ಮತದಾನದ ದಿನ ಕೋಚ್ ಬೆಹರ್‌ಗೆ ತೆರಳದಂತೆ ಬಂಗಾಳ ರಾಜ್ಯಪಾಲರಿಗೆ ಚುನಾವಣಾ ಆಯೋಗ ಸಲಹೆ

Date:

ಮತದಾನದ ದಿನದಂದು ಕೋಚ್‌ ಬೆಹರ್‌ ಜಿಲ್ಲೆಗೆ ತೆರಳದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ಅವರಿಗೆ ಚುನಾವಣಾ ಆಯೋಗವು ಮನವಿ ಮಾಡಿದೆ.

ಕೋಚ್‌ ಬೆಹರ್‌ ಲೋಕಸಭಾ ಕ್ಷೇತ್ರದಲ್ಲಿ ಏ.19ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏ.18 ಹಾಗೂ ಏ.19ರಂದು ಅಲ್ಲಿನ ಪ್ರದೇಶಕ್ಕೆ ತೆರಳದಂತೆ ಸಲಹೆ ನೀಡಿದೆ.

ವರದಿಯ ಪ್ರಕಾರ ರಾಜ್ಯಪಾಲರ ಉದ್ದೇಶಿತ ಪ್ರವಾಸವು ಮಾದರಿ ನೀತಿ ಸಂಹಿತೆಯ ಹಿಂಸಾತ್ಮಕ ಪ್ರದೇಶವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

ಮೊದಲ ಹಂತ ಮತದಾನ ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಸಂಜೆಯಿಂದ 48 ಗಂಟೆಗಳ ಕಾಲ ಮೌನದ ಅವಧಿಯಾಗಿರುತ್ತದೆ. ಮೌನದ ಅವಧಿಯಲ್ಲಿ ಮತದಾನ ನಡೆಯುವುದಕ್ಕೂ ಮುನ್ನ ರಾಜಕೀಯ ಪಕ್ಷಗಳಿಗೆ ಪ್ರಚಾರಗಳನ್ನು ನಿಷೇಧಿಸಲಾಗಿರುತ್ತದೆ.

ಮಾದರಿ ನೀತಿ ಸಂಹಿತೆಯಡಿ ರಾಜ್ಯಪಾಲರು ಉದ್ದೇಶಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳೀಯ ಕಾರ್ಯಕ್ರಮಗಳಿಗೆ ತೆರಳಬಾರದು. ಆಯೋಗವು ಪೂರ್ಣ ಜಿಲ್ಲಾ ಆಡಳಿತದಲ್ಲಿ ಏ.18 ಮತ್ತು ಏ.19 ರ ಅವಧಿಯಲ್ಲಿ ಪೂರ್ಣ ಪೊಲೀಸ್ ಪಡೆಯನ್ನು ನಿಯೋಜಿಸಿರುತ್ತದೆ ಎಂದು ತಿಳಿಸಲಾಗಿದೆ.

ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳಿಗೆ ಏ.19 ರಿಂದ ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...