ಅಧಿವೇಶನ ಮುಗಿಯಲು ಕೆಲವೇ ನಿಮಿಷಗಳಿರುವಾಗ ಲೋಕಸಭೆಯಲ್ಲಿ ಪ್ರತ್ಯಕ್ಷರಾದ ಪ್ರಧಾನಿ ಮೋದಿ!

Date:

ಲೋಕಸಭೆಯ ಚಳಿಗಾಲದ ಅಧಿವೇಶನವನ್ನು ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗಿದೆ. ಡಿ.4ರಿಂದ ಆರಂಭಗೊಂಡಿದ್ದ ಡಿ.22ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಡಿ.21ಕ್ಕೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಘೋಷಿಸಿದರು.

ಅಧಿವೇಶನ ಮುಗಿಯಲು ಕೆಲವೇ ನಿಮಿಷಗಳು ಇರುವಾಗ ಲೋಕಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಈ ವೇಳೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023 ರ ಚರ್ಚೆಗೆ ಉತ್ತರಿಸುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಸಂಜೆ 04:02ಕ್ಕೆ ಆಗಮಿಸುತ್ತಿದ್ದಂತೆಯೇ, ಕೂತಿದ್ದ ಆಡಳಿತ ಪಕ್ಷದ ಸಂಸದರು ಎದ್ದು ನಿಂತು, ‘ಜೈಶ್ರೀರಾಮ್, ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದರು. ಪ್ರಧಾನಿಗೆ ಮೋದಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಥ್ ನೀಡಿದರು. ಸಂಜೆ 04:15ಕ್ಕೆ ಲೋಕಸಭೆಯ ಕಲಾಪವನ್ನು ಮುಕ್ತಾಯಗೊಳಿಸಲಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಸದನದಲ್ಲಿ ಮಂಡಿಸಲಾದ ಮಸೂದೆ ಹಾಗೂ ಸಮಯದ ವಿವರಗಳನ್ನು ನೀಡಿದ ನಂತರ, ವಂದೇ ಮಾತರಂ ಗೀತೆಯೊಂದಿಗೆ ಸಮಾರೋಪಗೊಳಿಸಿ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಘೋಷಿಸಿದರು.

ಡಿ.4ರಿಂದ ಆರಂಭಗೊಂಡಿದ್ದ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ಒಂದು ದಿನವೂ ಭಾಗವಹಿಸಿರಲಿಲ್ಲ. ಡಿ.13ರಂದು ಕೆಲ ಯುವಕರು ಲೋಕಸಭೆಯ ಕಲಾಪದ ವೇಳೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ್ದರು.

ಸಂಸತ್‌ನ ಈ ಗಂಭೀರ ಭದ್ರತಾ ಲೋಪ ಪ್ರಕರಣದ ಬಗ್ಗೆ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಹೇಳಿಕೆ ನೀಡುವಂತೆ ಆಗ್ರಹಿಸಿ ಗದ್ದಲ ಎಬ್ಬಿಸಿದ್ದರಿಂದ, ಒಟ್ಟು 146 ಸಂಸದರನ್ನು ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿ ಈ ರೀತಿಯ ಬೆಳವಣಿಗೆ ನಡೆದಿದೆ.

ಸಂಸದರ ಅಮಾನತು ಮಾಡಿರುವುದನ್ನು ಖಂಡಿಸಿ, ದೆಹಲಿಯ ಜಂತ‌ರ್ ಮಂತರ್‌ ಸೇರಿ ದೇಶಾದ್ಯಂತ ನಾಳೆ(ಡಿ.22) ಪ್ರತಿಭಟಿಸಲು ‘ಇಂಡಿಯಾ’ ಮೈತ್ರಿಕೂಟ ಕರೆ ನೀಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಚಾರದಲ್ಲಿ ಸಮೋಸಾ, ಬಿರಿಯಾನಿ ಸೇರಿ ಪ್ರತಿಯೊಂದು ಆಹಾರಕ್ಕೂ ಚುನಾವಣಾ ಆಯೋಗದಿಂದ ದರ ನಿಗದಿ

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಆಹಾರ ಒಳಗೊಂಡ...

ರಮೇಶ್‌ ಕುಮಾರ್‌ ಮತ್ತು ನಾನು ಒಂದಾದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಗೆಲುವು ಖಚಿತ: ಸಚಿವ ಮುನಿಯಪ್ಪ

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ. ಅವರಿಗೂ...

ಕರ್ನಾಟಕದಲ್ಲಿ ಯೋಗಿ ಮಾದರಿ ಸರ್ಕಾರ ಇದ್ದಿದ್ದರೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತಿತ್ತು: ಸಾಹಿತಿ ಎಸ್.ಎಲ್ ಭೈರಪ್ಪ

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲೋದು ಕಷ್ಟ. ಅರ್ಧ...

ಮಣಿಪುರ ಹಿಂಸಾಚಾರ | ಸ್ಥಳಾಂತರಗೊಂಡ ಮತದಾರರಿಗೆ ʼಚುನಾವಣೆʼಗಳು ಅರ್ಥಹೀನ

ಕಳೆದ ವರ್ಷ ಮಣಿಪುರದ ಚುರಾಚಂದ್‌ಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಸ್ಥಳಾಂತರಗೊಂಡ...