ಇಸ್ರೇಲ್‌ಗೆ ಯುದ್ಧ ಸಾಮಗ್ರಿ ನೆರವಿನ ಅಮೆರಿಕ ಹಡಗು ತಡೆದು ನಿಲ್ಲಿಸಿ ಪ್ರತಿಭಟನೆ

Date:

ಹಮಾಸ್ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೇಲ್‌ಗೆ ಎಲ್ಲ ರೀತಿಯ ನೆರವನ್ನು ಅಮೆರಿಕ ನೀಡುತ್ತಿದೆ. ಹೀಗಾಗಿ, ಈ ಸಂಘರ್ಷ ನಿಲ್ಲಿಸುವಂತೆ ಅಮೆರಿಕದಲ್ಲಿ ಪ್ರತಿಭಟನೆಗಳು ಜೋರಾಗುತ್ತಲೇ ಇದೆ.

ಈ ನಡುವೆ ಇಸ್ರೇಲ್‌ಗೆ ನೆರವನ್ನು ನೀಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಮತ್ತು ಇತರೆ ಸಾಮಗ್ರಿಗಳನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿದ್ದ ಅಮೆರಿಕ ಹಡಗು, ಇಸ್ರೇಲ್‌ಗೆ ತೆರಳದಂತೆ ತಡೆದಿರುವ ಯುದ್ಧ ವಿರೋಧಿ ಪ್ರತಿಭಟನಾಕಾರರು, ಹಡಗಿನಲ್ಲಿ ನೇತಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್ ಬಂದರಿನಲ್ಲಿ ಯುದ್ಧ ಸಾಮಗ್ರಿಯೊಂದಿಗೆ ಇಸ್ರೇಲ್‌ಗೆ ತೆರಳಲು ಸಿದ್ಧವಾಗಿದ್ದ ಅಮೆರಿಕ ಸೇನೆಯ ‘ಎಂವಿ ಕೇಪ್ ಓರ್‌ಲ್ಯಾಂಡೋ’ ಹಡಗನ್ನು ತಡೆದ ಪ್ರತಿಭಟನಾಕಾರರು, ಅಮೆರಿಕವು ಗಾಝಾದ ಅಮಾಯಕರನ್ನು ಕೊಲ್ಲಲು ಇಸ್ರೇಲ್‌ಗೆ ನೆರವು ನೀಡುತ್ತಿದೆ. ಹಾಗಾಗಿ, ಇಸ್ರೇಲ್‌ಗೆ ಈ ನೆರವು ಸಿಗಬಾರದು. ಸಂಘರ್ಷ ನಿಲ್ಲಿಸಲು ಅಮೆರಿಕವು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂವರು ಪ್ಯಾಲೆಸ್ತೀನಿಯನ್ ಪರ ಬೆಂಬಲಿಗರು ಹಡಗಿನ ಹಗ್ಗದ ಏಣಿಯನ್ನು ಹಿಡಿದು, ಮಿಲಿಟರಿ ಹಡಗಿನ ಬಾಗಿಲು ಮುಚ್ಚಲು ಕಾರ್ಮಿಕರಿಗೆ ಅವಕಾಶ ನೀಡಲಿಲ್ಲ. ಅಲ್ಲೇ ಸುಮಾರು ಒಂಭತ್ತು ಗಂಟೆಗಳ ಕಾಲ ನಿಂತು ಪ್ರತಿಭಟನೆ ನಡೆಸಿದರು. ಕೆಲವು ಯಹೂದಿ ಯುವಕರು ಕೂಡ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕೋಸ್ಟ್ ಗಾರ್ಡ್ ಸಮಾಲೋಚಕರು ಹಡಗಿನಿಂದ ಹೊರಬರಲು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ನಿರಾಕರಿಸಿದರು.

