ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌-ವೇ ಟೋಲ್‌ ದರ ಮತ್ತೆ ಹೆಚ್ಚಳ

Date:

ಒಂದಿಲ್ಲ ಒಂದು ಕಾರಣಕ್ಕೆ ಪದೇಪದೆ ಸುದ್ದಿಯಲ್ಲಿರುವ ಮೈಸೂರು-ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌-ವೇ ಈಗ ಮತ್ತೊಮ್ಮೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಟೋಲ್‌ ದರವನ್ನು ಮತ್ತೆ ಹೆಚ್ಚಳ ಮಾಡಿದ್ದು, ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಶೇ.22ರಷ್ಟು ಏರಿಕೆ ಮಾಡಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಫಾಸ್ಟ್ ಟ್ಯಾಗ್ ಇರುವ ಕಾರಣ ವಾಹನ ಸವಾರರ ಗಮನಕ್ಕೂ ಬಾರದೇ ಹಣ ವಸೂಲಿ ಮಾಡಲಾಗುತ್ತಿದೆ.

ಹಿಂದೆ ಏ. 1ರಿಂದ ಅನ್ವಯವಾಗುವಂತೆ ಎಕ್ಸ್‌ಪ್ರೆಸ್‌-ವೇ ಟೋಲ್‌ ಶುಲ್ಕವನ್ನು ಕನಿಷ್ಟ ₹35ರಿಂದ ಗರಿಷ್ಠ ₹305 ಹೆಚ್ಚಿಸಿ ಎನ್ಎಚ್ಎಐ ಆದೇಶ ಹೊರಡಿಸಿತ್ತು. ಮಾ. 14ರಿಂದ ಈ ಹೆದ್ದಾರಿಯಲ್ಲಿ ಶುಲ್ಕ ಸಂಗ್ರಹಿಸಲು ಆರಂಭಿಸಲಾಗಿದ್ದು, ಕೇವಲ 17 ದಿನಗಳಲ್ಲೇ ಶುಲ್ಕವನ್ನು ಪರಿಷ್ಕಕರಿಸಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗಾಗಿ ಟೋಲ್ ಹೆಚ್ಚಳ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ ಪಡೆದುಕೊಂಡಿತ್ತು. ಆದರೆ, ಈ ಆದೇಶವನ್ನು ಕೇವಲ 3 ತಿಂಗಳ ಅವಧಿಗೆ ಮಾತ್ರ ಹಿಂಪಡೆದು, ಮೂರು ತಿಂಗಳ ನಂತರ ಪುನಃ ಈ ಆದೇಶ ಜಾರಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಮೂರು ತಿಂಗಳಿಗೆ ಮುನ್ನವೇ ಟೋಲ್ ದರ ಮತ್ತೆ ಹೆಚ್ಚಳ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ‘ಹಾಡುಪಾಡು’ ರಾಮು ಖ್ಯಾತಿಯ ಹಿರಿಯ ಪತ್ರಕರ್ತ ಟಿಎಸ್ ರಾಮಸ್ವಾಮಿ ನಿಧನ

ಯಾವ ವಾಹನಕ್ಕೆ ಎಷ್ಟು ಶುಲ್ಕ ಹೆಚ್ಚಳ?

  • ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ₹135 ರಿಂದ ₹165ಕ್ಕೆ ಏರಿಕೆ (30 ರೂ ಹೆಚ್ಚಳ)
  • ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಏರಿಕೆ(50ರೂ ಹೆಚ್ಚಳ)
  • ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹460 ರಿಂದ ₹565ಕ್ಕೆ ಏರಿಕೆ.(105 ಹೆಚ್ಚಳ)
  • 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ₹ 500 ರಿಂದ ₹615ಕ್ಕೆ ಏರಿಕೆ (115 ರೂ ಹೆಚ್ಚಳ)
  • ಭಾರಿ ವಾಹನಗಳ ಏಕಮುಖ ಸಂಚಾರ ₹ 720ರಿಂದ ₹885ಕ್ಕೆ ಏರಿಕೆ (165 ಹೆಚ್ಚಳ)
  • 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಎಕಮುಖ ಸಂಚಾರ ₹880ರಿಂದ ₹1,080ಕ್ಕೆ ಏರಿಕೆ (₹200 ಹೆಚ್ಚಳ)

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್...

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...