ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ವಿಶ್ರಾಂತ ಕುಲಪತಿ, ಹಿಂದೂಸ್ಥಾನಿ ಸಂಗೀತಗಾರ ಹಾಗೂ ಲೇಖಕ ಹನುಮಣ್ಣ ನಾಯಕ (69) ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪ್ರೊ.ಹನುಮಣ್ಣ ನಾಯಕ ದೊರೆ ಅವರು ಕೆಲ ಕಾಲದಿಂದ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ನಿಧನರಾದರು.
ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಪುತ್ರರು, ಪುತ್ರಿ ಇದ್ದಾರೆ.
ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್
ಹನುಮಣ್ಣ ಅವರು ಕೆಲ ಕಾಲ ಕಲಬುರಗಿಯ ಡಾ.ಶರಣಬಸವಪ್ಪ ಅಪ್ಪ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು.
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಹಂಪಿ ಕನ್ನಡ ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ಹನುಮಣ್ಣ ಅವರನ್ನು ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿಕೊಂಡಿದ್ದರು. ನಂತರ ಹನುಮಣ್ಣ
ಅವರು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಕುಲಪತಿಯಾಗಿದ್ದರು. ಅವಧಿ ಮುಗಿದ ಬಳಿಕ ಹಂಪಿ ವಿವಿಗೆ ವಾಪಸಾಗಿ ಅಲ್ಲಿಯೇ ಕೆಲಸದಿಂದ ನಿವೃತ್ತರಾಗಿದ್ದರು.
ಶುಕ್ರವಾರ ಸಂಜೆ ಸ್ವಗ್ರಾಮ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.