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಅರಬ್ ರಿಸೋರ್ಸ್ ಆರ್ಗನೈಸಿಂಗ್ ಸೆಂಟರ್ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಈಸ್ಟ್ ಬೇ ಮೂಲದ ಝಿಯೋನಿಸ್ಟ್ ವಿರೋಧಿ ಗುಂಪು ‘ಯಹೂದಿ ವಾಯ್ಸ್ ಫಾರ್ ಪೀಸ್’ ಸಂಘಟನೆಯ ಸದಸ್ಯರು ಕೂಡ ಬೆಂಬಲ ನೀಡಿ, ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. ಸುಮಾರು 200 ಜನರು ಪ್ರತಿಭಟನೆಯ ಸ್ಥಳದಲ್ಲಿ ಭಾಗವಹಿಸಿದ್ದರು. ಹಲವರು ಪ್ಯಾಲೆಸ್ತೀನ್‌ನ ಧ್ವಜಗಳನ್ನು ಹಿಡಿದು, ಇಸ್ರೇಲ್‌ಗೆ ಅಮೆರಿಕ ಮಿಲಿಟರಿ ಸಹಾಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಬೆಳಗ್ಗೆ ಸುಮಾರು 6 ಗಂಟೆಗೆ ಬಂದರಿಗೆ ಆಗಮಿಸಿದ್ದ ಪ್ರತಿಭಟನಾಕಾರರ ಪೈಕಿ, ಮೂವರು ಹಡಗಿಗೆ ಹತ್ತುವ ಏಣಿಗೆ ತಮ್ಮನ್ನು ತಾವೇ ಲಾಕ್ ಮಾಡಿಕೊಂಡರು. ಇದರಿಂದಾಗಿ ಸುಮಾರು ಒಂಭತ್ತು ಗಂಟೆಗಳ ಕಾಲ ನೇತಾಡಿಕೊಂಡೇ ಇದ್ದರು. ಸ್ಥಳೀಯ ಪೊಲೀಸರು ಬಂದು ಮೂವರನ್ನು ವಶಕ್ಕೆ ಪಡೆದ ಬಳಿಕ ಹಡಗು ಬಂದರಿನಿಂದ ತೆರಳಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟಿಸಿದ್ದರಿಂದ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ವರದಿಯಾಗಿದೆ.

ಈ ಹಿಂದೆ ಕೂಡ ಅಂದರೆ 2014 ಮತ್ತು 2021ರಲ್ಲೂ ಕೂಡ ಇದೇ ರೀತಿಯ ಪ್ರತಿಭಟನೆ ನಡೆಸಲಾಗಿತ್ತು. ಇಸ್ರೇಲಿನ ಕಾರ್ಗೋ ಹಡಗನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದರು. ‘ಎಂವಿ ಕೇಪ್ ಓರ್‌ಲ್ಯಾಂಡೋ’ ಹಡಗು ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದ ಸಂದರ್ಭದಲ್ಲೂ ಅಮೆರಿಕ ಬಳಸಿಕೊಂಡಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೈಜೀರಿಯಾ | ಮನೆಗೆ ಮರಳಿದ ಅಪಹರಣಕ್ಕೊಳಗಾಗಿದ್ದ 250 ಶಾಲಾ ಮಕ್ಕಳು

ಮಾರ್ಚ್‌ 7ರಂದು ವಾಯವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಅಪಹರಿಸಿದ್ದ 250ಕ್ಕೂ ಹೆಚ್ಚು ಶಾಲಾ...

ರಷ್ಯಾ | ಕನ್ಸರ್ಟ್ ಹಾಲ್ ಮೇಲೆ ದಾಳಿ; 60 ಮಂದಿ ಸಾವು; 100ಕ್ಕೂ ಹೆಚ್ಚು ಮಂದಿ ಗಾಯ

ರಷ್ಯಾದ ಮಾಸ್ಕೊದಲ್ಲಿ ಕನ್ಸರ್ಟ್‌ ಹಾಲ್‌ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಗುಂಡಿನ...

ರಷ್ಯಾ | ಭಯೋತ್ಪಾದಕರಿಂದ ಭೀಕರ ಗುಂಡಿನ ದಾಳಿ: 40ಕ್ಕೂ ಅಧಿಕ ಮಂದಿ ಮೃತ್ಯು; 100ಕ್ಕೂ ಹೆಚ್ಚು ಜನರಿಗೆ ಗಾಯ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ನಾಲ್ಕೈದು ಮಂದಿ ಭಯೋತ್ಪಾದಕರು...