೆ

Date:

  • ಜುಲೈ 6ರಂದು ಮೆಟಾದಿಂದ ಥ್ರೆಡ್ಸ್‌ ಅಪ್ಲಿಕೇಶನ್‌ ಬಿಡುಗಡೆ
  • ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ಟ್ವಿಟರ್‌ ಬೆದರಿಕೆ ಪತ್ರ

ಮೆಟಾ ಸಂಸ್ಥೆಯ ಥ್ರೆಡ್ಸ್ ಅಪ್ಲಿಕೇಶನ್‌ ಟ್ವಿಟರ್‌ ಸಂಸ್ಥೆಯ ಪ್ರತಿಸ್ಪರ್ಧಿ ಎಂತಲೇ ಬಿಂಬಿತವಾಗಿದ್ದು ಬಿಡುಗಡೆಯಾದ 24 ಗಂಟೆಗಳಲ್ಲಿ 5 ಕೋಟಿ ಬಳಕೆದಾರರನ್ನು ದಾಟಿದೆ. ಆದರೆ ಈ ಅಪ್ಲಿಕೇಶನ್‌ ಈಗ ಟ್ವಿಟರ್‌ನಿಂದ ಕಾನೂನು ಬೆದರಿಕೆ ಎದುರಿಸುವಂತಾಗಿದೆ.

ಗುರುವಾರ ಈ ಮೆಟಾದ ಥ್ರೆಡ್ಸ್‌ ಅಪ್ಲಿಕೇಶನ್‌ ಬಿಡುಗಡೆಯಾಗಿತ್ತು. ಇದು ತನ್ನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಟ್ವಿಟರ್‌ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದೆ.

ಥ್ರೆಡ್ಸ್‌ ಒಡೆತನ ಹೊಂದಿರುವ ಮೆಟಾದ ಸಿಇಒ ಮಾರ್ಕ್‌ ಜುಕರ್‌ಬರ್ಗ್ ಅವರು ಕಾನೂನುಬಾಹಿರವಾಗಿ ಟ್ವಿಟರ್‌ನ ವ್ಯಾಪಾರಿ ರಹಸ್ಯಗಳು ಮತ್ತು ಇತರ ಬೌದ್ಧಿಕ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎಲಾನ್‌ ಮಸ್ಕ್‌ ಅವರ ವಕೀಲ ಅಲೆಕ್ಸ್‌ ಸುಪಿರೊ ಅವರು ಜುಕರ್‌ಬರ್ಗ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಪತ್ರಿಕೆ ಸಮಾಫೋರ್‌ ವರದಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮೆಟಾ ಸಂಸ್ಥೆಯು ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ನ ವ್ಯಾಪಾರಿ ರಹಸ್ಯಗಳು ಮತ್ತು ಇತರ ಗೋಪ್ಯ ಮಾಹಿತಿಗಳು ತಿಳಿದಿರುವ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

“ಥ್ರೆಡ್ಸ್‌ ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ ವ್ಯಾಪಾರಿ ತಂತ್ರಗಳನ್ನು ಬಳಸುವುದನ್ನು ಮೆಟಾ ಸಂಸ್ಥೆ ಈ ಕೂಡಲೇ ನಿಲ್ಲಿಸಬೇಕು” ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಮೇಕೆದಾಟು ಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಸಚಿವ

ಮೆಟಾದ ಅಪ್ಲಿಕೇಶನ್‌ಗೆ ಸಂಬಂಧಿಸಿ ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದು, “ಸ್ಪರ್ಧೆ ಒಳ್ಳೆಯದು ಆದರೆ ಮೋಸ ಸಲ್ಲ” ಎಂದು ಹೇಳಿದ್ದಾರೆ.

“ಥ್ರೆಡ್ಸ್‌ ಅಪ್ಲಿಕೇಶನ್‌ ನಿರ್ವಹಿಸುವ ಎಂಜಿನಿಯರಿಂಗ್‌ ತಂಡದಲ್ಲಿ ಯಾರೊಬ್ಬರೂ ಟ್ವಿಟರ್‌ ಮಾಜಿ ಉದ್ಯೋಗಿಯಿಲ್ಲ” ಎಂದು ಟ್ವಿಟರ್‌ ಆರೋಪಕ್ಕೆ ಮೆಟಾ ವಕ್ತಾರ ಆಂಡಿ ಸ್ಟೋನ್ ಪ್ರತಿಕ್ರಿಯಿಸಿದ್ದಾರೆ.

ಥ್ರೆಡ್ಸ್‌ ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ನಲ್ಲಿ ಇರುವಂತೆ ಸಂದೇಶ ಬರೆದು ಲಿಂಕ್‌ ಜೊತೆಗೆ ಹಂಚಿಕೊಳ್ಳಬಹುದು. ಅಲ್ಲದೆ ಇತರರ ಸಂದೇಶಗಳಿಗೆ ಇದರಲ್ಲಿ ಪ್ರತಿಕ್ರಿಯೆಗಳನ್ನು ನೀಡಬಹುದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ

ಗುಜರಾತ್‌ನ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳಲ್ಲಿ 8 ನಾಯಕರ ಭಾವಚಿತ್ರಗಳಿವೆ ಎಂದು...

ಪಶ್ಚಿಮ ಬಂಗಾಳ| ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಪೂರ್ವ ಯೋಜಿತ ಎಂದ ಮಮತಾ

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪೋರ್ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು...

ಮತದಾರರಿಗೆ ಗುರುತಿನ ಚೀಟಿ: ಸುಪ್ರೀಂ ಪ್ರಶ್ನೆಗೆ ಅಪಾಯದ ಕೆಲಸ ಎಂದ ಚುನಾವಣಾ ಆಯೋಗ

ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಸಲು ಚುನಾವಣೆ ಪ್ರಕ್ರಿಯೆಯಲ್ಲಿ ಪಾವಿತ್ರತೆ...

ಪಶ್ಚಿಮ ಬಂಗಾಳ ರಾಜ್ಯಪಾಲದ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ರಾಜ್ಯದಲ್ಲಿ ಲೋಕಸಭಾ ಚುನಾವಣಾ ನಡೆಯುವ ಹಿನ್ನೆಲೆ ಮಧ್ಯಪ್ರದೇಶ ಮಾಡುತ್ತಿರುವ ಪಶ್ಚಿಮ ಬಂಗಾಳ...