ಮತ್ತೊಂದು ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಹಾಗೂ ಪತ್ನಿಗೆ 14 ವರ್ಷ ಜೈಲು

Date:

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ನ್ಯಾಯಾಲಯ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಹಾಗೂ ಪತ್ನಿ ಬುಶ್ರಾ ಬಿಬಿ ಅವರಿಗೆ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ರಾಷ್ಟ್ರೀಯ ಚುನಾವಣೆಗಳಿಗೆ ಕೆಲವು ದಿನಗಳು ಇರುವಾಗ ತೀರ್ಪು ಪ್ರಕಟವಾಗಿದ್ದು, ನಿನ್ನೆಯಷ್ಟೆ ದೇಶದ ರಹಸ್ಯ ಸೋರಿಕೆ ಪ್ರಕರಣದಲ್ಲಿ ಇಮ್ರಾನ್ ಖಾನ್‌  ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

“ನಮ್ಮ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಮತ್ತೊಂದು ಕರಾಳ ದಿನವಾಗಿದ್ದು, ಇದು ಛಿದ್ರವಾಗಿದೆ” ಎಂದು ಇಮ್ರಾನ್‌ ಅವರ ಪಿಟಿಐ ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಗಸ್ಟ್‌ನಿಂದ ಬಂಧನಕ್ಕೊಳಗಾಗಿರುವ ಇಮ್ರಾನ್‌ ಖಾನ್‌ ಅವರ ಶಿಕ್ಷೆಗಳನ್ನು ಏಕಕಾಲದಲ್ಲಿ ವಿಧಿಸಬೇಕೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೂ ಪತ್ನಿಯೊಂದಿಗೆ ನಡೆದ ವಿಚಾರಣೆಯಲ್ಲಿ ಇಮ್ರಾನ್‌ ಅವರಿಕೆ ಶಿಕ್ಷೆ ವಿಧಿಸಲಾಗಿದೆ. ಇಮ್ರಾನ್ ಸದ್ಯ ಶಿಕ್ಷೆ ಅನುಭವಿಸುತ್ತಿದ್ದು,ಪತ್ನಿ ಬುಶ್ರಾ ಬಿಬಿಯನ್ನು ಬಂಧಿಸಲಾಗಿಲ್ಲ ಎಂದು ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.

ಇಮ್ರಾನ್‌ ಖಾನ್ ಹಾಗೂ ಬಿಬಿ 2018ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುವ ಮುನ್ನ ವಿವಾಹವಾಗಿದ್ದರು. ಬಿಬಿ ಆಧ್ಯಾತ್ಮ ಪರಿಣಿತಳಾಗಿದ್ದು, ಧಾರ್ಮಿಕ ಮಾರ್ಗದರ್ಶನ ನೀಡುವ ಸಂದರ್ಭದಲ್ಲಿ ಭೇಟಿಯಾಗಿ ನಂತರ ವಿವಾಹವಾಗಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್

ಫೆ.08ರಂದು ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆಗಳು ನಡೆಯಲಿದ್ದು 12 ಕೋಟಿಗೂ ಹೆಚ್ಚು ಮಂದಿ ಮತ ಚಲಾಯಿಸಲಿದ್ದಾರೆ. ಇಮ್ರಾನ್‌ ಖಾನ್ ಹಾಗೂ ಪಿಟಿಐ ಪಕ್ಷ ಪ್ರಚಾರದಿಂದ ಹೊರಗುಳಿದಿದ್ದರೂ ಚುನಾವಣೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.

ಇಮ್ರಾನ್‌ ಖಾನ್ ಅವನ್ನು ಚುನಾವಣೆಯಿಂದ ನಿಷೇಧಿಸಲಾಗಿದ್ದು, ಅವರ ಪಕ್ಷ ಪಿಟಿಐ ಪಕ್ಷವನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಆದಾಗ್ಯೂ ಚುನಾವಣೆಯ ಮತಯಂತ್ರದಲ್ಲಿ ಈಗಾಗಲೇ ದುರುಪಯೋಗ ಆರೋಪ ಕೇಳಿಬಂದಿದೆ.

ಇವೆಲ್ಲದರ ನಡುವೆಯೂ ಅನ್ಯಾಯದ ವಿರುದ್ಧ ಫೆ.08ರಂದು ತಮ್ಮ ಪಕ್ಷಕ್ಕೆ ಮತದಾನ ಮಾಡಿ ಸೇಡು ತೀರಿಸಿಕೊಳ್ಳುವಂತೆ ಇಮ್ರಾನ್‌ ಮತದಾರರಿಗೆ ಮನವಿ ಮಾಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾ | ಭಯೋತ್ಪಾದಕರಿಂದ ಭೀಕರ ಗುಂಡಿನ ದಾಳಿ: 40ಕ್ಕೂ ಅಧಿಕ ಮಂದಿ ಮೃತ್ಯು; 100ಕ್ಕೂ ಹೆಚ್ಚು ಜನರಿಗೆ ಗಾಯ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ನಾಲ್ಕೈದು ಮಂದಿ ಭಯೋತ್ಪಾದಕರು...

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ನಾಪತ್ತೆ

ಅಮೆರಿಕಾದ ಕ್ಲೀವ್‌ಲ್ಯಾಂಡ್‌ನಲ್ಲಿ ಮಾರ್ಚ್‌ 7 ರಂದು ಕಾಣೆಯಾಗಿದ್ದ 25 ವರ್ಷದ ಭಾರತೀಯ...

ತಾನು ಗೆಲ್ಲದಿದ್ದರೆ ‘ರಕ್ತಪಾತ’ದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಓಹಿಯೋದಲ್ಲಿ ನಡೆದ ರ್‍ಯಾಲಿಯಲ್ಲಿ...

ಭಾರತದಲ್ಲಿ ಸಿಎಎ ಅನುಷ್ಠಾನ: ಕಳವಳ ವ್ಯಕ್ತಪಡಿಸಿದ ಅಮೆರಿಕ

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಿರುವ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದ್ದು,...