ದ್ವಿತೀಯ ಪಿಯುಸಿ | ಒಂದೇ ರೀತಿ ಅಂಕ ಗಳಿಸಿದ ಅವಳಿ ಸಹೋದರರು

Date:

  • ಐದು ಮಕ್ಕಳು ಮತ್ತು ಒತ್ತಡ ಜೀವನದ ಮಧ್ಯೆ ಪಿಯುಸಿ ಉತ್ತೀರ್ಣ
  • ಯಾವುತ್ತೂ ಒಟ್ಟಿಗೆ ಕೂತು ಜಂಟಿಯಾಗಿ ಅಭ್ಯಸಿಸಿಲ್ಲ ಎಂದ ಸಹೋದರರು

ಏ.20ರಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ರಾಜ್ಯಕ್ಕೆ ಸಿಹಿ ಉಣಿಸಿದೆ. ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಶೇ.74.67ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿದ್ಯಾರ್ಥಿಗಳ ಜೀವನದ ಎರಡನೇ ಘಟ್ಟದ ಪರೀಕ್ಷೆಯಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿರುವ ಹಲವು ವಿದ್ಯಾರ್ಥಿಗಳ ಜೀವನ ಶೈಲಿ, ಕಲಿಕೆಯ ಹುಮ್ಮಸ್ಸು ತರಹೇವಾರಿ ರೀತಿಯಲ್ಲಿರುತ್ತದೆ ಎಂಬುದಕ್ಕೆ ಎರಡು ಉದಾಹರಣೆ ಇಲ್ಲಿದೆ.

ಕಲಿಕೆ ಪ್ರಕ್ರಿಯೆ ಬೇರೆ – ಫಲಿತಾಂಶ ಒಂದೇ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಬ್ಬರು ಅವಳಿ ಸೋದರರು ಬೆಳೆದ ರೀತಿ ಒಂದೇ ಆಗಿದ್ದರೂ, ಕಲಿಕೆಯ ರೀತಿ ಬೇರೆಯೇ ಆಗಿತ್ತು. ಆದರೂ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಂದೇ ತರನಾದ ಅಂಕಳನ್ನು ಗಳಿಸಿದ್ದಾರೆ. ಇಬ್ಬರೂ ಸಹ 600ಕ್ಕೆ 566 ಅಂಕಗಳಿಸಿರುವುದು ಅಪರೂಪದ ಘಟನೆಯಾಗಿದೆ.

ಅವಳಿ ಸಹೋದರರಾದ ಸರ್ವೇಶ್ ಎನ್‌.ಎನ್ ಮತ್ತು  ಸಂತೋಷ್‌ ಎನ್.ಎನ್‌ ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಆದರೆ, ತಮ್ಮಿಬ್ಬರ ಅಭಿಪ್ರಾಯ, ಕಲಿಕೆ, ಇಷ್ಟಗಳು ಮಾತ್ರ ಕಿಂಚಿತ್ತೂ ಒಂದೇಯಾಗಿರಲಿಲ್ಲ. ಇಬ್ಬರೂ ಎಂದಿಗೂ ಒಟ್ಟಿಗೆ ಕೂತು ಜಂಟಿಯಾಗಿ ಅಭ್ಯಸಿಸಿಲ್ಲ ಎನ್ನುತ್ತಾರೆ ಅವಳಿ ಸಹೋದರರು.

“ಸಂತೋಷ್ ರಾತ್ರಿ ಅಭ್ಯಾಸ ಮಾಡಿದರೆ. ನಾನು ಬೆಳಗಿನ ಸಮಯದಲ್ಲಿ ಓದುತ್ತಿದ್ದೆ. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ರೀತಿಯ ಫಲಿತಾಂಶ ದೊರೆತಿರಲಿಲ್ಲ. ಈ ಬಾರಿ ನಮ್ಮ ಫಲಿತಾಂಶ ಒಂದೇ ರೀತಿ ಬಂದಿರುವುದು ಅಚ್ಚರಿಯ ವಿಷಯವಾಗಿದೆ. ಸದ್ಯ ಇಬ್ಬರು ಸಹ ಬಿಕಾಂಗೆ ಪ್ರವೇಶ ಪಡೆಯಬೇಕೆಂದಿದ್ದೇವೆ” ಎಂದು ಸರ್ವೇಶ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರ ಸಂಭಾವನೆ ಹೆಚ್ಚಳ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾದ ತಾಯಿ-ಮಗಳು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಒಟ್ಟಿಗೆ ಬರೆದು ಉತ್ತೀರ್ಣರಾಗಿದ್ದರು. ಇದೀಗ, ಎರಡು ವರ್ಷದ ಬಳಿಕ, ಮತ್ತೊಮ್ಮೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಬ್ಬರೂ ಒಟ್ಟಿಗೆ ಪಾಸಾಗಿದ್ದಾರೆ. ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದಲ್ಲಿ ಗೀತಾ ಕೆಲಸಮಾಡುತ್ತಿದ್ದಾರೆ. ತಾಯಿ ಮತ್ತು ಮಗಳು – ಇಬ್ಬರು ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದರು.

1993-94ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗೀತ ಅನುತ್ತೀರ್ಣರಾಗಿದ್ದರು. ಹಲವಾರು ಬಾರಿ ಪೂರಕ ಪರೀಕ್ಷೆಗಳನ್ನು ಬರೆದಿದ್ದರು. ಆದರೆ, ಪ್ರತಿ ಬಾರಿಯು ವಿಫಲವಾಗುತ್ತಿತ್ತು. ಕಡೆಗೆ 2021ರಲ್ಲಿ ತನ್ನ ಮಗಳು ಪರೀಕ್ಷೆ ಬರೆಯುವ ಸಮಯದಲ್ಲಿ ತಾನೂ ಪರೀಕ್ಷೆ ಬರೆದಿದ್ದರು. ಆ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿದ್ದರು.

ಅವರು ಐದು ಮಕ್ಕಳ ತಾಯಿಯಾಗಿದ್ದು, ಒತ್ತಡದ ಜೀವನದ ಮಧ್ಯೆ ಅಧ್ಯಯನ ನಡೆಸಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 249 ಅಂಕಗಳನ್ನು ಪಡೆದಿದ್ದಾರೆ. ತಮ್ಮ 44ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿದ್ದಾರೆ. ತ್ರಿಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು 243 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ...

2024-25ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ 29ರಿಂದ ಶಾಲೆಗಳು ಆರಂಭ

2024-25ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು,...

ಏಪ್ರಿಲ್ 3ರಂದೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಎಂಬುದು ಸುಳ್ಳು; ಮತ್ತೆ ಯಾವಾಗಾ? ಇಲ್ಲಿದೆ ಮಾಹಿತಿ

ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ...