ಬೀದರ್‌ | ಸ್ವಪಕ್ಷಿಯರ ಷಡ್ಯಂತ್ರದ ನಡುವೆಯೂ ಗೆದ್ದು, ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್‌!

Date:

  • ಬಿಜೆಪಿ ಕೇಂದ್ರ ಸಚಿವ ಭಗವಂತ ಖುಬಾ ವಿರುದ್ಧ ಗಂಭೀರ ಆರೋಪ
  • ‘ತನ್ನನ್ನು ಸೋಲಿಸಲು ಕೇಂದ್ರ ಸಚಿವ ಕಾಂಗ್ರೆಸ್‌ ಅಭ್ಯರ್ಥಿಗೆ ನೆರವು’

ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌ ಗೆಲುವು ಸಾಧಿಸಿದ್ದು, ಮಾಧ್ಯಮಗಳ ಮುಂದೆ ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಔರಾದ್‌ ಕ್ಷೇತ್ರದಿಂದ ಪ್ರಭು ಚೌಹಾಣ್‌ 2008ರಿಂದ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಭೀಮಸೇನ ರಾವ್ ಸಿಂಧೆ ಮತ್ತು ಜೆಡಿಎಸ್‌ ಅಭ್ಯರ್ಥಿ ಜೈಸಿಂಗ್‌ ರಾಥೋಡ ಅವರನ್ನು ಮಣಿಸಿ, ನಾಲ್ಕನೇ ಗೆಲುವು ಕಂಡಿದ್ದಾರೆ.

ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭು ಚೌಹಾಣ್‌, ಬಿಜೆಪಿ ಕೇಂದ್ರ ಸಚಿವ ಭಗವಂತ ಖುಬಾ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನನನ್ನು ಸೋಲಿಸಬೇಕು ಎಂದು ಸ್ವಪಕ್ಷದ ಕೇಂದ್ರ ಸಚಿವ ಭಗವಂತ ಖುಬಾ ಕುತಂತ್ರ ಮಾಡಿದ್ದರು” ಎಂದು ಕಣ್ಣೀರು ಹಾಕಿದರು.

“ಹೆತ್ತ ತಾಯಿಗೆ ಮೋಸ ಮಾಡುವ ಕೆಲಸವನ್ನು ಭಗವಂತ ಖುಬಾ ಮಾಡಿದ್ದರು. ನನ್ನನ್ನು ಸೋಲಿಸಬೇಕು ಎಂದು ಮನೆ ಮನೆಗೆ ಹೋಗಿ ಭಗವಂತ ಖುಬಾ ಮತ್ತು ತಂಡ ಪ್ರಚಾರ ಮಾಡಿದ್ದರು. ಔರಾದ್‌ನಲ್ಲಿ 300 ಮಂದಿಯನ್ನು ಬಿಟ್ಟು, ನನ್ನ ಸೋಲಿಸಲು ಕುತಂತ್ರ ಮಾಡಿದ್ದರು. ಆದರೆ, ಔರಾದ್ ಜನ ನನ್ನ ಕೈ ಹಿಡಿದಿದ್ದಾರೆ” ಎಂದರು.

“ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾವೇ ಮುಂದೆ ನಿಂತು ಭಗವಂತ ಖುಬಾ ಗೆಲುವಿಗೆ ಶ್ರಮಿಸಿದ್ದೆವು. ಆದರೆ, ಭಗವಂತ ಖುಬಾ ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡಿದರು ಗೊತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ತವರಲ್ಲೇ ಸಿಎಂ ಬೊಮ್ಮಾಯಿಗೆ ಶಾಕ್!

“ನಾನು ಭಗವಂತ ಖುಬಾ ಅವರಿಗೆ ಏನೂ ಮೋಸ ಮಾಡದೇ ಇದ್ದರೂ, ನನಗೆ ದೋಖಾ ಮಾಡಿದ್ರು. ನನ್ನನ್ನು ಸೋಲಿಸುವ ಸಲುವಾಗಿಯೇ ಭಗವಂತ ಖುಬಾ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಆರ್ಥಿಕ ನೆರವು ನೀಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ ಅವರು, “ನನಗೆ ಬಹಳ ನೋವಾಗಿದೆ” ಎಂದು ಬಿಕ್ಕಿ‌ಬಿಕ್ಕಿ ಅತ್ತರು.

“ನಮ್ಮ‌ ಕಾರ್ಯಕರ್ತರಿಗೆ ಭಗವಂತ ಖುಬಾ ಅವರೆ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅಂತಾರೆ. ಅವರ ವಿರುದ್ಧ ಮುಂದಿನ ಚುನಾವಣೆಯಲ್ಲಿ ನೋಡೊಣ” ಎಂದು ಪ್ರಭು ಚೌಹಾಣ್ ಎಚ್ಚರಿಕೆ ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ; ಪ್ರಾಣಾಪಾಯದಲ್ಲಿ ಮಕ್ಕಳಿಗೆ ಪಾಠ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದಲ್ಲಿ ಇರುವ ಅಂಗನವಾಡಿ ಕೇಂದ್ರವು...

ಬೆಂಗಳೂರು | ಮಾರ್ಚ್​ 28ರಂದು 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು; ಬಿಸಿಗಾಳಿಯ ಮುನ್ಸೂಚನೆ

ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಬಿರು ಬಿಸಿಲಿನ ವಾತಾವರಣ ತುಂಬಿದೆ. ಬೇಸಿಗೆ ಕಾಲ...

ಮಾರ್ಚ್ 30ರಂದು ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ ನಡೆಸಿದ 2023 -24ನೇ...

ಉಡುಪಿ | ನೀತಿ ಸಂಹಿತೆ ಉಲ್ಲಂಘನೆ ಆರೋಪ; ಜಯಪ್ರಕಾಶ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಶಿರ್ವ...