ನಿತೀಶ್ ‘ಇಂಡಿಯಾ’ದಲ್ಲೇ ಇದ್ದರೆ ಪ್ರಧಾನಿಯಾಗಬಹುದಿತ್ತು: ಅಖಿಲೇಶ್ ಯಾದವ್

Date:

ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಬಿಹಾರ ರಾಜಕೀಯದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದಲ್ಲೇ ಬಲವಾಗಿ ನಿಂತಿದ್ದರೆ ಪ್ರಧಾನಿಯಾಗಬಹುದಿತ್ತು ಎಂದು ಹೇಳಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ ಅಖಿಲೇಶ್ ಯಾದವ್, ”ಒಕ್ಕೂಟದಲ್ಲಿ ಪ್ರಧಾನಿ ಹುದ್ದೆಗೆ ಯಾರನ್ನು ಬೇಕಾದರೂ ಪರಿಗಣಿಸಬಹುದು. ನಿತೀಶ್ ಕುಮಾರ್ ಅವರು ಸರಿಯಾದ ಬೆಂಬಲದೊಂದಿಗೆ ಸ್ಪರ್ಧಿಯಾಗಬಹುದಿತ್ತು ಎಂದು ಸೂಚಿಸುತ್ತದೆ” ಎಂದು ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳ ವಿದ್ಯಮಾನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ ನಿತೀಶ್ ಅವರು ಬಿಜೆಪಿ ಬೆಂಬಲದೊಂದಿಗೆ ಸೇರಿ ಜ.28ರಂದು 9ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ

ನಿತೀಶ್ ಬಿಜೆಪಿಯೊಂದಿಗೆ ಸೇರಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, ಜೆಡಿಯು ಮುಖ್ಯಸ್ಥರು ಇಂಡಿಯಾ ಒಕ್ಕೂಟದಲ್ಲಿ ಪ್ರಮುಖ ಜವಾಬ್ದಾರಿ ತೆಗೆದುಕೊಂಡು ಒಕ್ಕೂಟ ಸರ್ಕಾರವನ್ನು ರಚಿಸಬೇಕು. ಟಿಎಂಸಿ ಹಾಗೂ ಎಎಪಿ ಒಕ್ಕೂಟದಲ್ಲಿ ಅತೃಪ್ತಿ ವ್ಯಕ್ತಪಡಿಸಿರುವ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮುಂದೆ ಬರಬೇಕಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪ್ರಚಾರಕ್ಕೆ ತೆರಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಅಂತಹ ಸಹಯೋಗವು ಕಾರ್ಯರೂಪಕ್ಕೆ ಬರುತ್ತದೆಯೆ ಎಂದು ಕಾಲ ಮಾತ್ರ ತಿಳಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಅಖಿಲೇಶ್, ಬದಲಿಗೆ ಪ್ರಾದೇಶಿಕ ಪಕ್ಷಗಳು ಗಣನೀಯ ಶಕ್ತಿ ಹೊಂದಿರುವ ಪಕ್ಷಗಳಿಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಮ ಮಂದಿರವನ್ನು ಬಿಜೆಪಿ ರಾಜಕೀಯಕರಣಗೊಳಿಸುತ್ತಿದ್ದು, ತಾವು ಲೋಕಸಭಾ ಚುನಾವಣೆಯ ನಂತರ ಸೂಕ್ತ ಸಮಯದಲ್ಲಿ ಅಯೋಧ್ಯೆಗೆ ತೆರಳುವುದಾಗಿ ಅಖಿಲೇಶ್ ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಿಪ್ಯಾಟ್ ಪರಿಶೀಲನಾ ಗುರುತಿನ ಚೀಟಿ, ಮತಪತ್ರ ಚುನಾವಣಾ ಪ್ರಕ್ರಿಯೆಗೆ ಸುಪ್ರೀಂ ತಿರಸ್ಕಾರ

ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ...

ಗೌಪ್ಯತೆಯ ಬದ್ದತೆ ಮುರಿಯಲು ಒತ್ತಾಯಿಸಿದರೆ ಭಾರತವನ್ನೇ ತೊರೆಯುತ್ತೇವೆ: ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಚ್‌ ಎನ್‌ಕ್ರಿಪ್ಶನ್‌) - ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ...

ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್...

2025ರ ವೇಳೆಗೆ ಬಿಜೆಪಿ ಮೀಸಲಾತಿ ರದ್ದುಪಡಿಸಲಿದೆ: ತೆಲಂಗಾಣ ಸಿಎಂ ಆರೋಪ

ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ...